ಜಿಯೋ ಮತ್ತು ಏರ್‌ಟೆಲ್‌ 999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ : ಯಾವುದು ಬೆಸ್ಟ್?

|

ದೇಶಿಯ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಇದೀಗ ಸಾಕಷ್ಟು ಅಪ್‌ಡೇಟ್‌ಗಳು ನಡೆದಿವೆ. ಪ್ರಮುಖ ಟೆಲಿಕಾಂ ಸಂಸ್ಥೆಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್‌ ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳುಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಸಂಸ್ಥೆಗಳ ಬಜೆಟ್‌ ದರದ. ಪ್ಲ್ಯಾನ್‌ಗಳು ಆಕರ್ಷಕ ಅನಿಸುತ್ತದೆ.

ಜಿಯೋ ಹಾಗೂ ಏರ್‌ಟೆಲ್

ಹೌದು, ಜಿಯೋ ಹಾಗೂ ಏರ್‌ಟೆಲ್ ಎಕ್ಸ್‌ಟ್ರಿಮ್‌ನ ಕೆಲವು ಯೋಜನೆಗಳು ಗ್ರಾಹಕ ಸ್ನೇಹಿ ಆಗಿವೆ. ಆ ಪೈಕಿ ಈ ಎರಡು ಕಂಪನಿಗಳ 999ರೂ. ಪ್ರೈಸ್‌ಟ್ಯಾಗ್‌ನ ಬ್ರಾಡ್‌ಬ್ಯಾಂಡ್‌ ಯೋಜನೆ ಗಮನ ಸೆಳೆದಿದೆ. ಇದಲ್ಲದೇ ಈ ಎರಡು ಕಂಪನಿಗಳು 1,499ರೂ ಮತ್ತು Rs 3,999ರೂ. ಪ್ರೈಸ್‌ನ ದುಬಾರಿ ಯೋಜನೆಗಳನ್ನು ಹೊಂದಿದೆ. ಆದರೆ 999ರೂ. ಯೋಜನೆಯಲ್ಲಿ ಯಾವುದು ಉತ್ತಮ ಆಯ್ಕೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್‌ 999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ 999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಏರ್‌ಟೆಲ್‌ ಈ ಬ್ರಾಡ್‌ಬ್ಯಾಂಡ್‌ ಯೋಜನೆಯು 999ರೂ. ಪ್ರೈಸ್‌ ಹೊಂದಿದ್ದು, ಜಿಎಸ್‌ಟಿ ಶುಲ್ಕ ಸೇರಿ 1,178ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಯೋಜನೆಯು 200 Mbps ವೇಗದಲ್ಲಿ ಸೇವೆ ಒದಗಿಸಲಿದೆ. ಇನ್ನು 30 ದಿನಗಳ ವ್ಯಾಲಿಡಿಟಿಯ ಈ ಯೋಜನೆಯಲ್ಲಿ 300GB ಡೇಟಾ ಪ್ರಯೋಜನ ದೊರೆಯುತ್ತದೆ. ಹೈದರಾಬಾದ್ ಮತ್ತು ವಿಜಯವಾಡದಂತಹ ಕೆಲವು ನಗರಗಳಲ್ಲಿ ಏರ್ಟೆಲ್ 999 ರೂ ಬ್ರಾಡ್ಬ್ಯಾಂಡ್ ಯೋಜನೆಯೊಂದಿಗೆ ಅನಿಯಮಿತ ಡೇಟಾವನ್ನು ಒದಗಿಸುತ್ತಿದೆ. ಹಾಗೆಯೇ ಒಟಿಟಿ ಪ್ರಯೋಜನಗಳಿಗೆ ಸಂಬಂಧಿಸಿದಂತೆ, ಅಮೆಜಾನ್ ಪ್ರೈಮ್ ವಿಡಿಯೋದ ಒಂದು ವರ್ಷದ ಚಂದಾದಾರಿಕೆ ಇದೆ.

ಜಿಯೋ 999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ 999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಜಿಯೋ ಫೈಬರ್ 999ರೂ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 150 Mbps ಇಂಟರ್ನೆಟ್ ವೇಗವನ್ನು ಹೊಂದಿದೆ. ಜಿಎಸ್‌ಟಿ ಶುಲ್ಕ ಸೇರಿ ಈ ಯೋಜನೆಯು 1,178ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಗ್ರಾಹಕರು ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಆದರೆ ನಾವು ಮೊದಲೇ ವರದಿ ಮಾಡಿದಂತೆ, ಜಿಯೋ ಫೈಬರ್‌ನಿಂದ ಅನಿಯಮಿತ ಡೇಟಾವು ಇನ್ನೂ ತಿಂಗಳಿಗೆ 3.3 ಟಿಬಿ ಡೇಟಾದ ಎಫ್‌ಯುಪಿ ಮಿತಿಯನ್ನು ಹೊಂದಿದೆ.

ಬ್ರಾಡ್‌ಬ್ಯಾಂಡ್

ಇದರೊಂದಿಗೆ, ನೀವು ಎಫ್‌ಯುಪಿ ಮಿತಿಯಿಲ್ಲದೆ ಉಚಿತ ಧ್ವನಿ ಕರೆ ಪ್ರಯೋಜನವನ್ನು ಪಡೆಯುತ್ತೀರಿ. ಬ್ರಾಡ್‌ಬ್ಯಾಂಡ್ ಯೋಜನೆಯ ಒಟಿಟಿ ಪ್ರಯೋಜನಗಳಿಗೆ ಬರುವುದರಿಂದ, ಗ್ರಾಹಕರು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಜೀ5 ಪ್ರೀಮಿಯಂ, ಸೋನಿಲೈವ್, ಸನ್ ಎನ್‌ಎಕ್ಸ್‌ಟಿ, ವೂಟ್, ಎಎಲ್‌ಟಿ ಬಾಲಾಜಿ, Hoichoi, ShemarooMe, Lionsgate Play, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ ಪಡೆಯಲು ಅರ್ಹರಾಗಿದ್ದಾರೆ.

ಯಾವುದು ಉತ್ತಮ ಆಯ್ಕೆ?

ಯಾವುದು ಉತ್ತಮ ಆಯ್ಕೆ?

ಜಿಯೋ ಫೈಬರ್ ಮತ್ತು ಏರ್‌ಟೆಲ್ ಎರಡೂ ಸಂಸ್ಥೆಗಳು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ನೀಡುತ್ತದೆ. 300GB ಡೇಟಾ ಅಗತ್ಯ ಇದ್ದರೇ ಏರ್‌ಟೆಲ್‌ ಆಯ್ಕೆ ಉತ್ತಮ. ಇನ್ನು ಅನಿಯಮಿತ ಡೇಟಾ ಸೌಲಭ್ಯ ಅಗತ್ಯ ಅನಿಸಿದರೇ ಜಿಯೋದ ಯೋಜನೆ ಬೆಸ್ಟ್ ಎಂದು ಹೇಳಬಹುದು.

Best Mobiles in India

English summary
JioFiber and Airtel Xstream Fiber offers their customers a Rs 999 plan with different data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X