ಜಿಯೋ ಸಂಸ್ಥೆಯಿಂದ ಜಿಯೋ ಫೈನಾನ್ಸ್ ಆಪ್ ಘೋಷಣೆ; ಪ್ರಯೋಜನಗಳು ಏನು?
ಜಿಯೋ ಫೈನಾನ್ಷಿಯಲ್ ಸರ್ವೀಸ್ ತನ್ನದೇ ಆದ 'ಜಿಯೋ ಫೈನಾನ್ಸ್' (JioFinance) ಆಪ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇನ್ನು ಈ ಆಪ್ ಬೀಟಾ ಮೋಡ್ ನಲ್ಲಿ ಇರಲಿದ್ದು, ದೈನಂದಿನ ಆರ್ಥಿಕ ವ್ಯವಹಾರಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್ ನಲ್ಲಿ ಹೊಸ ಬದಲಾವಣೆ ತರಲಿದೆ. ಈ ಆಪ್ ಯಾವುದೇ ಅಡೆತಡೆಗಳು ಇಲ್ಲದಂತೆ ಡಿಜಿಟಲ್ ಬ್ಯಾಂಕಿಂಗ್, ಯುಪಿಐ ವಹಿವಾಟುಗಳು, ವಿಮಾ ಸಲಹೆಯನ್ನು ಸಂಯೋಜಿಸುತ್ತದೆ ಮತ್ತು ಖಾತೆಗಳು ವೀಕ್ಷಣೆ ಮಾಡುವುನ್ನು ಹಾಗೂ ಉಳಿತಾಯಗಳ ಏಕೀಕೃತ ನೋಟವನ್ನು ಒದಗಿಸುತ್ತದೆ.
ಜಿಯೋ ಫೈನಾನ್ಸ್ ಆಪ್‌ನ ಆ ಎಲ್ಲವೂ ಒಂದೇ ಬಳಕೆದಾರ ಸ್ನೇಹಿ ಇಂಟರ್‌ಫೇಸ್‌ನಲ್ಲಿ ಲಭ್ಯ ಇರಲಿದೆ. ಈ ಆಪ್ ಅನ್ನು ರೂಪಿಸಿರುವುದೇ ಘರ್ಷಣೆ ಕಡಿಮೆ ಮಾಡಿ ನೇವಿಗೇಟ್ ಮಾಡಲು ನೆರವಾಗಲು. ಆರ್ಥಿಕ ವಿಚಾರದ ಬಗ್ಗೆ ಎಷ್ಟು ಕನಿಷ್ಠ ಅಥವಾ ಗರಿಷ್ಠ ಜ್ಞಾನ ಮತ್ತು ಯಾವುದೇ ಹಂತದ ಆರ್ಥಿಕ ತಂತ್ರಜ್ಞಾನದ ಜ್ಞಾನ ಇರುವಂಥ ಬಳಕೆದಾರರಿಗೆ ಜಿಯೋಫೈನಾನ್ಸ್ ಆಪ್ ಸೇವೆಯನ್ನು ನೀಡುತ್ತದೆ. ಹೀಗಾಗಿ ಹಣಕಾಸು ನಿರ್ವಹಣೆಯನ್ನು ಬೆರಳ ತುದಿಯಲ್ಲಿ ಸುಲಭವಾಗಿ ಮಾಡಬಹುದು ಎಂಬುದನ್ನು ಖಚಿತಪಡಿಸುತ್ತದೆ.

ಅಂದಹಾಗೆ ಈ ಆಪ್‌ನಲ್ಲಿ ಕೆಲವು ಭವಿಷ್ಯದ ಯೋಜನೆಗಳು ಕೂಡಾ ಇವೆ. ಅವು ಯಾವುವೆಂದರೆ, ಸಾಲದ ಸಲ್ಯೂಷನ್ ಗಳ ವಿಸ್ತರಣೆ, ಮ್ಯೂಚುವಲ್ ಫಂಡ್ ಗಳ ಮೇಲೆ ಸಾಲದೊಂದಿಗೆ ಆರಂಭ ಮತ್ತು ಗೃಹ ಸಾಲದ ತನಕ ಮುಂದುವರಿಸುವುದು, ಬದಲಾಗುತ್ತಿರುವ ಗ್ರಾಹಕರ ಅಗತ್ಯಗಳ ಜತೆಗೆ ಬದ್ಧತೆ ಪ್ರದರ್ಶಿಸುವುದಾಗಿದೆ.
