Home
ಸುದ್ದಿಜಾಲ

ದೀಪಾವಳಿಗೂ ಮುನ್ನವೇ ಲಾಂಚ್ ಆಗಲಿದೆ 'ಜಿಯೋಫೋನ್‌ ನೆಕ್ಸ್ಟ್‌'!

ರಿಲಯನ್ಸ್‌ ಜಿಯೋ ಮತ್ತು ಟೆಕ್ ದೈತ್ಯ ಗೂಗಲ್ ಜಂಟಿಯಾಗಿ ಅಭಿವೃದ್ಧಿ ಮಾಡಿದ ಬಹುನಿರೀಕ್ಷಿತ ಸ್ಮಾರ್ಟ್​ಫೋನ್​ 'ಜಿಯೋಫೋನ್ ನೆಕ್ಸ್ಟ್' (JioPhone Next) ಗಣೇಶ ಚತುರ್ಥಿಯಂದು ಬಿಡುಗಡೆ ಮಾಡುವುದಾಗಿ ಕಂಪನಿಯು ತಿಳಿಸಿತ್ತು. ಆದರೆ ನಿರೀಕ್ಷೆಯಿಂದ ಕಾಯುತ್ತಿದ್ದ ಗ್ರಾಹಕರೂ ಜಿಯೋಫೋನ್‌ ನೆಕ್ಸ್ಟ್‌ಗಾಗಿ ಇನ್ನುಷ್ಟು ದಿನ ಕಾಯಬೇಕಿದೆ.

ಮಾಡಲಾಗುವುದು

ಹೌದು, ರಿಲಯನ್ಸ್‌ ಜಿಯೋ ಸಂಸ್ಥೆಯ ಜಿಯೋಫೋನ್‌ ನೆಕ್ಸ್ಟ್‌ ಅನ್ನು ಬರುವ ದೀಪಾವಳಿಗೂ ಮುನ್ನವೇ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ತಿಳಿಸಿವೆ. ಜಿಯೋ ಮತ್ತು ಗೂಗಲ್ ಕಂಪನಿಗಳು ಮತ್ತಷ್ಟು ಪರಿಷ್ಕರಣೆಗಾಗಿ ಸೀಮಿತ ಬಳಕೆದಾರರೊಂದಿಗೆ ಜಿಯೋಫೋನ್ ನೆಕ್ಸ್ಟ್ ಅನ್ನು ಪರೀಕ್ಷಿಸಲು ಆರಂಭಿಸಿವೆ. ಹೀಗಾಗಿ ಗಣೇಶ ಹಬ್ಬದ ದಿನಂದು ನಿಗದಿಪಡಿಸಿದ್ದ ಲಾಂಚ್ ಮುಂದೆ ಹಾಕಲಾಗಿದೆ. ದೀಪಾವಳಿ ಹಬ್ಬದ ಒಳಗೆ ಬಿಡುಗಡೆ ಮಾಡಲಿದೆ.

ಆಪರೇಟಿಂಗ್

ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ ಮತ್ತು ಪ್ಲೇ ಸ್ಟೋರ್ ಆಧಾರಿತ ಆಪ್ಟಿಮೈಸ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಮೊದಲ ರೀತಿಯ ಡಿವೈಸ್‌ ಆಗಿದೆ. ಈ ಡಿವೈಸ್ ಮತ್ತು ಆಪರೇಟಿಂಗ್ ಸಿಸ್ಟಂ ಪ್ರೀಮಿಯಂ ಸಾಮರ್ಥ್ಯಗಳನ್ನು ನೀಡುತ್ತದೆ. ಇದುವರೆಗೆ ಹೆಚ್ಚು ಶಕ್ತಿಯುತವಾದ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಂಬಂಧ ಹೊಂದಿದೆ. ಇದರಲ್ಲಿ ವಾಯ್ಸ್-ಫಸ್ಟ್ ಫೀಚರ್‌ಗಳು ಸೇರಿದಂತೆ ಜನರು ಕಂಟೆಂಟ್‌ ಕನ್ಸೂಮ್ ಮಾಡಲು ಮತ್ತು ತಮ್ಮ ಭಾಷೆಯಲ್ಲಿ ಫೋನ್ ಅನ್ನು ನ್ಯಾವಿಗೇಟ್ ಮಾಡಲು, ಉತ್ತಮ ಕ್ಯಾಮರಾ ಅನುಭವವನ್ನು ನೀಡಲು, ಮತ್ತು ಪಡೆಯಲು ಇತ್ತೀಚಿನ ಆಂಡ್ರಾಯ್ಡ್ ವೈಶಿಷ್ಟ್ಯ ಮತ್ತು ಭದ್ರತಾ ಅಪ್‌ಡೇಟ್‌ಗಳು ಇವೆ.

