ಜಿಯೋ ಫೈಬರ್ 199ರೂ. ಕಾಂಬೊ ಪ್ಲ್ಯಾನಿನಲ್ಲಿ 1000GB ಡೇಟಾ ಸೌಲಭ್ಯ!
ಇಡೀ ಜಗತ್ತನ್ನೇ ನಲುಗಿಸಿರುವ ಮಾಹಾಮಾರಿ ಕೊರೊನಾ ವೈರಸ್ ಭಾರತದಲ್ಲಿಯೂ ಒಕ್ಕರಿಸಿ ಭೀತಿ ಹೆಚ್ಚಿಸುತ್ತಿದೆ. ದೇಶದಲ್ಲಿ ಕೊರೊನಾ ವೈರಸ್ ವ್ಯಾಪಿಸುವುದನ್ನು ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಜಾರಿ ಮಾಡಿದೆ. ಹಾಕಿದೆ. ಈ ನಿಟ್ಟಿನಲ್ಲಿ ಜಿಯೋ ಟೆಲಿಕಾಂ ತನ್ನ ಬಳಕೆದಾರರಿಗೆ ಡಬಲ್ ಡೇಟಾ ಪ್ಲ್ಯಾನ್ ಸೇರಿದಂತೆ ಹಲವು ಅನುಕೂಲಕರ ಯೋಜನೆಗಳನ್ನು ಪರಿಚಯಿಸಿದೆ. ಆದ್ರೆ ಇದೀಗ ಜಿಯೋ ಫೈಬರ್ ಗ್ರಾಹಕರಿಗೆ ಮತ್ತೊಂದು ಬಿಗ್ ಕೊಡುಗೆ ಘೋಷಿಸಿದೆ.
ಹೌದು, ಲಾಕ್‌ಡೌನ್ ಪರಿಣಾಮದಿಂದಾಗಿ ಜಿಯೋ ಟೆಲಿಕಾಂ ಅಧಿಕ ಡೇಟಾ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಹಾಗೆಯೇ ಈಗ ಜಿಯೋ ಫೈಬರ್ 199ರೂ. ಬ್ರಾಡ್‌ಬ್ಯಾಂಡ್ ಕಾಂಬೊ ಪ್ಲ್ಯಾನ್ ಆಫರ್ ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 1TB/1000GB ಡೇಟಾ ಸೌಲಭ್ಯ ದೊರೆಯುತ್ತದೆ. ಇಂಟರ್ನೆಟ್ ವೇಗವು 100 Mbps ಸಾಮರ್ಥ್ಯದಲ್ಲಿರಲಿದ್ದು, ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಈ ಕಾಂಬೊ ಪ್ಲ್ಯಾನ್ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಜಿಯೋ ಫೈಬರ್ 199ರೂ. ಕಾಂಬೊ ಪ್ಲ್ಯಾನ್
ಜಿಯೋ ಪರಿಚಯಿಸಿರುವ ಜಿಯೋ ಫೈಬರ್ 199ರೂ. ಬ್ರಾಡ್‌ಬ್ಯಾಂಡ್ ಕಾಂಬೊ ಪ್ಲ್ಯಾನ್ ಒಟ್ಟು 1TB/1000GB ಡೇಟಾ ಪ್ರಯೋಜನೆಯನ್ನು ಒದಗಿಸಲಿದ್ದು. ಇಂಟರ್ನೆಟ್ ವೇಗವು 100 Mbps ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯವು ಸಹ ಗ್ರಾಹಕರಿಗೆ ದೊರೆಯುತ್ತದೆ. ಅಂದಹಾಗೆ ಈ ಕೊಡುಗೆಯು 7 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಅಧಿಕ ಡೇಟಾ ಬಳಕೆಯ ಗ್ರಾಹಕರಿಗೆ ಉತ್ತಮ ಅನಿಸಲಿದೆ.

