Home
ಸುದ್ದಿಜಾಲ

ಕಡಿಮೆ ಬೆಲೆಯಲ್ಲಿ ಹೊಸ Laptop ಖರೀದಿಸಲು ಇದುವೇ ಸರಿಯಾದ ಸಮಯ!

ಕಳೆದ ವರ್ಷ (2023 ರಲ್ಲಿ) ರಿಲಯನ್ಸ್ ಜಿಯೋ ಸಂಸ್ಥೆಯು ಲಾಂಚ್ ಮಾಡಿದ ಜಿಯೋ ಬುಕ್ ( JioBook ) ಲ್ಯಾಪ್‌ಟಾಪ್ ಕೈಗೆಟುಕುವ ಬೆಲೆಯಲ್ಲಿ ಹಾಗೂ ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಭಾರೀ ಗಮನ ಸೆಳದಿತ್ತು. ಇದೀಗ ರಿಲಯನ್ಸ್ ಜಿಯೋ ಕಂಪನಿಯ ಈ ಜಿಯೋ ಬುಕ್ ( JioBook ) ಲ್ಯಾಪ್‌ಟಾಪ್ ಭರ್ಜರಿ ಬೆಲೆ ಇಳಿಕೆ ಪಡೆದಿದ್ದು, ಕಡಿಮೆ ದರದಲ್ಲಿ ಲ್ಯಾಪ್‌ಟಾಪ್‌ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಸಿಹಿಸುದ್ದಿ ನೀಡಿದಂತೆ ಆಗಿದೆ.

ಹೌದು, ರಿಲಯನ್ಸ್ ಜಿಯೋ ಸಂಸ್ಥೆಯ ಜಿಯೋ ಬುಕ್ ( JioBook ) ಲ್ಯಾಪ್‌ಟಾಪ್ ಇದೀಗ ಶೇ. 48% ರಷ್ಟು ನೇರ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. 4GB RAM ಜೊತೆಗೆ 64 eMMC ಆಯ್ಕೆಯ ಈ ಲ್ಯಾಪ್‌ಟಾಪ್‌ ಈಗ 12,890ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಲ್ಯಾಪ್‌ಟಾಪ್ ಅನ್ನು ಗ್ರಾಹಕರು ಅಮೆಜಾನ್‌ (Amazon.in) ತಾಣ ದಿಂದ ಅಥವಾ ರಿಲಯನ್ಸ್ ಡಿಜಿಟಲ್ ಮೂಲಕ ಖರೀದಿ ಮಾಡಬಹುದು.

ಕಡಿಮೆ ಬೆಲೆಯಲ್ಲಿ ಹೊಸ Laptop ಖರೀದಿಸಲು ಇದುವೇ ಸರಿಯಾದ ಸಮಯ!

ಜಿಯೋ ಬುಕ್ ( JioBook ) ಲ್ಯಾಪ್‌ಟಾಪ್ ಡಿವೈಸ್‌ ವಿದ್ಯಾರ್ಥಿಗಳಿಗೆ ಉತ್ತಮ ಸಾಧನ ಎನ್ನಬಹುದಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ 4G ಲ್ಯಾಪ್‌ಟಾಪ್ ಆಗಿದ್ದು, ಮೀಡಿಯಾ ಟೆಕ್ 8788 ಪ್ರೊಸೆಸರ್‌ ಸೌಲಭ್ಯ ಸಹ ಪಡೆದಿದೆ. ಅಲ್ಲದೇ JioOS ಸಪೋರ್ಟ್‌ ಕೂಡಾ ಇದೆ. ಅಂದಹಾಗೆ ಈ ಲ್ಯಾಪ್‌ಟಾಪ್‌ ಹಗುರವಾಗಿದ್ದು, ಜಸ್ಟ್‌ 990 ಗ್ರಾಂ ಪಡೆದಿದೆ. ಹಾಗಾದರೇ ಜಿಯೋಬುಕ್‌ ಲ್ಯಾಪ್‌ಟಾಪ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಜಿಯೋ ಬುಕ್‌ ಪ್ರಮುಖ ಫೀಚರ್ಸ್‌ ಹೀಗಿವೆ

