ಜಿಯೋದಿಂದ ಗುಡ್‌ನ್ಯೂಸ್: ಅಗ್ಗದ ಬೆಲೆಯಲ್ಲಿ ಭರ್ಜರಿ ಆಫರ್!

|

ರಿಲಯನ್ಸ್ ಜಿಯೋ ಅಂತಿಮವಾಗಿ ಜಿಯೋಫೋನ್ ಹೊಂದಿರುವವರಿಗೆ ಮತ್ತು ಹೊಸ ಬಳಕೆದಾರರಿಗಾಗಿ ಹೊಸ ಕೊಡುಗೆಯನ್ನು ಪರಿಚಯಿಸಿದೆ. ಜಿಯೋ ಫೋನ್ ಬಳಕೆದಾರರಿಗೆ ಕಂಪನಿಯು ಈಗ ಅಗ್ಗದ ರೀಚಾರ್ಜ್‌ನಲ್ಲಿ ವಾರ್ಷಿಕ ಅವಧಿಯ ಪ್ರಯೋಜನಗಳ ಕೊಡುಗೆಯೊಂದನ್ನು ಘೋಷಿಸಿದೆ. 2G ಫೀಚರ್ ಫೋನ್ ಬಳಕೆದಾರರನ್ನು 4G ಫೋನ್ ಬಳಕೆದಾರರನ್ನಾಗಿ ಪರಿವರ್ತಿಸುವುದು ಜಿಯೋಫೋನ್‌ ಈ ಕೊಡುಗೆಯ ಉದ್ದೇಶವಾಗಿದ್ದು, ಕಂಪನಿಯು '2G-ಮುಕ್ತ ಭಾರತ' ಎಂದು ಕರೆದಿದೆ.

ಹೌದು, ಜಿಯೋ ಇದೀಗ ರಿಲಯನ್ಸ್ ಜಿಯೋ 'ಜಿಯೋಫೋನ್ 2021' ಕೊಡುಗೆ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಫೀಚರ್ ಫೋನ್ ಬಳಕೆದಾರರಿಗೆ ಜಿಯೋಫೋನ್ ಪರಿವರ್ತನೆಯ ಯುಗವನ್ನು ತಂದಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ. ರಿಲಯನ್ಸ್ ಜಿಯೋ 'ಜಿಯೋಫೋನ್ 2021' ಕೊಡುಗೆಯ ಭಾಗವಾಗಿ ಅಸ್ತಿತ್ವದಲ್ಲಿರುವ ಬಳಕೆದಾರರು 12 ತಿಂಗಳ ಸೇವೆಯನ್ನು ಕೇವಲ 749ರೂ.ಗಳಲ್ಲಿ ಪಡೆಯಬಹುದು. ಇನ್ನು ಹೊಸ ಬಳಕೆದಾರರಿಗೆ ಯಾವ ಕೊಡುಗೆ ಲಭ್ಯ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಈಗಾಗಲೇ

ಜಿಯೋ ಸಂಸ್ಥೆಯು ಜಿಯೋಫೋನ್ 2021 ಆಫರ್ ಪರಿಚಯಿಸಿದ್ದು, ಈ ಯೋಜನೆಯ ಅಡಿಯಲ್ಲಿ ಈಗಾಗಲೇ ಜಿಯೋ ಫೋನ್ ಬಳಕೆ ಮಾಡುವ ಗ್ರಾಹಕರಿಗೆ 12 ತಿಂಗಳ ಅವಧಿಯ ಸೇವೆಯನ್ನು ಜಸ್ಟ್‌ 749ರೂ.ಗಳಲ್ಲಿ ಪಡೆಯಬಹುದು. ಆದರೆ ಹೊಸ ಜಿಯೋಫೋನ್ ಬಳಕೆದಾರರು ಎರಡು ವರ್ಷ ಅಥವಾ ಒಂದು ವರ್ಷದ ಸೇವೆಯನ್ನು ಪಡೆಯಲು 1,999ರೂ ಅಥವಾ 1,499ರೂ. ರೀಚಾರ್ಜ್ ಆಯ್ಕೆ ನೀಡಿದೆ.

ಬಳಕೆದಾರರು

ಹೊಸ ಜಿಯೋಫೋನ್ ಬಳಕೆದಾರರು ಸಂಪರ್ಕವನ್ನು ತೆಗೆದುಕೊಳ್ಳುವಾಗ ಎರಡು ಆಯ್ಕೆಗಳನ್ನು ಪಡೆಯುತ್ತಾರೆ. ಮೊದಲ ಆಯ್ಕೆಯ ಬೆಲೆ 1,999.ರೂ ಆಗಿದ್ದು, ಈ ಯೋಜನೆಯಲ್ಲಿ ಅವರು ಜಿಯೋಫೋನ್ ಡಿವೈಸ್ ಮತ್ತು 24 ತಿಂಗಳ ಉಚಿತ ಸೇವೆಯನ್ನು ಪಡೆಯುತ್ತಾರೆ(ಪ್ರತಿ ತಿಂಗಳು 2GB ಡೇಟಾ). 24 ತಿಂಗಳುಗಳವರೆಗೆ ಬಳಕೆದಾರರು ಸಂಪೂರ್ಣ ಅನಿಯಮಿತ ಧ್ವನಿ ಕರೆಗಳನ್ನು ಮಾಡಬಹುದು ಮತ್ತು ಅನಿಯಮಿತ ಡೇಟಾವನ್ನು ಬಳಸಬಹುದಾಗಿದೆ.

ಪ್ರಯೋಜನ

ಇನ್ನು ಎರಡನೇ ಆಯ್ಕೆಯು 1,499ರೂ. ಬೆಲೆಯನ್ನು ಹೊಂದಿದೆ. ಈ ಯೋಜನೆಯಲ್ಲಿ 12 ತಿಂಗಳ ಅವಧಿಗೆ ಅನಿಯಮಿತ ವಾಯಿಸ್‌ ಕರೆಗಳ ಸೇವೆ ಮತ್ತು ಪ್ರತಿ ತಿಂಗಳು 2GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟು 24GB ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ಉಚಿತ ಜಿಯೋಫೋನ್ ಡಿವೈಸ್‌ ಲಭ್ಯವಾಗಲಿದೆ. ಹಾಗೆಯೇ ಈಗಾಗಲೇ ಜಿಯೋ ಫೋನ್ ಬಳಸುವ ಗ್ರಾಹಕರು 749ರೂ. ರೀಚಾರ್ಜ್ ಮಾಡಿಸಿದರೇ, 12 ತಿಂಗಳ ಅವಧಿಯ ಕೊಡುಗೆ ಲಭ್ಯ. ಇನ್ನು ಈ ಜಿಯೋಫೋನ್ 2021 ಕೊಡುಗೆಯು ಇದೇ ಮಾರ್ಚ್ 1 ರಂದು ಎಲ್ಲಾ ರಿಲಯನ್ಸ್ ಸ್ಟೋರ್‌ ಮತ್ತು ಜಿಯೋ ರೀಟೇಲ್ ವ್ಯಾಪಾರಿಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
JioPhone 2021 Offer: The first option is priced at Rs 1,999 and the second option is priced at Rs 1,499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X