ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಪ್ರಾರಂಭ: ಶುಲ್ಕ ಎಷ್ಟು?
ಜಿಯೋ ಟೆಲಿಕಾಂನ ಓಟಿಟಿ ಪ್ಲಾಟ್‌ಫಾರ್ಮ್ ಎನಿಸಿರುವ ಜಿಯೋಸಿನಿಮಾ ತನ್ನ ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್ ಅನ್ನು ಪ್ರಾರಂಭಿಸಿದೆ. ಇದು ಬಳಕೆದಾರರಿಗೆ ಹೆಚ್ಚಿನ ಕಂಟೆಂಟ್ ಆಕ್ಸಸ್‌ಗೆ ಅನುಮತಿಸುತ್ತೆ. ಬಳಕೆದಾರರಿಗೆ ಕೆಲವು ಜನಪ್ರಿಯ ಸಿನಿಮಾ ಹಾಗೂ FIFA ವಿಶ್ವಕಪ್ ಮತ್ತು IPL 2023 ಸ್ಟ್ರೀಮಿಂಗ್ ಅನ್ನು ಉಚಿತವಾಗಿ ನೀಡುವ ಮೂಲಕ ಗ್ರಾಹಕ ಬಳಗವನ್ನು ಹೆಚ್ಚಿಸಿಕೊಂಡಿದೆ.
ಜಿಯೋ ಸಂಸ್ಥೆಯು ಈಗ ಜಿಯೋ ಸಿನಿಮಾ ಅನ್ನು ಪ್ರಾರಂಭ ಮಾಡಿದ್ದು, ಬಳಕೆದಾರರು HBO ನಂತಹ ಪ್ರಮುಖ ಸ್ಟುಡಿಯೋಗಳ ಕಂಟೆಂಟ್ ಆನಂದಿಸಬಹುದು. ಜಿಯೋಸಿನಿಮಾ ಪ್ರೀಮಿಯಂ ನಲ್ಲಿ ಸ್ಟ್ರೀಮ್ ಮಾಡಬಹುದಾದ ಕೆಲವು ಇತ್ತೀಚಿನ HBO ಶೋಗಳಲ್ಲಿ ದಿ ಲಾಸ್ಟ್ ಆಫ್ ಅಸ್, ಹೌಸ್ ಆಫ್ ದಿ ಡ್ರ್ಯಾಗನ್ ಮತ್ತು ಸಕ್ಸೆಶನ್ ಸೇರಿವೆ. ಜೊತೆಗೆ, ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಸೇರಿಸುವುದಾಗಿ ಪ್ಲಾಟ್‌ಫಾರ್ಮ್ ಭರವಸೆ ನೀಡಿದೆ.

ಜಿಯೋ ಸಿನಿಮಾ (JioCinema) ಅಪ್ಲಿಕೇಶನ್ ಅನ್ನು ಗ್ರಾಹಕರು ಆಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ಗಳೆರಡರಲ್ಲೂ ಡೌನ್‌ಲೋಡ್ ಮಾಡಲು ಲಭ್ಯವಿದೆ. ಹಾಗಾದರೆ ಜಿಯೋ ಸಿನಿಮಾ ಚಂದಾದಾರಿಕೆ ಶುಲ್ಕ ಎಷ್ಟು ಹಾಗೂ ಇತರೆ ಮಾಹಿತಿ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಜಿಯೋ ಸಿನಿಮಾ ಚಂದಾದಾರಿಕೆ ಹೇಗೆ ಪಡೆಯುವುದು : ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಪ್ಲ್ಯಾನ್ ಅನ್ನು ಖರೀದಿಸಲು, ಜಿಯೋ ಸಿನಿಮಾ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು ಸಬ್‌ಸ್ಕ್ರೈಬ್ ಬಟನ್ ಕ್ಲಿಕ್ ಮಾಡಿ. ಚಂದಾದಾರಿಕೆ ಪ್ಲ್ಯಾನ್ ವರ್ಷಕ್ಕೆ 999 ರೂ. ಆಗಿದ್ದು, ಬಳಕೆದಾರರು ಯಾವುದೇ ಡಿವೈಸ್‌ನಲ್ಲೂ ಜಿಯೋ ಸಿನಿಮಾ ಅನ್ನು ವೀಕ್ಷಿಸಬಹುದು, ಕಂಪನಿಯು ಹೆಚ್ಚಿನ ವೀಡಿಯೊ ಮತ್ತು ಆಡಿಯೊ ಗುಣಮಟ್ಟವನ್ನು ಭರವಸೆ ನೀಡುತ್ತದೆ.

