ಜಿಯೊ ಗೀಗಾಫೈಬರ್ ಬಗ್ಗೆ ಮತ್ತೆ ಸಿಹಿಸುದ್ದಿ ನೀಡಿದ ಅಂಬಾನಿ!
ರಿಲಾಯನ್ಸ್ ಜಿಯೊ ಪ್ರತಿಯೊಬ್ಬರಿಗೆ, ಎಲ್ಲಕಡೆಯೂ, ಪ್ರತಿಯೊಂದರ ಜತೆ ಗರಿಷ್ಠ ವೇಗದ ಸಂಪರ್ಕ ಕಲ್ಪಿಸಿಕೊಡಲಿದೆ. ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಸೇವೆ ಒದಗಿಸಲಿದೆ. ಜಿಯೊ ಗೀಗಾಫೈಬರ್ ಅಳವಡಿಕೆಯಿಂದಾಗಿ ಸ್ಥಿರ ಮತ್ತು ಮೊಬೈಲ್ ಮೂಲಕ ಗ್ರಾಹಕರು ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್ ಸೇವೆ ಪಡೆಯಲಿದ್ದಾರೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ರಿಲಾಯನ್ಸ್ ಜಿಯೊ ಫೈಬರ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆ ಬಳಕೆಗೆ ಬಂದ ನಂತರ ಭಾರತವು ಸ್ಥಿರ ಬ್ರಾಡ್‌ಬ್ಯಾಂಡ್ ಬಳಕೆಯಲ್ಲಿ ವಿಶ್ವದ ಮುಂಚೂಣಿ ಮೂರು ದೇಶಗಳಲ್ಲಿ ಒಂದಾಗಲಿದೆ. ವಿಶ್ವದಲ್ಲಿ 135ನೇ ಸ್ಥಾನದಲ್ಲಿ ಇರುವ ಭಾರತ 3ನೇ ಸ್ಥಾನಕ್ಕೆ ಏರಲಿದೆ ಎಂದು ನವದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಮೊಬೈಲ್ ಸಮ್ಮೇಳನದಲ್ಲಿ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಮೊಬೈಲ್ ಡೇಟಾ ಬಳಕೆಯಲ್ಲಿ 155ನೇ ಸ್ಥಾನದಲ್ಲಿದ್ದ ಭಾರತವು ಎರಡು ವರ್ಷಗಳಲ್ಲಿ ಮೊದಲ ಸ್ಥಾನಕ್ಕೆ ಏರಿದೆ. ಸಂವಹನ ಮತ್ತು ಕೈಗೆಟುಕುವ ಬೆಲೆ ವಿಷಯದಲ್ಲಿ ಸರಿಸಾಟಿ ಇಲ್ಲದ ಸಮನ್ವಯತೆ ಕಂಡು ಬಂದಿದೆ. ದೇಶದ ಮೊಬೈಲ್ ತಂತ್ರಜ್ಞಾನ ಕ್ಷೇತ್ರದಲ್ಲಿ 2ಜಿ, 3ಜಿಯಿಂದ 4ಜಿಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆ ಕ್ಷಿಪ್ರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ವಿಶ್ವದ ಯಾವುದೇ ಭಾಗದಲ್ಲಿಯೂ ಇಷ್ಟು ವೇಗದಲ್ಲಿ 4ಜಿಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆ ನಡೆಯುತ್ತಿಲ್ಲ. ಹಾಗಾಗಿ, 2020ರ ವೇಳೆಗೆ ದೇಶದಾದ್ಯಂತ '4ಜಿ' ಸೌಲಭ್ಯವು ಸಂಪೂರ್ಣವಾಗಿ ವಿಸ್ತರಣೆಯಾಗಲಿದೆ. ಭವಿಷ್ಯದಲ್ಲಿ 5ಜಿಗೆ ಮುನ್ನಡೆಯಲು ಭಾರತವು ಎಲ್ಲರಿಗಿಂತ ಮುಂಚೂಣಿಯಲ್ಲಿ ಇರಲಿದೆ ಎನ್ನುವುದು ತಮ್ಮ ನಂಬಿಕೆಯಾಗಿದೆ ಎಂದು ಅಭಿಪ್ರಾಯ ಅವರು ತಿಳಿಸಿದ್ದಾರೆ.

2016ರಲ್ಲಿ ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟ ಜಿಯೊ, ಈಗ ಗರಿಷ್ಠ ವೇಗದ ಫೈಬರ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಯನ್ನು ಮನೆ ಮತ್ತು ಕಚೇರಿಗಳಿಗೆ ಒದಗಿಸಲು ಮುಂದಾಗಿದೆ. ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡಿ ದೂರಸಂಪರ್ಕ ಕ್ಷೇತ್ರದಲ್ಲಿ ಭಾರಿ ಸಂಚಲನ ಉಂಟು ಮಾಡಿರುವ ಜಿಯೋ, ಈಗ ಬ್ರಾಡ್‌ಬ್ಯಾಂಡ್ ಸೇವೆಯಲ್ಲಿಯೂ ಬದಲಾವಣೆ ತರಲಿದೆ ಎನ್ನಲಾಗಿದೆ.
ಓದಿರಿ: 'ಪೇಟಿಎಂ' ಬಳಕೆದಾರರಿಗೆ ಬಿಗ್‌ಶಾಕ್!..ಈಗಲೇ ಆಪ್ ಡಿಲೀಟ್ ಮಾಡಿ!!


Click it and Unblock the Notifications