JioPhone Next ಖರೀದಿಸುವ ಗ್ರಾಹಕರು ತಪ್ಪದೇ ಈ ಸಂಗತಿ ತಿಳಿಯಿರಿ!
ಭಾರೀ ನಿರೀಕ್ಷೆ ಮೂಡಿಸಿದ್ದ ಜಿಯೋಫೋನ್ ನೆಕ್ಸ್ಟ್ ಫೋನ್ ದೀಪಾವಳಿಗೆ ಭಾರತದಲ್ಲಿ ಮಾರಾಟವಾಗಲಿದೆ. ಜಿಯೋ ಮತ್ತು ಗೂಗಲ್ ಸಂಸ್ಥೆಗಳು ಜಂಟಿಯಾಗಿ ಈ ಫೋನ್ ಅನ್ನು ಅಭಿವೃದ್ಧಿ ಪಡಿಸಿದ್ದು, ಕೆಲವು ಫೀಚರ್ಸ್‌ಗಳು ಅಚ್ಚರಿ ಮೂಡಿಸುವಂತಿವೆ. ಇನ್ನು ಈ ಫೋನ್ ಬೆಲೆ 6499ರೂ. ಆಗಿದೆ. 1,999ರೂ, ಮುಂಗಡ ನೀಡಿ, EMI ಮೂಲಕ ಪಾವತಿಸಲು ಅವಕಾಶವನ್ನು ನೀಡಿದೆ. ಹೀಗಾಗಿ ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

ಅಗ್ಗದ ದರದೊಂದಿಗೆ ವಿಶೇಷ ಫೀಚರ್ಸ್‌ಗಳ ಮೂಲಕ ಗಮನ ಸೆಳೆದಿರುವ ಜಿಯೋಫೋನ್ ನೆಕ್ಸ್ಟ್ ಫೋನ್ ಅನ್ನು ನೀವು ಖರೀದಿಸಲು ಬಯಸಿದರೇ, ಜಿಯೋಫೋನ್ ಡಿವೈಸ್ ಲಾಕ್ ಫೀಚರ್ಸ್‌ನೊಂದಿಗೆ ಬರುತ್ತದೆ ಎಂಬುದನ್ನು ನೀವು ಗಮನಿಸಬೇಕು. ಏನಿದು ಲಾಕ್ ಫೀಚರ್ ಎಂದು ಯೋಚಿಸುತ್ತಿದ್ದೀರಾ?...ನಿಜಕ್ಕೂ ಇದು ತುಂಬಾನೇ ಸ್ಮಾರ್ಟ್ ಫೀಚರ್, ತಿಳಿದ್ರೆ ಒಂದು ಕ್ಷಣಾ ಅಚ್ಚರಿ ಆಗುತ್ತಿರಾ!
ಏನಿದು ಲಾಕ್ ಫೀಚರ್?
ಜಿಯೋಫೋನ್ ಡಿವೈಸ್ ಲಾಕ್ ಫೀಚರ್ ಆಯ್ಕೆ ಹೊಂದಿಗೆ. EMI ಆಯ್ಕೆ ಮೂಲಕ ಫೋನ್ ಖರೀದಿಸಿದ ಬಳಕೆದಾರ ಒಂದು ವೇಳೆ ಇಎಮ್‌ಐ ಪಾವತಿ ಮಾಡಲು ವಿಫಲವಾದರೆ ಕಂಪನಿಯು ಸ್ಮಾರ್ಟ್‌ಫೋನ್ ಅನ್ನು ಲಾಕ್ ಮಾಡಬಹುದು ಎಂದು ಹೇಳಲಾಗುತ್ತಿದೆ.

ಜಿಯೋಫೋನ್ ನೆಕ್ಸ್ಟ್ ನಲ್ಲಿ ನೀಡಲಾದ ಮಾಹಿತಿ ಪ್ರಕಾರ, ನಿರ್ವಾಹಕರು ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಲಾದ ಅಪ್ಲಿಕೇಶನ್‌ಗಳ ಲಿಸ್ಟ್ ನೋಡಬಹುದು. ಅಂತೆಯೇ, ಅವರು ಇನ್‌ಸ್ಟಾಲ್ ಮಾಡಿದ ಅಪ್ಲಿಕೇಶನ್‌ಗಳು, ಸ್ಥಳ ಅನುಮತಿಗಳು, ಮೈಕ್ರೊಫೋನ್ ಅನುಮತಿಗಳು ಮತ್ತು ಕ್ಯಾಮರಾ ಅನುಮತಿಗಳಂತಹ ಅಂಶಗಳನ್ನು ಸಹ ನಿಯಂತ್ರಿಸಬಹುದು ಎನ್ನಲಾಗಿದೆ.
ಈ ರೀತಿಯ ತಂತ್ರಜ್ಞಾನಗಳನ್ನು ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇವೆ, ಅಲ್ಲಿ, ಸಾಧನವನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಬಳಕೆದಾರರು ಪಾವತಿ ಮಾಡದಿದ್ದರೆ, ಸ್ಮಾರ್ಟ್‌ಫೋನ್ ಅನ್ನು ಲಾಕ್ ಮಾಡಲಾಗುತ್ತದೆ.

