ಗುಡ್‌ನ್ಯೂಸ್; ಜಿಯೋ ಫೈಬರ್‌ನಲ್ಲಿ ಈಗ ಮತ್ತೊಂದು ಸೇವೆ ಸೇರ್ಪಡೆ!
ಜಿಯೋ ಸೆಟ್ ಟಾಪ್ ಬಾಕ್ಸ್ ಮೂಲಕ ಈಗ ಜಿಯೋ ಫೈಬರ್ ಬಳಕೆದಾರರಿಗೂ ಸಿಗಲಿದೆ ಜಿಯೋ ನ್ಯೂಸ್ ಆಪ್. ಜಿಯೋ ನ್ಯೂಸ್ ಅಂದರೆ ಬ್ರೇಕಿಂಗ್ ನ್ಯೂಸ್, ವಿಡಿಯೋಗಳು, ನಿಯತಕಾಲಿಕೆ, ವೃತ್ತಪತ್ರಿಕೆ ಹಾಗೂ ಫೋಟೋ ಗ್ಯಾಲರಿಗಳು ಎಲ್ಲವೂ ಒಂದೇ ಕಡೆ ಸಿಗುವ ಡಿಜಿಟಲ್ ನ್ಯೂಸ್ ಅಪ್ಲಿಕೇಷನ್.

ಈಗ ಜಿಯೋ ಸೆಟ್ ಟಾಪ್ ಬಾಕ್ಸ್ ಗೆ ಜಿಯೋ ನ್ಯೂಸ್ ಅನ್ನು ಸೇರಿಸಿರುವುದರಿಂದ ವಿವಿಧ ಆನ್ ಲೈನ್ ಸುದ್ದಿ ಮೂಲಗಳಿಂದ ಎಷ್ಟೆಲ್ಲ ಮಾಹಿತಿ ದೊರೆಯಲಿವೆ. ನಿಯತಕಾಲಿಕೆ, ವೃತ್ತಪತ್ರಿಕೆ, ವಿಡಿಯೋ, ಫೋಟೋಗಳು, ಟ್ರೆಂಡಿಂಗ್ ವಿಷಯಗಳ ಸುದ್ದಿ ಇವೆಲ್ಲವೂ ಪ್ರಮುಖ ಆನ್ ಲೈನ್ ಸುದ್ದಿ ಮೂಲಗಳಿಂದಲೇ ದೊರೆಯಲಿವೆ.

ನಿಮಗೆ ಈಗಾಗಲೇ ಗೊತ್ತಿರುವ ಹಾಗೆ ಸೆಟ್ ಟಾಪ್ ಬಾಕ್ಸ್ ಮೂಲಕ ಹಲವು ಹೆಸರಾಂತ ಒಟಿಟಿ ಅಪ್ಲಿಕೇಷನ್ ದೊರೆಯುತ್ತಿವೆ. ಮನರಂಜನೆ, ಆರೋಗ್ಯ, ಸಂಗೀತ, ಕ್ರೀಡೆ, ಶಿಕ್ಷಣ, ಸುದ್ದಿ ಇನ್ನೂ ಅನೇಕ ಬಗೆಯ ವಿಶೇಷಗಳು ದೊರೆಯುತ್ತಿವೆ. ಇನ್ನು ಜಿಯೋದ ಸ್ವಂತ ಆಪ್ ಗಳಾದ ಜಿಯೋ ಸಿನಿಮಾ, ಜಿಯೋಸಾವನ್, ಜಿಯೋಟಿವಿ+ ಮುಂತಾದವು ಸಿಗುತ್ತಿವೆ.