ಇತರೆ ಅಂಶಗಳು : ಪ್ರಮುಖ ಅಂಶವೆಂದರೆ ಈ ಆಫ್ ಅನ್ನು ಏಕಕಾಲದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಕೆಲಸ ಮಾಡಬಹುದು. ಇದರರ್ಥ ಬಳಕೆದಾರರು ಅದನ್ನು ಖರೀದಿಸಬಹುದು ಮತ್ತು ಖಾತೆಯ ವಿವರಗಳನ್ನು ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಶೇರ್ ಮಾಡಬಹುದು. ಪ್ರಸ್ತುತ ಬಳಕೆದಾರರಿಗೆ ಕೇವಲ ಒಂದು ವಾರ್ಷಿಕ ಚಂದಾದಾರಿಕೆ ಯೋಜನೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಜಿಯೋಸಿನಿಮಾ ಕೆಲವು ಮಾಸಿಕ ಅಗ್ಗದ ಪ್ಲ್ಯಾನ್‌ಗಳನ್ನು ಪ್ರಾರಂಭಿಸಬಹುದು.
ಜಿಯೋ ಸಿನಿಮಾನಲ್ಲಿ HBO ಶೋಗಳ ಪಟ್ಟಿ
- ದ ಲಾಸ್ಟ್ ಆಫ್ ಅಸ್
- ಹೌಸ್ ಆಫ್ ದಿ ಡ್ರ್ಯಾಗನ್
- ಚೆರ್ನೋಬಿಲ್
- ವೈಟ್ ಹೌಸ್ ಪ್ಲಂಬರ್ಸ್
- ವೈಟ್ ಲೋಟಸ್
- ಮೇರ್ ಆಫ್ ಈಸ್ಟ್‌ಟೌನ್
- ವಿನ್ನಿಂಗ್ ಟೈಮ್
- ಬ್ಯಾರಿ
- Succession
- ಬಿಗ್ ಲಿಟಲ್ ಲೈಸ್
- ವೆಸ್ಟ್ ವರ್ಲ್ಡ್
- ಸಿಲಿಕಾನ್ ವ್ಯಾಲಿ
- ಟ್ರೂ ಡಿಟೆಕ್ಟಿವ್
- ನ್ಯೂಸ್ ರೂಮ್
- ಗೇಮ್ ಆಫ್ ಥ್ರೋನ್
- Entourage
- Curb Your Enthusiasm
- Perry MasonSuccession
ಜಿಯೋ ಸಿನಿಮಾ ಈ ವರ್ಷದ ಆರಂಭದಲ್ಲಿ WarnerBros ಜೊತೆಗೆ ಪಾಲುದಾರಿಕೆ ಹೊಂದಿತ್ತು. ರಿಲಯನ್ಸ್‌ನ ಈ ಕ್ರಮವು ಭಾರತೀಯ ಸ್ಟ್ರೀಮಿಂಗ್ ಮಾರುಕಟ್ಟೆಯು ಹೆಚ್ಚು ಸ್ಪರ್ಧಾತ್ಮಕವಾಗುತ್ತಿರುವ ಸಮಯದಲ್ಲಿ ಬರುತ್ತದೆ. ಪ್ರಮುಖ ಆಟಗಾರರಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಹಾಟ್‌ಸ್ಟಾರ್ ಎಲ್ಲರೂ ಮಾರುಕಟ್ಟೆಯ ಹೆಚ್ಚಿನ ಪಾಲನ್ನು ಪಡೆಯಲು ಸ್ಪರ್ಧಿಸುತ್ತಿದ್ದಾರೆ.
ಈ ಹೊಸ ಪಾಲುದಾರಿಕೆಯೊಂದಿಗೆ, ಜಿಯೋ ಸಿನಿಮಾ ಹೆಚ್ಚು ಬಳಕೆದಾರರನ್ನು ಆಕರ್ಷಿಸಲು ಮತ್ತು ಭಾರತದ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಆಶಿಸುತ್ತಿದೆ. ಸ್ಟ್ರೀಮಿಂಗ್ ಅಪ್ಲಿಕೇಶನ್ HBO ವಿಷಯವನ್ನು ಸ್ಟ್ರೀಮಿಂಗ್ ಮಾಡಲು ಪ್ರಾರಂಭಿಸಿದಾಗ ಡಿಸ್ನಿ+ ಹಾಟ್‌ಸ್ಟಾರ್ ಹೇಗೆ ಏರಿಕೆ ಕಂಡಿದೆಯೋ ಅದೇ ರೀತಿಯ ಚಂದಾದಾರರ ಹೆಚ್ಚಳವನ್ನು ನಿರೀಕ್ಷಿಸಬಹುದು.


Click it and Unblock the Notifications