ಜಿಯೋ ಬುಕ್ ( JioBook ) ಲ್ಯಾಪ್‌ಟಾಪ್‌ LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ ಸೌಲಭ್ಯ ಪಡೆದಿದೆ. ಅಲ್ಲದೇ ಇದು 75+ ಕೀ ಬೋರ್ಡ್ ಶಾರ್ಟ್‌ಕಟ್‌ಗಳು ಸೌಲಭ್ಯ ಪಡೆದಿದ್ದು, ಟ್ರ್ಯಾಕ್‌ಪ್ಯಾಡ್ ಸನ್ನೆಗಳು ಆಯ್ಕೆ ಇವೆ. ಸ್ಕ್ರೀನ್ ವಿಸ್ತರಣೆ ಸೌಲಭ್ಯ ಕಾಣಬಹುದಾಗಿದೆ. ಹಾಗೆಯೇ ವೈರ್‌ಲೆಸ್ ಪ್ರಿಂಟಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು ಆಯ್ಕೆ ಕೂಡಾ ಲಭ್ಯ.

ಈ ಲ್ಯಾಪ್‌ಟಾಪ್‌ ಏಕೀಕೃತ ಚಾಟ್‌ಬಾಟ್ ಆಯ್ಕೆ ಪಡೆದುಕೊಂಡಿದೆ. ಜಿಯೋ ಟಿವಿ ಆಪ್‌ ಮೂಲಕ ಶೈಕ್ಷಣಿಕ ಕಂಟೆಂಟ್‌ಗಳಿಗೆ ಆಕ್ಸಸ್‌ ಕೂಡಾ ಲಭ್ಯ ಇದ್ದು, ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಜನಪ್ರಿಯ ಗೇಮ್‌ಗಳನ್ನು ಆಡಬಹುದು. ಜಿಯೋ ಸಂಸ್ಥೆಯ JioBIAN ಎಂಬ ಸಿದ್ಧ ಕೋಡಿಂಗ್ ನೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ನಂತಹ ಇತರೆ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಕೋಡಿಂಗ್ ಕಲಿಯಲು ಪೂರಕವಾಗಿದೆ.

ಜಿಯೋ ಬುಕ್ ( JioBook ) ಲ್ಯಾಪ್‌ಟಾಪ್‌ ಮ್ಯಾಟ್ ಫಿನಿಶ್ ರಚನೆ ಹೊಂದಿದೆ. ಇದು ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.) ತೂಕ ಒಳಗೊಂಡಿದೆ. ಇದು 11.6 ಇಂಚಿನ ಆಯಂಟಿ-ಗ್ಲೇರ್ ಹೆಚ್‌ಡಿ ಡಿಸ್‌ಪ್ಲೇ ಪಡೆದಿದ್ದು, ಅಲ್ಲದೇ ಮೀಡಿಯಾ ಟೆಕ್ 8788 ಪ್ರೊಸೆಸರ್‌ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಯುಎಸ್‌ಬಿ, ಹೆಚ್‌ಡಿಎಮ್‌ಐ ಮತ್ತು ಆಡಿಯೋ ಪೋರ್ಟ್‌ಗಳ ಸೌಲಭ್ಯ ಸಹ ಇದೆ

ಆಫರ್‌ ದರ ಹಾಗೂ ಲಭ್ಯತೆ
ಜಿಯೋಬುಕ್‌ ಲ್ಯಾಪ್‌ಟಾಪ್‌ ಸದ್ಯ ಕೊಡುಗೆಯಲ್ಲಿ 12,890ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಆಸಕ್ತ ಗ್ರಾಹಕರು ಇದನ್ನು ಅಮೆಜಾನ್‌ (Amazon.in) ತಾಣ ದಿಂದ ಅಥವಾ ರಿಲಯನ್ಸ್ ಡಿಜಿಟಲ್ ಮೂಲಕ ಖರೀದಿ ಮಾಡಬಹುದು.

Best Mobiles in India

English summary
JioBook Received a Major Price Cut in India. Check out New offer Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+