ಇಂದು JioBook ಲ್ಯಾಪ್‌ಟಾಪ್ ಸೇಲ್!..ಬೊಂಬಾಟ್ ಆಫರ್ ಖಚಿತ!
ರಿಲಯನ್ಸ್ ಜಿಯೋ ಕಂಪನಿಯು ಇತ್ತೀಚಿಗೆ ಹೊಸದಾಗಿ ಲಾಂಚ್ ಮಾಡಿರುವ ಜಿಯೋ ಬುಕ್ ಲ್ಯಾಪ್‌ಟಾಪ್ ಬಜೆಟ್ ಬೆಲೆಯಿಂದಾಗಿ ಮಾರುಕಟ್ಟೆಯೇ ತಿರುಗಿ ನೋಡುವಂತೆ ಮಾಡಿದೆ. ಈ ಹೊಸ ಆವೃತ್ತಿಯ ಜಿಯೋಬುಕ್ ಲ್ಯಾಪ್‌ಟಾಪ್ ಇಂದು (ಆ 5) ಅಮೆಜಾನ್ ಇ ಕಾಮರ್ಸ್ ತಾಣ ಹಾಗೂ ರಿಲಯನ್ಸ್ ಡಿಜಿಟಲ್ ತಾಣದ ಮೂಲಕ ಸೇಲ್ ಆರಂಭಿಸಲಿದೆ.
ಹೌದು, ಜಿಯೋ ಸಂಸ್ಥೆಯು ಹೊಸ ಆವೃತ್ತಿಯ ಜಿಯೋ ಬುಕ್ ಲ್ಯಾಪ್‌ಟಾಪ್ ಅಮೆಜಾನ್ ಇ ಕಾಮರ್ಸ್ ತಾಣ ಹಾಗೂ ರಿಲಯನ್ಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂದು ಖರೀದಿಗೆ ಲಭ್ಯ ಆಗಲಿದೆ. ಅಂದಹಾಗೆ ಕಲಿಕಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್‌ಲೈನ್ ವ್ಯಾಪಾರ ಶುರು ಮಾಡುವುದು. ಹೀಗೆ ಎಲ್ಲ ಸಾಧ್ಯತೆಗಳಿಗೂ ಈ ಲ್ಯಾಪ್‌ಟಾಪ್ ಸೂಕ್ತ ವೇದಿಕೆ ಅನ್ನು ಒದಗಿಸಿಕೊಡಲಿದೆ.

ಇನ್ನು ಈ ಜಿಯೋ ಬುಕ್ ಲ್ಯಾಪ್‌ಟಾಪ್ ಬೆಲೆಯು 16,499 ರೂ. ಆಗಿದ್ದು, ಕೆಲವು ಆಕರ್ಷಕ ಫೀಚರ್ಸ್‌ಗಳ ಆಯ್ಕೆ ಪಡೆದುಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ 75+ ಕೀ ಬೋರ್ಡ್ ಶಾರ್ಟ್‌ಕಟ್‌ಗಳು, 2.0 GHz ಒಕ್ಟಾ ಕೋರ್ ಪ್ರೊಸೆಸರ್, JioBIAN ಎಂಬ ಸಿದ್ಧ ಕೋಡಿಂಗ್ ಸಪೋರ್ಟ್. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
* ಜಿಯೋ ಬುಕ್ 4G LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ ಸೌಲಭ್ಯ ಪಡೆದಿದೆ
* 75+ ಕೀ ಬೋರ್ಡ್ ಶಾರ್ಟ್‌ಕಟ್‌ಗಳು ಸೌಲಭ್ಯ ಪಡೆದಿದೆ
* ಟ್ರ್ಯಾಕ್‌ಪ್ಯಾಡ್ ಸನ್ನೆಗಳು ಆಯ್ಕೆ ಇವೆ
* ಸ್ಕ್ರೀನ್ ವಿಸ್ತರಣೆ ಸೌಲಭ್ಯ ಕಾಣಬಹುದಾಗಿದೆ
* ವೈರ್‌ಲೆಸ್ ಪ್ರಿಂಟಿಂಗ್ ಸೌಲಭ್ಯ ಸಹ ಒಳಗೊಂಡಿದೆ
* ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು ಆಯ್ಕೆ ಕೂಡಾ ಲಭ್ಯ
* ಏಕೀಕೃತ ಚಾಟ್‌ಬಾಟ್ ಆಯ್ಕೆ ಪಡೆದುಕೊಂಡಿದೆ
* ಜಿಯೋ ಟಿವಿ ಆಪ್ ಮೂಲಕ ಶೈಕ್ಷಣಿಕ ಕಂಟೆಂಟ್‌ಗಳಿಗೆ ಆಕ್ಸಸ್ ಕೂಡಾ ಲಭ್ಯ
* ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಜನಪ್ರಿಯ ಗೇಮ್‌ಗಳನ್ನು ಆಡಬಹುದು
* ಜಿಯೋ ಸಂಸ್ಥೆಯ JioBIAN ಎಂಬ ಸಿದ್ಧ ಕೋಡಿಂಗ್ ನೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ನಂತಹ ಇತರೆ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಕೋಡಿಂಗ್ ಕಲಿಯಲು ಪೂರಕವಾಗಿದೆ.