ಜಿಯೋ ಫೈನಾನ್ಸ್ ಸೇವೆಯು ನಂಬಿಕೆ, ಪ್ರಸ್ತುತತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡುತ್ತದೆ. ಡಿಜಿಟಲ್ ಬ್ಯಾಂಕಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ನಿರಂತರ ಸುಧಾರಣೆಗಾಗಿ ಜಿಯೋ ಫೈನಾನ್ಸ್ ಬಳಕೆದಾರರ ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡುತ್ತದೆ. 'ಜಿಯೋ ಪೇಮೆಂಟ್ ಬ್ಯಾಂಕ್ ಅಕೌಂಟ್' ಫೀಚರ್ಸ್ ಜೊತೆಗೆ ಶೀಘ್ರವಾಗಿ ಡಿಜಿಟಲ್ ಖಾತೆ ತೆರೆಯುವುದು ಮತ್ತು ಸುವ್ಯವಸ್ಥಿತ ಬ್ಯಾಂಕ್ ನಿರ್ವಹಣೆಯ ಪ್ರಮುಖ ಆಯ್ಕೆಗಳನ್ನು ಪಡೆದುಕೊಂಡಿದೆ.
ನಾವು ಮಾರುಕಟ್ಟೆಗೆ ಹೊಸದಾಗಿ 'ಜಿಯೋ ಫೈನಾನ್ಸ್' ಆಪ್ ಅನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ. ಪ್ರಸ್ತುತ ಯಾವುದೇ ವ್ಯಕ್ತಿಯು ತನ್ನ ಹಣಕಾಸನ್ನು ನಿರ್ವಹಿಸುವ ವಿಧಾನವನ್ನು ಮರುವ್ಯಾಖ್ಯಾನಿಸುವ ಗುರಿ ಹೊಂದಿದ ಪ್ಲಾಟ್ ಫಾರ್ಮ್ ಇದಾಗಿದೆ. ಯಾವುದೇ ಬಳಕೆದಾರರಿಗಾಗಿ ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಹಣಕಾಸಿಗೆ ಸಂಬಂಧಿಸಿದ ಎಲ್ಲವನ್ನೂ ಸರಳಗೊಳಿಸುವುದು ನಮ್ಮ ಅಂತಿಮ ಗುರಿಯಾಗಿದೆ.
ಇನ್ನು ಎಲ್ಲ ಜನರಿಗೆ, ಸಾಲ ನೀಡುವಿಕೆ, ಹೂಡಿಕೆ, ವಿಮೆ, ಪೇಮೆಂಟ್ ಗಳು ಮತ್ತು ವಹಿವಾಟುಗಳಂತಹ ಕೊಡುಗೆಗಳ ಸಮಗ್ರ ಆಯ್ಕೆಯ ಜತೆಗೆ ಮತ್ತು ಹಣಕಾಸು ಸೇವೆಗಳನ್ನು ಹೆಚ್ಚು ಪಾರದರ್ಶಕ, ಕೈಗೆಟುಕುವ ಹಾಗೂ ಅರ್ಥಪೂರ್ಣವಾಗಿ ನೀಡಲಾಗುತ್ತದೆ ಎಂದು ಕಂಪನಿಯ ವಕ್ತಾರರು ಹೇಳಿದರು. ಅಂದಹಾಗೆ ಅಪ್‌ಡೇಟ್‌ಗಾಗಿ ಅಧಿಕೃತ www.jfs.in ಗೆ ಭೇಟಿ ನೀಡಿರಿ.
ಟಾಪ್ 100 ಪ್ರಭಾವಿ ಸಂಸ್ಥೆಗಳ ಲಿಸ್ಟ್‌ನಲ್ಲಿ ರಿಲಯನ್ಸ್
ಅಮೆರಿಕದ ಜನಪ್ರಿಯ ನಿಯತಕಾಲಿಕ ಟೈಮ್, ಬಿಡುಗಡೆ ಮಾಡಿರುವ ಜಗತ್ತಿನ ಪ್ರಮುಖ 100 ಪ್ರಭಾವಿ ಸಂಸ್ಥೆಗಳ ಲಿಸ್ಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಭಾರತದ ಮೂರು ಸಂಸ್ಥೆಗಳಿ ಸ್ಥಾನ ಪಡೆದುಕೊಂಡಿವೆ. ಅವುಗಳಯ ಕ್ರಮವಾಗಿ ರಿಲಯನ್ಸ್ ಇಂಡಸ್ಟ್ರೀಸ್, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಟಾಟಾ ಸಮೂಹ ಆಗಿವೆ.
ಈ ಲಿಸ್ಟ್ ಅನ್ನು 5 ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ನಾಯಕ, ಆವಿಷ್ಕಾರ, ನಾವೀನ್ಯ, ಟೈಟಾನ್ (ಶಕ್ತಿಶಾಲಿ) ಮತ್ತು ಪ್ರವರ್ತಕ ಎಂದು ವರ್ಗೀಕರಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಸಮೂಹವು ಟೈಟಾನ್ (ಶಕ್ತಿಶಾಲಿ) ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರವರ್ತಕರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದೆ.


Click it and Unblock the Notifications