ಹೆಚ್ಚುವರಿ

ಎರಡೂ ಕಂಪನಿಗಳು ಮತ್ತಷ್ಟು ಪರಿಷ್ಕರಣೆಗಾಗಿ ಸೀಮಿತ ಬಳಕೆದಾರರೊಂದಿಗೆ ಜಿಯೋಫೋನ್ ನೆಕ್ಸ್ಟ್ ಅನ್ನು ಪರೀಕ್ಷಿಸಲು ಆರಂಭಿಸಿವೆ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಅದನ್ನು ಹೆಚ್ಚು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಈ ಹೆಚ್ಚುವರಿ ಸಮಯವು ಪ್ರಸ್ತುತ ಉದ್ಯಮದಾದ್ಯಂತ, ಜಾಗತಿಕ ಸೆಮಿಕಂಡಕ್ಟರ್ ಕೊರತೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಜಿಯೋ ಫೋನ್ ನೆಕ್ಟ್ ಫೀಚರ್ಸ್‌ ಏನು?

ಜಿಯೋ ಫೋನ್ ನೆಕ್ಟ್ ಫೀಚರ್ಸ್‌ ಏನು?

ಲೀಕ್ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಒಎಸ್‌ನಿಂದ ರನ್ ಆಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಬಹುದು. ಎಚ್‌ಡಿ ಡಿಸ್‌ಪ್ಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಈ ಫೋನ್ ಮಾಡೆಲ್ LS-5701-J ನಂಬರ್ ಹೊಂದಿದೆ. ಗೂಗಲ್‌ನ ಗೋ ಎಡಿಷನ್ ಆಂಡ್ರಾಯ್ಡ್ 11 ಒಎಸ್, 720x1,440 ಪಿಕ್ಸೆಲ್ ಪ್ರದರ್ಶಕ, ಕ್ವಾಲಕಾಂ QM215 ಎಸ್ಒಸಿ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೋಡೆಮ್‌

ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ 64-ಬಿಟ್, ಕ್ವಾಡ್ ಕೋರ್ ಕ್ವಾಲ್ಕಮ್ ಪ್ರೊಸೆಸರ್ ಜೊತೆಗೆ ಕ್ವಾಲಕಾಮ್ ಅಡ್ರಿನೊ 308 ಜಿಪಿಯು ಹೊಂದಿದೆ. ಇದನ್ನು ಕಡಿಮೆ-ಮಟ್ಟದ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರ್ನಿರ್ಮಿತ ಕ್ವಾಲಕಾಮ್ ಸ್ನಾಪ್‌ಡ್ರಾಗನ್ X5 LTE ಮೋಡೆಮ್‌, ಬ್ಲೂಟೂತ್ v4.2, GPS, 1080ಪಿ ವಿಡಿಯೋ ರೆಕಾರ್ಡಿಂಗ್, ಎಲ್‌ಡಿಪಿಆರ್ 3 ರ್ಯಾಮ್, ಮತ್ತು ಇಎಂಎಂಸಿ 4.5 ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ.

ಡ್ಯುಯಲ್

ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ 13 ಮೆಗಾ ಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿ ಇರಲಿದೆದ್ದರೆ, ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗೆ ನೆರವಾಗಲು 8 ಮೆಗಾ ಪಿಕ್ಸೆಲ್ ಇರಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಸ್ನ್ಯಾಪ್‌ಚಾಟ್ ಇಂಟಿಗ್ರೇಷನ್ ಜತೆಗೆ ಗೂಗಲ್ ಕ್ಯಾಮೆರಾ ಗೋ ಫೀಚರ್ ಹೊಂದಿರುವ ನೂತನ ಆವೃತ್ತಿಯು ಈ ಫೋನಿನಲ್ಲಿ ಪ್ರಿ ಇನ್‌ಸ್ಟಾಲ್‌ ಆಗಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಿಯೋ ಫೋನ್ ರೀಚಾರ್ಜ್ ಪ್ಲ್ಯಾನ್‌:

ಜಿಯೋ ಫೋನ್ ರೀಚಾರ್ಜ್ ಪ್ಲ್ಯಾನ್‌:

ಜಿಯೋ 75ರೂ. ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ಪ್ಲಾನ್
ಜಿಯೋದ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

Best Mobiles in India

English summary
JioPhone Next in Advanced Trials, With Festive-Season Rollout To Commence Before Diwali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+