ಜಿಎಸ್‌ಟಿ ಶುಲ್ಕ ಸೇರುತ್ತೆ
ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಕಾಂಬೊ ಪ್ಲ್ಯಾನ್ ಬೆಲೆಯು 199ರೂ. ಆಗಿದೆ. ಆದರೆ ಇದರೊಂದಿಗೆ ಜಿಎಸ್‌ಟಿ ಶುಲ್ಕವು ಸೇರಿದರೇ ಒಟ್ಟು 234.82ರೂ. ಶುಲ್ಕ ಆಗುತ್ತದೆ. 100 Mbps ಸಾಮರ್ಥ್ಯದಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸಲಿದ್ದು, ನಿಗಧಿತ ಡೇಟಾ ಮುಗಿದ ಬಳಿಕ 1 Mbps ಸಾಮರ್ಥ್ಯದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

ತಿಂಗಳ ರೀಚಾರ್ಜ್ ಆಯ್ಕೆ ಸಹ ಇದೆ
ಈಗಾಗಲೇ ಬೇರೆ ಜಿಯೋ ಫೈಬರ್ ಪ್ಲ್ಯಾನ್ ರೀಚಾರ್ಜ್ ಮಾಡಿಕೊಂಡಿರುವ ಗ್ರಾಹಕರು ಸಹ ಈ ಜಿಯೋ ಫೈಬರ್ 199ರೂ ಕಾಂಬೊ ಯೋಜನೆಯ ಸೌಲಭ್ಯ ಪಡೆಯಬಹುದು. ಹಾಗೆಯೇ ಗ್ರಾಹಕರು ಸ್ವತಂತ್ರ ಯೋಜನೆಯಾಗಿಯು ಈ ಪ್ಲ್ಯಾನ್ ಅನ್ನು ಆಯ್ಕೆ ಮಾಡಬಹುದು. ಗ್ರಾಹಕರು ಈ ಕಾಂಬೊ ಯೋಜನೆಯನ್ನು ಒಂದು ತಿಂಗಳ ಅವಧಿಗೆ ಬೇಕಿದ್ದರೇ, 1,100 ರೂ. (ಜಿಎಸ್‌ಟಿ ಸೇರಿದಂತೆ) ಶುಲ್ಕ ಭರಿಸಬೇಕಿದೆ. ತಿಂಗಳಿಗೆ ಒಟ್ಟಾರೆ 4.5TB ಡೇಟಾ ಸೌಲಭ್ಯ ದೊರೆಯುತ್ತದೆ.

ಇತರೆ ಜಿಯೋ ಬ್ರಾಡ್‌ಬ್ಯಾಂಡ್ ಪ್ಲ್ಯಾನ್
ಜಿಯೋ ಫೈಬರ್ ಒಟ್ಟು ಆರು ಪ್ರೈಸ್‌ಟ್ಯಾಗ್ ಮಾದರಿಯಲ್ಲಿ ಭಿನ್ನ ಪ್ರಯೋಜನಗಳನ್ನು ಒಳಗೊಂಡ ತಿಂಗಳ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ 699ರೂ. ಬ್ರಾಂಜ್ ಎಂಟ್ರಿ ಲೆವೆಲ್ ಪ್ಲ್ಯಾನ್ ಆಗಿದೆ. ನಂತರ ಸಿಲ್ವರ್ 849ರೂ, ಪ್ಲ್ಯಾನ್, ಗೋಲ್ಡ್ 1299ರೂ. ಪ್ಲ್ಯಾನ್, ಡೈಮಂಡ್ 2499ರೂ. ಪ್ಲ್ಯಾನ್, ಪ್ಲಾಟಿನಂ 3999ರೂ. ಪ್ಲ್ಯಾನ್ ಹಾಗೂ 8,499ರೂ. ಬೆಲೆಯ ಟೈಟಾನಿಯಂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್. ಈ ಎಲ್ಲ ಪ್ಲ್ಯಾನ್‌ಗಳು ವಾಯಿಸ್ ಕರೆ, ವಿಡಿಯೊ ಕರೆ ಹಾಗೂ ಇತರೆ ಹೆಚ್ಚುವರಿ ಸೌಲಭ್ಯಗಳನ್ನು ಪಡೆದಿವೆ.