ಆಕರ್ಷಕ ರಚನೆ ಹಾಗೂ ವೇಗದ ಕಾರ್ಯಕ್ಷಮತೆ ಮಾಹಿತಿ
ಜಿಯೋ ಬುಕ್ ಲ್ಯಾಪ್‌ಟಾಪ್ ಮ್ಯಾಟ್ ಫಿನಿಶ್ ರಚನೆ ಹೊಂದಿದೆ. ಇದು ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.) ತೂಕ ಒಳಗೊಂಡಿದೆ. ಅಲ್ಲದೇ ಒಕ್ಟಾ ಕೋರ್ ಪ್ರೊಸೆಸರ್ 4 GB RAM, 64GB (ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸುವ ಆಯ್ಕೆ) ಸ್ಟೋರೇಜ್ ಆಯ್ಕೆ ಇದೆ.
ಜಿಯೋಬುಕ್ ಹಾರ್ಡ್‌ವೇರ್ ಆಯ್ಕೆಗಳ ಲಿಸ್ಟ್ ಇಲ್ಲಿದೆ:
* ನೂತನ ಕಾರ್ಯಾಚರಣಾ ವ್ಯವಸ್ಥೆ - ಜಿಯೋಓಎಸ್ ಸೌಲಭ್ಯ ಇದೆ
* 4G ಮತ್ತು ಡ್ಯುಯಲ್ ಬ್ಯಾಂಡ್ WiFi ಕನೆಕ್ಟಿವಿಟಿಯ ಸೌಲಭ್ಯ
* ಅಲ್ಟ್ರಾ ಸ್ಲಿಮ್, 990 ಗ್ರಾಂ ತೂಕ ಪಡೆದಿದೆ ಮತ್ತು ಹೊಸ ವಿನ್ಯಾಸ
* ಸರಳ ಮಲ್ಟಿಟಾಸ್ಕಿಂಗ್‌ಗಾಗಿ ಶಕ್ತಿಶಾಲಿ ಒಕ್ಟಾ ಕೋರ್ ಚಿಪ್‌ಸೆಟ್ ವ್ಯವಸ್ಥೆ ಇದೆ
* 11.6 ಇಂಚಿನ ಆಯಂಟಿ-ಗ್ಲೇರ್ ಹೆಚ್‌ಡಿ ಡಿಸ್‌ಪ್ಲೇ ಪಡೆದಿದೆ
* ಇನ್ಫಿನಿಟಿ ಕೀಬೋರ್ಡ್
* ಯುಎಸ್‌ಬಿ, ಹೆಚ್‌ಡಿಎಮ್‌ಐ ಮತ್ತು ಆಡಿಯೋ ಪೋರ್ಟ್‌ಗಳ ಸೌಲಭ್ಯ ಸಹ ಇದೆ
ಜಿಯೋಬುಕ್ ಬೆಲೆ ಮತ್ತು ಲಭ್ಯತೆ ಮಾಹಿತಿ:
* ಜಿಯೋಬುಕ್ ಲ್ಯಾಪ್‌ಟಾಪ್ ಡಿವೈಸ್ 16,499ರೂ. ಬೆಲೆಯನ್ನು ಹೊಂದಿದೆ. ಇದೇ ಆಗಸ್ಟ್ 5 ರಿಂದ ಖರೀದಿಗೆ ದೊರೆಯುತ್ತದೆ.
* ಜಿಯೋಬುಕ್ ಲ್ಯಾಪ್‌ಟಾಪ್ ಅನ್ನು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಿಂದ ಖರೀದಿಸಬಹುದು. ಅಲ್ಲದೇ ಅಮೆಜಾನ್.ಇನ್ ಪ್ಲಾಟ್‌ಫಾರ್ಮ್ ಮೂಲಕ ಸಹ ಜಿಯೋಬುಕ್ ಅನ್ನು ಖರೀದಿ ಮಾಡಬಹುದಾಗಿದೆ.
* ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.jiobook.com ಚೆಕ್ ಮಾಡಿ.


Click it and Unblock the Notifications








