Home
ಸುದ್ದಿಜಾಲ

ಜಿಯೋ ಉಚಿತ ಸೇವೆ ಅಂತ್ಯ!..ಹೊಸ ಚಂದಾದಾರಿಕೆ ಬೆಲೆ ತಿಳಿದ್ರೆ, ಶಾಕ್‌ ಆಗ್ತೀರಾ!?

ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಜಿಯೋ ಸಿನಿಮಾ (JioCinema) ಸಹ ಒಂದಾಗಿದೆ. ಸದ್ಯ ಐಪಿಎಲ್‌ 2023 ಉಚಿತ ವೀಕ್ಷಣೆಗೆ ಅವಕಾಶ ಮಾಡಿದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಆದರೆ ಶೀಘ್ರದಲ್ಲೇ ಗ್ರಾಹಕರಿಗೆ ಶಾಕ್ ನೀಡಲು ಜಿಯೋ ಟೆಲಿಕಾಂ ಸಜ್ಜಾಗಿದೆ.

ಹೌದು, ಜಿಯೋ ಪ್ರಸ್ತುತ ಜಿಯೋ ಸಿನಿಮಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಟಾಟಾ IPL 2023) ಅನ್ನು ಉಚಿತವಾಗಿ ಸ್ಟ್ರೀಮ್ ಮಾಡುತ್ತಿದೆ. ವರದಿಗಳ ಪ್ರಕಾರ, ಈ ಉಚಿತ ಮನರಂಜನೆ ಸೇವೆ ಶೀಘ್ರದಲ್ಲೇ ಮುಕ್ತಾಯವಾಗಲಿದ್ದು, ಜಿಯೋಸಿನಿಮಾ ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಪರಿಚಯಿಸಲು ತಯಾರಾಗುತ್ತಿದೆ. ಇನ್ನು ಕಂಟೆಂಟ್‌ ವೀಕ್ಷಿಸಲು ಬಳಕೆದಾರರು ಪಾವತಿಸಬೇಕಾಗಬಹುದು.

ಜಿಯೋ ಉಚಿತ ಸೇವೆ ಅಂತ್ಯ!..ಹೊಸ ಚಂದಾದಾರಿಕೆ ಬೆಲೆ ತಿಳಿದ್ರೆ, ಶಾಕ್‌ ಆಗ್ತೀರಾ!?

ಜಿಯೋಸಿನಿಮಾ ಪ್ಲಾಟ್‌ಫಾರ್ಮ್ ಸಿನಿಮಾ, ವೆಬ್ ಸ್ಟೋರಿ, ಮ್ಯೂಸಿಕ್‌ ವೀಡಿಯೊಗಳು, ಟಿವಿ ಕಾರ್ಯಕ್ರಮಗಳು ಮತ್ತು ಕ್ರೀಡೆಗಳನ್ನು ಒಳಗೊಂಡಂತೆ ಲೈಬ್ರರಿ ಸೇವೆಗಳನ್ನು ಜಿಯೋ ಬಳಕೆದಾರರಿಗೆ ಉಚಿತವಾಗಿ ನೀಡುತ್ತದೆ. ಆದರೆ ವರದಿ ಪ್ರಕಾರ ಜಿಯೋ ಪ್ರೀಮಿಯಂ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಆದಾಗ್ಯೂ, ಕಂಪನಿಯು ಈ ಯೋಜನೆಗಳನ್ನು ಇನ್ನೂ ದೃಢೀಕರಿಸಿಲ್ಲ ಎಂಬುದನ್ನು ಗಮನಿಸಬಹುದು.

ಜಿಯೋ ಉಚಿತ ಸೇವೆ ಅಂತ್ಯ!..ಹೊಸ ಚಂದಾದಾರಿಕೆ ಬೆಲೆ ತಿಳಿದ್ರೆ, ಶಾಕ್‌ ಆಗ್ತೀರಾ!?

ಜಿಯೋ ಸಿನಿಮಾ ಚಂದಾದಾರಿಕೆ ನಿರೀಕ್ಷಿತ ಯೋಜನೆಗಳ ಲಿಸ್ಟ್‌:

ಡೈಲಿ ಡಿಲೈಟ್ ಯೋಜನೆ : ಈ ಯೋಜನೆಯು 29ರೂ. ಬೆಲೆಯ ಒಂದು ದಿನದ ಪ್ಲಾನ್ ಆಗಿರುತ್ತದೆ. ಆದಾಗ್ಯೂ, ಡೀಲ್‌ನೊಂದಿಗೆ, ಬಳಕೆದಾರರು ಎರಡು ಡಿವೈಸ್‌ಗಳಲ್ಲಿ ಏಕಕಾಲದಲ್ಲಿ ಸ್ಟ್ರೀಮ್ ಮಾಡಬಹುದಾಗಿದೆ. ಜೊತೆಗೆ 24 ಗಂಟೆಗಳ ತಡೆರಹಿತ ಮನರಂಜನೆಯನ್ನು ಆನಂದಿಸಬಹುದು. ಆರಂಭಿಕ ಕೊಡುಗೆಯಾಗಿ 2ರೂ. ಗೆ ಈ ಯೋಜನೆ ಲಭ್ಯ ಮಾಡಬಹುದು.