ATM ಸೆಂಟರ್‌ನಲ್ಲಿಯೂ ಜಿಯೋ ರೀಚಾರ್ಜ್
ಜಿಯೋ ಸಂಸ್ಥೆಯು ಚಂದಾದಾರರ ಅನುಕೂಲಕ್ಕಾಗಿ ಬ್ಯಾಂಕ್ ATM ಸೆಂಟರ್‌ಗಳಿಂದಲೇ ಜಿಯೋ ನಂಬರ್ ರೀಚಾರ್ಜ್ ಮಾಡಿಕೊಳ್ಳುವ ಹೊಸದೊಂದು ಸೌಲಭ್ಯವನ್ನು ಪರಿಚಯಿಸಿದೆ. ಲಾಕ್‌ಡೌನ್ ಸಮಯದಲ್ಲಿ ಈ ಸೇವೆಯು ಗ್ರಾಹಕರಿಗೆ ಉಪಯುಕ್ತ ಅನಿಸಲಿದೆ. ಆದರೆ ಕೆಲವು ಆಯ್ದ ಬ್ಯಾಂಕ್ ATMಗಳು ಮಾತ್ರ ಈ ಸೇವೆಯನ್ನು ಬೆಂಬಲಿಸುತ್ತವೆ ಎಂಬುದನ್ನು ಗ್ರಾಹಕರಿಗೆ ತಿಳಿದಿರಲಿ.

ಪ್ರಸ್ತುತ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಯುಎಫ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಸಿಟಿಬ್ಯಾಂಕ್, ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕುಗಳು ಜಿಯೋದ ಈ ಹೊಸ ರೀಚಾರ್ಜ್ ಸೌಲಭ್ಯವನ್ನು ಬೆಂಬಲಿಸುತ್ತವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್‌ಗಳನ್ನು ಈ ಸೌಲಭ್ಯಯನ್ನು ಬೆಂಬಲಿಸಲಿವೆಯೇ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹಾಗಾದರೇ ಎಟಿಎಂ ಕಾರ್ಡ್ ಬಳಸಿ ಜಿಯೋ ಸಂಖ್ಯೆಯನ್ನು ರೀಚಾರ್ಜ್ ಮಾಡುವುದು ಹೇಗೆ? ರೀಚಾರ್ಜ್ ಮಾಡುವಾಗ ಯಾವೆಲ್ಲ ಹಂತಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಬ್ಯಾಂಕ್ ATMನಿಂದ ಜಿಯೋ ನಂಬರ್ ರೀಚಾರ್ಜ್ ಮಾಡುವಾಗ ಈ ಹಂತ ಅನುಸರಿಸಿ
* ATM ಮಶಿನ್‌ನಲ್ಲಿ ಡೆಬಿಟ್ ಕಾರ್ಡ್ ಸೇರಿಸಿ
* ರೀಚಾರ್ಜ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ
* ಜಿಯೋ ನಂಬರ್ ನಮೂದಿಸಿ
* ATM ಪಿನ್ ಎಂಟ್ರಿ ಮಾಡಿ
* ರೀಚಾರ್ಜ್ ಮೊತ್ತ ಆಯ್ಕೆ ಮಾಡಿ.
* ರೀಚಾರ್ಜ್ ಖಚಿತಪಡಿಸಲು Enter ಒತ್ತಿರಿ.
* ನೆನಪಿರಲಿ- ಕೆಲವು ಆಯ್ದ ATMಗಳು ಮಾತ್ರ ಈ ಸೇವೆ ಬೆಂಬಲಿಸಲಿವೆ.


Click it and Unblock the Notifications