ಆಗ ಬಳಕೆದಾರರು ಬಳಿ ಇರುವ ಫೋನ್ ಕಾರ್ಯನಿರ್ವಹಿಸಲಾರದ ಸ್ಥಿತಿ ಹೊಂದಿತ್ತದೆ. ಏಕೆಂದರೆ ಹೆಚ್ಚಿನ ವೈಶಿಷ್ಟ್ಯಗಳನ್ನು ಲಾಕ್ ಮಾಡಲಾಗುತ್ತದೆ. ಮತ್ತೆ, ಯಾರಾದರೂ ಮಾಸಿಕ ಪಾವತಿಗಳನ್ನು ಮಾಡಲು ವಿಫಲವಾದರೆ ಮಾತ್ರ ಕಂಪನಿಯು ಇದನ್ನು ಮಾಡುತ್ತದೆ. ಒಮ್ಮೆ, ಬಳಕೆದಾರ ಬಾಕಿಯಿರುವ ಪಾವತಿಯನ್ನು ಮಾಡಿದರೆ, ಕಂಪನಿಯು ಯಾವುದೇ ಸಮಯದಲ್ಲಿ ಫೋನ್ ಅನ್ನು ಅನ್‌ಲಾಕ್ ಮಾಡುತ್ತದೆ ಎನ್ನಲಾಗಿದೆ.
ಜಿಯೋಫೋನ್ ನೆಕ್ಸ್ಟ್ ಲಭ್ಯತೆ ಮತ್ತು ವಿಶೇಷ ಫೀಚರ್ಸ್:
* ನಿಮ್ಮ ಜಿಯೋಫೋನ್ ನೆಕ್ಸ್ಟ್‌ಗಾಗಿ ನೋಂದಾಯಿಸಿಕೊಳ್ಳಲು
* ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್ ಅನ್ನು ಭೇಟಿಮಾಡಿ
* ಅಥವಾ WWW.JIO.COM/NEXTಗೆ ಭೇಟಿ ನೀಡಿ
* ಅಥವಾ ವಾಟ್ಸಾಪ್‌ನಲ್ಲಿ - 70182-70182 ಸಂಖ್ಯೆಗೆ 'HI' ಎಂದು ಕಳುಹಿಸಿ
- ದೃಢೀಕರಣ ಬಂದ ನಂತರ, ನಿಮ್ಮ ಜಿಯೋಫೋನ್ ನೆಕ್ಸ್ಟ್ ಅನ್ನು ಪಡೆದುಕೊಳ್ಳಲು ಹತ್ತಿರದ ಜಿಯೋಮಾರ್ಟ್ ರೀಟೇಲರ್ ಅನ್ನು ಭೇಟಿಮಾಡಿ
- ಉತ್ಪನ್ನದ ವೈಶಿಷ್ಟ್ಯಗಳು ಮತ್ತು ಮೌಲ್ಯದ ವಿವರಗಳು ಇಲ್ಲಿವೆ. WWW.JIO.COM/NEXT
ವಾಯ್ಸ್ ಫಸ್ಟ್
ಸಾಮರ್ಥ್ಯಗಳು ಬಳಕೆದಾರರು ಸಾಧನದೊಂದಿಗೆ ಮಾತನಾಡುವ ಮೂಲಕ (ಆಪ್ ತೆರೆಯಿರಿ, ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಇತ್ಯಾದಿ) ಅದನ್ನು ನಿರ್ವಹಿಸಲು ಗೂಗಲ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಬಳಕೆದಾರರು ತಮಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ/ಕಂಟೆಂಟ್ ಅನ್ನು ಇಂಟರ್‌ನೆಟ್‌ನಿಂದ ಸುಲಭವಾಗಿ ಪಡೆಯಬಹುದು.
ರೀಡ್ ಅಲೌಡ್
ರೀಡ್ ಅಲೌಡ್ ಸೌಲಭ್ಯವು ಬಳಕೆದಾರರಿಗೆ ತಮ್ಮ ಪರದೆಯ ಮೇಲಿರುವ ಯಾವುದೇ ವಿಷಯವನ್ನು ಓದಿಸಿ, ಕೇಳಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಸರಳವಾಗಿ ತಮ್ಮ ಆದ್ಯತೆಯ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.
ಟ್ರಾನ್ಸ್‌ಲೇಟ್ ನೌ
ಟ್ರಾನ್ಸ್‌ಲೇಟ್ ನೌ ಸೌಲಭ್ಯವು ಯಾವುದೇ ಪರದೆಯನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.
ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ
ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಸಂಭ್ರಮಾಚರಣೆಯೊಂದಿಗೆ ತಮ್ಮ ಸೆಲ್ಫಿಗಳನ್ನು ಉತ್ತಮಗೊಳಿಸಲು ವಿಶಿಷ್ಟವಾದ ಭಾರತ-ಕೇಂದ್ರಿತ ಲೆನ್ಸ್‌ಗಳನ್ನೂ ಕ್ಯಾಮೆರಾ ಒಳಗೊಂಡಿದೆ.
ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ
ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.
ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು
ಹೊಸ ವೈಶಿಷ್ಟ್ಯಗಳು, ಕಸ್ಟಮೈಸೇಶನ್, ಭದ್ರತಾ ಅಪ್‌ಡೇಟ್‌ಗಳು ಹಾಗೂ ಇನ್ನೂ ಹೆಚ್ಚಿನದಕ್ಕಾಗಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಓವರ್ ದಿ ಏರ್ ಅಪ್‌ಡೇಟ್ಸ್ ಬೆಂಬಲವಿದ್ದು, ಇದು ಕಾಲಕ್ರಮೇಣ ಫೋನ್ ಅನುಭವವನ್ನು ವರ್ಧಿಸುತ್ತಲೇ ಹೋಗುತ್ತದೆ.
ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ
ಆಪ್‌ಗಳು, ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ, ಇಂಟರ್‌ನೆಟ್ ಇಲ್ಲದಿದ್ದರೂ ಸಹ, ನಿಯರ್‌ಬೈ ಶೇರ್ ವೈಶಿಷ್ಟ್ಯವನ್ನು ಬಳಸಿ ತ್ವರಿತವಾಗಿ ಹಂಚಿಕೊಳ್ಳಿ.


Click it and Unblock the Notifications








