ಲಾಂಚ್ ಆಗಿಯೇ ಬಿಡ್ತು ಹೊಚ್ಚ ಹೊಸ ಜಿಯೋಬುಕ್ ಲ್ಯಾಪ್‌ಟಾಪ್: ಅಗ್ಗದ ಬೆಲೆಗೆ ಲಭ್ಯ!
ಜಿಯೋ ಸಂಸ್ಥೆಯು ಬಹುನಿರೀಕ್ಷಿತ ಜಿಯೋಬುಕ್ ಅಧಿಕೃತವಾಗಿ ಬಿಡುಗಡೆ ಆಗಿದೆ. ಇದು ಎಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾದ್ದು, ಕ್ರಾಂತಿಕಾರಕ ಡಿಜಿಟಲ್ ಕಲಿಕಾ ಬುಕ್ ಡಿವೈಸ್ ಅನ್ನು ರಿಲಯನ್ಸ್ ರೀಟೇಲ್ ಪರಿಚಯಿಸಿದೆ.
ಈ ನೂತನ ಜಿಯೋಬುಕ್ ಸಾಧನವು ಅಪ್‌ಗ್ರೇಡ್ 'ಜಿಯೋಒಎಸ್' ಕಾರ್ಯವೈಖರಿ ವ್ಯವಸ್ಥೆ, ಆಕರ್ಷಕ ವಿನ್ಯಾಸ ಮತ್ತು ಸದಾ-ಸಂಪರ್ಕಿತವಾಗಿರುವ ಫೀಚರ್ಸ್‌ಗಳೊಂದಿಗೆ, ಪ್ರತಿಯೊಬ್ಬರ ಕಲಿಕೆಯ ಅನುಭವವನ್ನೇ ಬದಲಾಯಿಸುವ ಭರವಸೆಯನ್ನು ಜಿಯೋಬುಕ್ ನೀಡುತ್ತದೆ.

ಕಲಿಕಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದು, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್‌ಲೈನ್ ವ್ಯಾಪಾರ ಶುರು ಮಾಡುವುದು. ಹೀಗೆ ಎಲ್ಲ ಸಾಧ್ಯತೆಗಳಿಗೂ ಈ ನೂತನ ಜಿಯೋಬುಕ್ ಸೂಕ್ತ ವೇದಿಕೆ ಅನ್ನು ಒದಗಿಸಿಕೊಡಲಿದೆ.
'ಕಲಿಕೆಯ ಹಾದಿಯಲ್ಲಿರುವ ಎಲ್ಲ ವಯೋಮಾನದವರಿಗೆ ಬಲ ನೀಡುವ ಮತ್ತು ಪೂರಕವಾಗುವ ನೂತನ ಡಿವೈಸ್‌ಗಳನ್ನು ಪರಿಚಯಿಸಲು ನಾವು ಬದ್ಧರಾಗಿದ್ದೇವೆ. ಜಿಯೋಬುಕ್ ನಮ್ಮ ಹೊಚ್ಚ ಹೊಸ ಸಾಧನವಾಗಿದ್ದು, ಅತ್ಯಾಧುನಿಕ ಗುಣವೈಶಿಷ್ಟ್ಯಗಳು ಮತ್ತು ಸೀಮಾತೀತವಾದ ಸಂಪರ್ಕ ಸಂವಹನದ ಆಯ್ಕೆಗಳೊಂದಿಗೆ ಎಲ್ಲ ವಯೋಮಾನದ ಕಲಿಕಾರ್ಥಿಗಳ ಬೇಡಿಕೆಗೆ ಇದು ಸ್ಪಂದಿಸುತ್ತದೆ. ಜನರು ಕಲಿಯುವ ವಿಧಾನವನ್ನೇ ಜಿಯೋಬುಕ್ ಬದಲಾಯಿಸುತ್ತದೆ. ಅಲ್ಲದೇ ಇದು ವೈಯಕ್ತಿಕ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನಮ್ಮದು' ಎಂದು ರಿಲಯನ್ಸ್ ರೀಟೇಲ್ ವಕ್ತಾರರು ಹೇಳಿದ್ದಾರೆ.
ಬಳಕೆದಾರರ ಸೌಕರ್ಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿರುವ ಹೊಸ ಜಿಯೋ ಒಎಸ್ (ಕಾರ್ಯಾಚರಣಾ ವ್ಯವಸ್ಥೆ)ಯ ಪ್ರಮುಖ ಫೀಚರ್ಸ್ ಹೇಗಿವೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* 4G LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ ಸೌಲಭ್ಯ - ಸೀಮಾತೀತ ಅಂತರಜಾಲ ಸಂಪರ್ಕದೊಂದಿಗೆ, ದೇಶದ ಮೂಲೆಮೂಲೆಯಲ್ಲೂ ಕಲಿಕೆಗೆ ಅಡ್ಡಿಯಿಲ್ಲದಂತೆ ಸದಾ ಕನೆಕ್ಟ್ ಆಗಿರಲು ಇದು ಅನುಕೂಲ ಆಗಿದೆ.