ಗೋಲ್ಡ್ ಸ್ಟ್ಯಾಂಡರ್ಡ್ ಯೋಜನೆ : ಈ ಯೋಜನೆಯು 299ರೂ. ಗಳ ಬೆಲೆಯಿರುವ ಸಾಧ್ಯತೆಯಿದೆ. ಈ ಯೋಜನೆಯು ಮೂರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಅಲ್ಲದೇ ಏಕಕಾಲದಲ್ಲಿ ಎರಡು ಡಿವೈಸ್‌ಗಳನ್ನು ಬೆಂಬಲಿಸುತ್ತದೆ. ಆರಂಭದಲ್ಲಿ ಈ ಯೋಜನೆಯು 99ರೂ. ಗಳ ಪರಿಚಯಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಬಹುದು.

ಪ್ಲಾಟಿನಂ ಪವರ್ ಯೋಜನೆ : ಈ ಯೋಜನೆಯು ಹೈ ಎಂಡ್‌ ಮಾದರಿಯಲ್ಲಿರಲಿದ್ದು, 1,199 ರೂ. ಗಳ ಬೆಲೆಯಿರುವ ಸಾಧ್ಯತೆಯಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಹಾಗೆಯೇ ಏಕಕಾಲದಲ್ಲಿ ನಾಲ್ಕು ಡಿವೈಸ್‌ಗಳನ್ನು ಬೆಂಬಲಿಸಲಿದೆ. ಆರಂಭದಲ್ಲಿ ಈ ಯೋಜನೆಯು 599ರೂ. ಗಳ ಪರಿಚಯಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಬಹುದು. ಈ ಯೋಜನೆಯಲ್ಲಿ ಜಾಹೀರಾತು-ಮುಕ್ತ ಸ್ಟ್ರೀಮಿಂಗ್‌ನಂತಹ ಪ್ರಯೋಜನ ಲಭ್ಯ.

ಜಿಯೋ ಉಚಿತ ಸೇವೆ ಅಂತ್ಯ!..ಹೊಸ ಚಂದಾದಾರಿಕೆ ಬೆಲೆ ತಿಳಿದ್ರೆ, ಶಾಕ್‌ ಆಗ್ತೀರಾ!?

ಅಂದಹಾಗೆ ಸದ್ಯ ಜಿಯೋಸಿನಿಮಾವನ್ನು ಬಳಕೆದಾರರು ಉಚಿತವಾಗಿ ಆನಂದಿಸಬಹುದು. ಟಾಟಾ ಐಪಿಎಲ್ 2023 ರ ಮುಕ್ತಾಯದ ಬಳಿಕ ಜಿಯೋ ಈ ಯೋಜನೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಹೀಗಾಗಿ ಐಪಿಎಲ್ 2023 ಮುಗಿಯುವವರೆಗೂ ಬಳಕೆದಾರರು ಸ್ಟ್ರೀಮಿಂಗ್ ಮುಂದುವರೆಸಬಹುದು. ಇನ್ನು ಜಿಯೋ ಟೆಲಿಕಾಂನ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 2023ರೂ. ಯೋಜನೆ ಪ್ರಯೋಜನ : ರಿಲಾಯನ್ಸ್ ಜಿಯೋ 2023ರೂ. ಪ್ಲ್ಯಾನ್ ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 630 GB ಡೇಟಾ ಸಿಗಲಿದೆ. ವೇಗದಲ್ಲಿ ಇಂಟರ್ನೆಟ್ ಇರಲಿದೆ. ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೂ ಅನಿಯಮಿತ ವಾಯಿಸ್‌ ಕರೆ ಲಭ್ಯ. ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 2999ರೂ. ಯೋಜನೆ ಪ್ರಯೋಜನ : ಜಿಯೋ ಟೆಲಿಕಾಂನ 2999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಆದ್ರೆ ಈಗ ಹೆಚ್ಚುವರಿಯಾಗಿ 23 ದಿನಗಳನ್ನು ನೀಡಿದ್ದು, ಒಟ್ಟು 388 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

Best Mobiles in India

English summary
As per latest online reports, JioCinema may soon attract a subscription fee. But currently offered as a free service to the users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+