Home
ಸುದ್ದಿಜಾಲ

ಜಿಯೋ ಮತ್ತು ಏರ್‌ಟೆಲ್‌ 1Gbps ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ : ಯಾವುದು ಬೆಸ್ಟ್?

ದೇಶಿಯ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಜಿಯೋ ಫೈಬರ್ ಹಾಗೂ ಏರ್‌ಟೆಲ್‌ ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಈ ಎರಡು ಟೆಲಿಕಾಂ ಸಂಸ್ಥೆಗಳು ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ಹಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಹಾಗೆಯೇ ಈ ಸಂಸ್ಥೆಗಳೆರಡು 100mbps ಹಾಗೂ 1Gbps ವೇಗದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಸಹ ಹೊಂದಿವೆ.

ಏರ್‌ಟೆಲ್

ಹೌದು, ಜಿಯೋ ಹಾಗೂ ಏರ್‌ಟೆಲ್ ಎಕ್ಸ್‌ಟ್ರಿಮ್‌ನ ಕೆಲವು ಯೋಜನೆಗಳು ಗ್ರಾಹಕ ಸ್ನೇಹಿ ಆಗಿವೆ. ಆ ಪೈಕಿ ಈ ಎರಡು ಕಂಪನಿಗಳ ಕೆಲವು ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು 1Gbps ವೇಗದಲ್ಲಿವೆ. ಆದರೆ 1Gbps ವೇಗದ ಪ್ಲ್ಯಾನ್‌ಗಳು ದುಬಾರಿ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿವೆ. ಆದರೆ ಈ ಎರಡು ಕಂಪನಿಗಳ 1Gbps ವೇಗದ ಬ್ರಾಡ್‌ಬ್ಯಾಂಡ್ ಯೋಜನೆಗಳ ಬೆಲೆ ಎಷ್ಟು/ ಪ್ರಯೋಜನಗಳೆನು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ನ ಈ ಯೋಜನೆ ದುಬಾರಿ ಬ್ರಾಡ್‌ಬ್ಯಾಂಡ್ ಯೋಜನೆಯಾಗಿದ್ದು, 3,999 ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಇಂಟರ್ನೆಟ್ ಮತ್ತು ಬೃಹತ್ 1 Gbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ವಾಯಿಸ್ ಕರೆ ಪ್ರಯೋಜನಗಳ ಜೊತೆಗೆ, ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಸಿಗುತ್ತವೆ. ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೇ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆಪ್ ಪ್ರೀಮಿಯಂನ ಉಚಿತ ಚಂದಾದಾರಿಕೆ ಲಭ್ಯ.

ಜಿಯೋ 3,999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ 3,999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ ಫೈಬರ್ 3,999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 1Gbps ಇಂಟರ್ನೆಟ್ ವೇಗವನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಡೇಟಾ ಸೌಲಭ್ಯ ಪಡೆದಿದೆ (3.3 ಟಿಬಿ ಎಫ್‌ಯುಪಿ ಡೇಟಾ). ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜೀ 5, ಸೋನಿ ಲಿವ್, ಸನ್‌ನೆಕ್ಸ್ಟ್‌, ವೂಟ್, ಎಎಲ್‌ಟಿ ಬಾಲಾಜಿ, ಹೊಯ್ಚೊಯ್, ಶೆಮರೂ ಮಿ, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ OTT ಪ್ರಯೋಜನಗಳು ಲಭ್ಯವಾಗಲಿವೆ.

ಯಾವುದು ಉತ್ತಮ ಆಯ್ಕೆ?

ಯಾವುದು ಉತ್ತಮ ಆಯ್ಕೆ?

ಜಿಯೋ ಫೈಬರ್ ಮತ್ತು ಏರ್‌ಟೆಲ್ ಎರಡೂ ಸಂಸ್ಥೆಗಳು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ನೀಡುತ್ತದೆ. ಹಾಗೆಯೇ 1Gbps ಇಂಟರ್ನೆಟ್ ವೇಗದಲ್ಲಿ ಆಕರ್ಷಕ ಪ್ರಯೋಜನಗಳನ್ನು ನೀಡಿವೆ. ಇವೆರಡರಲ್ಲಿ ಜಿಯೋ ಯೋಜನೆ ಉತ್ತಮ ಆಯ್ಕೆ ಅನಿಸಲಿದೆ.

Best Mobiles in India

English summary
JioFiber offers two 1 Gbps broadband plans compared to the one plan offered by Airtel Xstream Fiber.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+