ಜಿಯೋ 1499ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌; BSNL ಮತ್ತು ಏರ್‌ಟೆಲ್‌ಗೆ ಮುಳುವಾಗಿದೆಯೇ?

|

ಭಾರತದ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಇತ್ತೀಚಿಗೆ ಸಾಕಷ್ಟು ಮಹತ್ತರ ಬದಲಾವಣೆ ಆಗಿವೆ. ಬ್ರಾಡ್‌ಬ್ಯಾಂಡ್ ಪೂರೈಕೆದಾರ ಸಂಸ್ಥೆಗಳು ಚಂದಾದಾರರ ಸಂಖ್ಯೆ ಹೆಚ್ಚಿಸಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ ರಿಲಾಯನ್ಸ್‌ ಜಿಯೋ, ಬಿಎಸ್‌ಎನ್‌ಎಲ್‌ ಹಾಗೂ ಭಾರ್ತಿ ಏರ್‌ಟೆಲ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ ಸಂಸ್ಥೆಗಳ ಕೆಲವು ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು ಆಕರ್ಷಕ ಅನಿಸಿವೆ. ಅವುಗಳಲ್ಲಿ ಮುಖ್ಯವಾಗಿ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿದೆ.

ಬಿಎಸ್‌ಎನ್‌ಎಲ್‌

ರಿಲಾಯನ್ಸ್‌ ಜಿಯೋ ಫೈಬರ್, ಬಿಎಸ್‌ಎನ್‌ಎಲ್‌ ಹಾಗೂ ಭಾರ್ತಿ ಏರ್‌ಟೆಲ್ ಸಂಸ್ಥೆಗಳು 1,499ರೂ.ಗಳ ಯೋಜನೆ ಹೊಂದಿದ್ದು, ಈ ಬೆಲೆಗೆ ಮೂರು ಬ್ರಾಡ್‌ಬ್ಯಾಂಡ್‌ ಕಂಪನಿಗಳು 300 Mbps ವೇಗವನ್ನು ಪ್ರಯೋಜನ ನೀಡುತ್ತಿವೆ. ಆದರೆ ಈ ಮೂರು ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ಭಿನ್ನ ಸೌಲಭ್ಯಗಳನ್ನು ಹೊಂದಿವೆ. ಪ್ರಯೋಜನಗಳ ಗಮನಿಸಿದಾಗ ಜಿಯೋ ಫೈಬರ್ ಬಿಎಸ್‌ಎನ್‌ಎಲ್‌ ಮತ್ತು ಏರ್‌ಟೆಲ್‌ಗೆ ಮುಳುವಾಗಿದೆಯೇ ಅಂತಾ ಅನಿಸುತ್ತದೆ.

ಜಿಯೋ

ಹೌದು, ಜಿಯೋ ಫೈಬರ್ ಹಲವು ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿದೆ. ಬಹುತೇಕ ಯೋಜನೆಗಳು ಹೆಚ್ಚುವರಿಯಾಗಿ ಓಟಿಟಿ ಪ್ರಯೋಜನ ಪಡೆದಿವೆ. ಅದೇ ರೀತಿ ಜಿಯೋ ಫೈಬರ್ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಸಹ ತನ್ನ ವರ್ಗದಲ್ಲಿಯೇ ಇತರೆ ಕಂಪನಿಗಳ ಯೋಜನೆಗಳಿಗಿಂತ ಅಧಿಕ ಓಟಿಟಿ ಚಂದಾದಾರಿಕೆಯ ಪ್ರಯೋಜನ ಒದಗಿಸಿದೆ. ಈ ನಿಟ್ಟಿನಲ್ಲಿ ಜಿಯೋ ಫೈಬರ್‌ ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ಗಳಿಗೆ ನೇರ ಸವಾಲಾಗಿದೆ. ಹಾಗಾದರೇ ಜಿಯೋ ಫೈಬರ್, ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ನ 1499ರೂ. ಯೋಜನೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಫೈಬರ್ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಜಿಯೋ ಫೈಬರ್ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಜಿಯೋ ಫೈಬರ್ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಉನ್ನತ ಶ್ರೇಣಿಯ ಬ್ರಾಡ್‌ಬ್ಯಾಂಡ್‌ ಆಗಿ ಕಾಣಿಸಿಕೊಂಡಿದೆ. ಈ ಯೋಜನೆಯು ಅನಿಯಮಿತ ಡೇಟಾ (3.3TB) ಪ್ರಯೋಜನ ಪಡೆದಿದ್ದು, 300 Mbps ವೇಗವನ್ನು ಪಡೆದಿದೆ. ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಸಹ ಲಭ್ಯ. ಹಾಗೆಯೇ ಇದರೊಂದಿಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ 15 ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಪ್ರಯೋಜನ ಲಭ್ಯವಾಗಲಿದೆ. ಜನಪ್ರಿಯ ನೆಟ್‌ಫ್ಲಿಕ್ಸ್‌, ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಸೋನಿ ಲಿವ್, ಜಿಯೋ ಸಿನೆಮಾ, ಜೀ 5 ನಿಂದ ಸ್ಟ್ರೀಮಿಂಗ್ ಪ್ರಯೋಜನಗಳು ದೊರೆಯುತ್ತವೆ.

ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಈ ಯೋಜನೆಯು ಅನಿಯಮಿತ ಡೇಟಾ ಪ್ರಯೋಜನ ಪಡೆದಿದ್ದು, 300 Mbps ವೇಗವನ್ನು ಪಡೆದಿದೆ. ಹಾಗೆಯೇ ಇದರೊಂದಿಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಕೆಲವು ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಪ್ರಯೋಜನ ಲಭ್ಯವಾಗಲಿದೆ. ಅವುಗಳೆಂದರೇ ಡಿಸ್ನಿ+ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ, ವಿಂಕ್ ಮ್ಯೂಸಿಕ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ ಆಗಿವೆ.

ಬಿಎಸ್‌ಎನ್‌ಎಲ್‌ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ 1499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ 1,499ರೂ. ಭಾರತ್ ಫೈಬರ್ ಪ್ಲ್ಯಾನ್ ಬಿಎಸ್‌ಎನ್‌ಎಲ್ ಈ ಯೋಜನೆಯನ್ನು ಫೈಬರ್ ಅಲ್ಟ್ರಾ ಬ್ರಾಡ್‌ಬ್ಯಾಂಡ್ ಯೋಜನೆ ಎಂದು ಹೆಸರಿಸಲಾಗಿದೆ. ಈ ಯೋಜನೆಯ ತಿಂಗಳ ಶುಲ್ಕ 1,499ರೂ. ಆಗಿದೆ. ಈ ಯೋಜನೆಯು 300 ಎಮ್‌ಬಿಪಿಎಸ್ ವೇಗದೊಂದಿಗೆ ಬರುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ವಿಐಪಿ ಚಂದಾದಾರಿಕೆಯ ಪ್ರಯೋಜನ ನೀಡಿದೆ.

ಮೂರು ಬ್ರಾಡ್‌ಬ್ಯಾಂಡ್‌ ಯೋಜನೆಗಳಲ್ಲಿ ಯಾವುದು ಉತ್ತಮ?

ಮೂರು ಬ್ರಾಡ್‌ಬ್ಯಾಂಡ್‌ ಯೋಜನೆಗಳಲ್ಲಿ ಯಾವುದು ಉತ್ತಮ?

ಜಿಯೋ ಫೈಬರ್, ಬಿಎಸ್‌ಎನ್‌ಎಲ್‌ ಮತ್ತು ಬಾರ್ತಿ ಏರ್‌ಟೆಲ್ ಟೆಲಿಕಾಂ ಈ ಮೂರು ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಪ್ರಯೋಜನಗಳನ್ನು ಒದಗಿಸಿವೆ. ಜಿಯೋ ಫೈಬರ್‌ನ ಯೋಜನೆಯು ಡೇಟಾ ಜೊತೆಗೆ ಹೆಚ್ಚಿನ ಓಟಿಟಿ ಪ್ರಯೋಜನಗಳನ್ನು ಪಡೆದಿದೆ. ಇನ್ನು ಭಾರ್ತಿ ಏರ್‌ಟೆಲ್‌ನ ಟೆಲಿಕಾಂ ಸಹ ಕೆಲವು ಓಟಿಟಿ ಸೌಲಬ್ಯ ಒದಗಿಸಿದೆ. ಆದರೆ ಬಿಎಸ್‌ಎನ್‌ಎಲ್‌ನಲ್ಲಿ ಹೆಚ್ಚಿನ ಓಟಿಟಿ ಚಂದಾದಾರಿಕೆ ಪ್ರಯೋಜನ ಇಲ್ಲ. ಜಿಯೋ ಫೈಬರ್ 16 ಓಟಿಟಿ ಸೇವೆಗಳನ್ನು ಹೊಂದಿರುವುದು ಗ್ರಾಹಕರನ್ನು ಆಕರ್ಷಿಸಲಿದೆ.

Best Mobiles in India

English summary
JioFiber VS Airtel VS BSNL Rs 1499 Broadband Plan Compare: All You Need To Know .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X