ಏನಿದು ಜಿಯೋ ನ್ಯೂಸ್?
ವಿವಿಧ ಸುದ್ದಿ ಮೂಲಗಳನ್ನು ಒಂದೇ ಕಡೆ ಒದಗಿಸುವ ಸ್ಮಾರ್ಟ್ ಆದ ವೇದಿಕೆ ಜಿಯೋ ನ್ಯೂಸ್. ಇದೀಗ ಇನ್ನಷ್ಟು ಸಮಗ್ರ ಅನುಭವವನ್ನು ಬಳಕೆದಾರರಿಗೆ ದಕ್ಕುವಂತೆ ಮಾಡುತ್ತಿದೆ. ಹೊಸ ಬಗೆಯಲ್ಲಿ ಹಾಗೂ ತುಂಬ ವೇಗವಾಗಿ ಸುದ್ದಿಯನ್ನು ತಿಳಿಯಲು ಜಿಯೋ ನ್ಯೂಸ್ ಅತ್ಯುತ್ತಮ ಆಯ್ಕೆಯಾಗುತ್ತದೆ. ತಾಜಾ ಸುದ್ದಿ ದೊರೆಯುತ್ತದೆ. ನಿಯತಕಾಲಿಕೆ ಅಥವಾ ವೃತ್ತಪತ್ರಿಕೆಗಳನ್ನು ಓದಬಹುದು. ತಕ್ಷಣದ- ಟ್ರೆಂಡಿಂಗ್ ವಿಡಿಯೋಗಳು, ಫೋಟೋಗಳನ್ನು ಜಿಯೋ ನ್ಯೂಸ್ ಒದಗಿಸುತ್ತದೆ.

ಉನ್ನತ ಸುದ್ದಿ ಮೂಲಗಳಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ ಗಳನ್ನು ನೀಡುತ್ತದೆ. 350+ ಇ ಪೇಪರ್ ಗಳು, 800+ ನಿಯತಕಾಲಿಕೆಗಳು, ಲಕ್ಷಾಂತರ ಟ್ರೆಂಡಿಂಗ್ ವಿಡಿಯೋ ಹಾಗೂ ಫೋಟೋಗಳು ಜಿಯೋ ನ್ಯೂಸ್ ನಲ್ಲಿ ಲಭ್ಯ ಇವೆ. ಅಪ್ಲಿಕೇಷನ್ ನಲ್ಲಿ ಲಭ್ಯ ಇರುವ ಸುದ್ದಿ ಮೂಲಗಳು 12+ ಭಾಷೆಗಳಲ್ಲಿ ಲಭ್ಯ ಇವೆ. ಈ ಪೈಕಿ ಬಳಕೆದಾರರು ತಮಗೆ ಬೇಕಾದ ಭಾಷೆಯನ್ನು ಆರಿಸಿಕೊಳ್ಳಲು ಅವಕಾಶಗಳಿವೆ.

ಸರಾಗವಾಗಿ ಹಾಗೂ ದಣಿವಾಗದಂತೆ ಓದಲು ಅನುಕೂಲ ಆಗುವುದಕ್ಕೆ ಮಾಹಿತಿಯನ್ನು ಸ್ಕ್ರೀನ್ ಮೇಲೆ ಹಿಗ್ಗಿಸಿ ಅಥವಾ ಕುಗ್ಗಿಸಿ (ಜೂಮ್ ಇನ್ ಅಥವಾ ಔಟ್) ಓದುವುದಕ್ಕೆ, ಪೂರ್ತಿ ತೆರೆಯ ಮೇಲೆ (ಫುಲ್ ಸ್ಕ್ರೀನ್) ನೋಡುವುದಕ್ಕೆ ಅವಕಾಶ ಇದೆ. "ನಿಮ್ಮ ನೆಚ್ಚಿನ ಪತ್ರಿಕೆ"ಯನ್ನು ಆರಿಸಿಕೊಂಡು, ಆಯಾ ದಿನದ ಸುದ್ದಿಯನ್ನು ಓದಬಹುದು. ಇಷ್ಟವಾದ ನಿಯತಕಾಲಿಕೆಯಲ್ಲಿ ಎಲ್ಲಿಯ ತನಕ ಓದಿದ್ದರೋ ಗುರುತು ಮಾಡಿಟ್ಟುಕೊಳ್ಳಬಹುದು. ಆ ನಂತರ ಓದನ್ನು ಮುಂದುವರಿಸಬಹುದು.

ನಿಮಗೆ ಇಷ್ಟವಾದ ಹಾಗೂ ಟ್ರೆಂಡಿಂಗ್ ವಿಷಯದಿಂದ ಬೇಕಾದ್ದನ್ನು ಆರಿಸಿಕೊಳ್ಳುವುದಕ್ಕೆ ಸರ್ಚ್ ಫೀಚರ್ ಇದ್ದು, ಧ್ವನಿ (ವಾಯ್ಸ್ ಕಮ್ಯಾಂಡ್) ಮೂಲಕ ಕೂಡ ಸರ್ಚ್ ಮಾಡಬಹುದು.


Click it and Unblock the Notifications