* ಕಲ್ಪನೆಗೆ ಅನುಗುಣವಾಗಿ ವರ್ತಿಸುವ ಇಂಟರ್‌ಫೇಸ್ ಸೌಲಭ್ಯ
* 75+ ಕೀ ಬೋರ್ಡ್ ಶಾರ್ಟ್‌ಕಟ್‌ಗಳು ಆಯ್ಕೆ ಇದೆ
* ಟ್ರ್ಯಾಕ್‌ಪ್ಯಾಡ್ ಸನ್ನೆಗಳು ಇವೆ
* ಸ್ಕ್ರೀನ್ ವಿಸ್ತರಣೆ ಆಯ್ಕೆ
* ವೈರ್‌ಲೆಸ್ ಪ್ರಿಂಟಿಂಗ್ ಸೌಲಭ್ಯ
* ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು ಆಯ್ಕೆ
* ಏಕೀಕೃತ ಚಾಟ್‌ಬಾಟ್ ಆಯ್ಕೆ
* ಜಿಯೋ ಟಿವಿ ಆಪ್ ಮೂಲಕ ಶೈಕ್ಷಣಿಕ ವಿಷಯಗಳಿಗೆ ಪ್ರವೇಶಾವಕಾಶ ಲಭ್ಯ ಆಗಲಿದೆ
* ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಪ್ರಮುಖ ಗೇಮ್‌ಗಳನ್ನು ಆಡಬಹುದು
* JioBIAN ಎಂಬ ಸಿದ್ಧ ಕೋಡಿಂಗ್ ವಲಯದೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ಮುಂತಾದ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕೋಡಿಂಗ್ ಕಲಿಯಬಹುದು.
ಸರಿಸಾಟಿಯಿಲ್ಲದ ವಿನ್ಯಾಸ ಮತ್ತು ಕಾರ್ಯಕ್ಷಮತೆ: ಇಲ್ಲಿದೆ ಮಾಹಿತಿ
ಹೊಸ ಜಿಯೋ ಬುಕ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದು ಎಂದರೆ ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.) ತೂಕ ಪಡೆದಿದೆ. ಇದು ಸ್ಲಿಮ್ ಆಗಿದ್ದರೂ, 2.0 GHz ಒಕ್ಟಾ ಕೋರ್ ಪ್ರೊಸೆಸರ್ 4 GB LPDDR4 RAM, 64GB (ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಬಹುದಾದ ಆಯ್ಕೆ). ಸ್ಟೋರೇಜ್ ಆಯ್ಕೆ,
ಹಾಗೆಯೇ ನೂತನ ಜಿಯೋ ಬುಕ್ ಡಿವೈಸ್ ಇನ್ಫಿನಿಟಿ ಕೀಬೋರ್ಡ್, ದೊಡ್ಡದಾದ, ಹಲವು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್ ಮತ್ತು ಅಂತರ್-ನಿರ್ಮಿತ USB/HDMI ಪೋರ್ಟ್‌ಗಳ ಮೂಲಕ ಅದ್ಭುತ ಕಾರ್ಯ ನಿರ್ವಹಣೆಯನ್ನು ಒದಗಿಸುತ್ತದೆ.
ಜಿಯೋಬುಕ್ ಹಾರ್ಡ್‌ವೇರ್ ಫೀಚರ್ಸ್‌ಗಳ ಮಾಹಿತಿ ಇಲ್ಲಿದೆ:
* ನೂತನ ಕಾರ್ಯಾಚರಣಾ ವ್ಯವಸ್ಥೆ - ಜಿಯೋಓಎಸ್
* 4G ಮತ್ತು ಡ್ಯುಯಲ್ ಬ್ಯಾಂಡ್ WiFi ಸಂಪರ್ಕತೆ
* ಅಲ್ಟ್ರಾ ಸ್ಲಿಮ್, ಅತ್ಯಂತ ಹಗುರ (990 ಗ್ರಾಂ) ಮತ್ತು ಅತ್ಯಾಧುನಿಕ ವಿನ್ಯಾಸ
* ಸುಲಲಿತ ಮಲ್ಟಿಟಾಸ್ಕಿಂಗ್‌ಗಾಗಿ ಶಕ್ತಿಶಾಲಿ ಒಕ್ಟಾ ಕೋರ್ ಚಿಪ್‌ಸೆಟ್ ಸೌಲಭ್ಯ
* 11.6 ಇಂಚಿನ (29.46CM) ಆಯಂಟಿ-ಗ್ಲೇರ್ ಹೆಚ್‌ಡಿ ಡಿಸ್‌ಪ್ಲೇ ಸೌಲಭ್ಯ
* ಇನ್ಫಿನಿಟಿ ಕೀಬೋರ್ಡ್ ಮತ್ತು ಅಗಲವಾದ, ಬಹು ಸನ್ನೆಗಳಿಗೆ ಅನುಕೂಲವಿರುವ ಟ್ರ್ಯಾಕ್‌ಪ್ಯಾಡ್
* ಯುಎಸ್‌ಬಿ, ಹೆಚ್‌ಡಿಎಮ್‌ಐ ಮತ್ತು ಆಡಿಯೋ ಪೋರ್ಟ್‌ಗಳ ಆಯ್ಕೆ
ಜಿಯೋಬುಕ್ ಲಭ್ಯತೆ ಮಾಹಿತಿ:
* ಜಿಯೋಬುಕ್ 16,499ರೂ. ಬೆಲೆಯಲ್ಲಿ 2023 ಆಗಸ್ಟ್ 5 ರಿಂದ ಖರೀದಿಗೆ ಲಭ್ಯವಿದೆ.
* ಗ್ರಾಹಕರು ಜಿಯೋಬುಕ್ ಅನ್ನು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳಿಂದ ಮತ್ತು ಅಮೆಜಾನ್.ಇನ್ ಪ್ಲಾಟ್‌ಫಾರ್ಮ್ ಮೂಲಕ ಸಹ ಜಿಯೋಬುಕ್ ಅನ್ನು ಖರೀದಿಸಬಹುದಾಗಿದೆ.
* ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.jiobook.com ಸಂಪರ್ಕಿಸಿ.


Click it and Unblock the Notifications








