ಜಿಯೋ ಫೋನ್ ಖರೀದಿಸುವ ಪ್ಲ್ಯಾನ್‌ ಇದ್ರೆ, ತಡ ಮಾಡಬೇಡಿ!..ಯಾಕೆ ಗೊತ್ತಾ?

|

ರಿಲಾಯನ್ಸ್‌ ಜಿಯೋ ಟೆಲಿಕಾಂ ಅಗ್ಗದ ಡೇಟಾ ಯೋಜನೆಗಳ ಜೊತೆಗೆ ಅಗ್ಗದ ಜಿಯೋ ಫೋನ್ ಪರಿಚಯಿಸಿ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಕಂಪನಿಯು ಜಿಯೋ ಫೋನ್ ಅನ್ನು ಜಸ್ಟ್‌ 699ರೂ. ಗೆ ಪರಿಚಯಿಸಿ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದು, ಆದ್ರೆ ಇದೀಗ ಜನಪ್ರಿಯ ಜಿಯೋ ಫೋನ್‌ ಬೆಲೆಯಲ್ಲಿ ಹೆಚ್ಚಳ ಮಾಡುವ ಸೂಚನೆಗಳನ್ನು ಹೊರಹಾಕಿದೆ.

ಜಿಯೋ ಫೋನ್ ಖರೀದಿಸುವ ಪ್ಲ್ಯಾನ್‌ ಇದ್ರೆ, ತಡ ಮಾಡಬೇಡಿ!..ಯಾಕೆ ಗೊತ್ತಾ?

ಹೌದು, ರಿಲಯನ್ಸ್ ಜಿಯೋ ಶೀಘ್ರದಲ್ಲೇ ಜಿಯೋ ಫೋನ್‌ನ ಬೆಲೆಯನ್ನು 300ರೂ.ಗೆ ಹೆಚ್ಚಿಸಲಿದ್ದು, ರಿಟೇಲ್‌ನಲ್ಲಿ 999ರೂ.ಗಳ ಬೆಲೆಗೆ ಲಭ್ಯವಾಗಲಿದೆ ಎಂದು 91ಮೊಬೈಲ್ಸ್‌ ವರದಿಯು ಉಲ್ಲೇಖಿಸಿದೆ. ಕಳೆದ 2019 ರ ದೀಪಾವಳಿ ಸಮಯದಲ್ಲಿ ಜಿಯೋ 699ರೂ.ಗೆ ಜಿಯೋಫೋನ್ ಆಫರ್ ಅನ್ನು ಪರಿಚಯಿಸಿತು. ಅದೇ ಆಫರ್ ಇಲ್ಲಿಯವರೆಗೆ ಲಭ್ಯವಿದೆ. ಹಾಗೆಯೇ ಫೋನ್ ಖರೀದಿಸುವಾಗ ಜಿಯೋ 125 ರೂ ರೀಚಾರ್ಜ್ ಕಡ್ಡಾಯಗೊಳಿಸುವುದಾಗಿ ಹೇಳಲಾಗಿದೆ.

ಜಿಯೋ ಫೋನ್ ಖರೀದಿಸುವ ಪ್ಲ್ಯಾನ್‌ ಇದ್ರೆ, ತಡ ಮಾಡಬೇಡಿ!..ಯಾಕೆ ಗೊತ್ತಾ?

ಡಿಸ್‌ಪ್ಲೇ ರಚನೆ
ಜಿಯೋ ಫೋನ್‌ ಉತ್ತಮ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 2.4 ಇಂಚಿನ QVGA TFT ಡಿಸ್‌ಪ್ಲೇಯನ್ನು ಹೊಂದಿದೆ. ತನ್ನ ವರ್ಗದಲ್ಲಿಯೇ ಬೆಸ್ಟ್ ಸ್ಕ್ರೀನ್ ಎನ್ನಬಹುದಾಗಿದೆ.

ಪ್ರೊಸೆಸರ್ ಕಾರ್ಯ
ಜಿಯೋ ಫೋನ್ 1.2GHz SPRD 9820A/QC8905 ಪ್ರೊಸೆಸರ್ ಹೊಂದಿದೆ. ಹಾಗೆಯೇ 512MB RAM ಜೊತೆಗೆ 4GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಡ್ಯುಯಲ್‌ ಸಿಮ್ ಆಯ್ಕೆ ಸಹ ಇದೆ.

ಜಿಯೋ ಫೋನ್ ಖರೀದಿಸುವ ಪ್ಲ್ಯಾನ್‌ ಇದ್ರೆ, ತಡ ಮಾಡಬೇಡಿ!..ಯಾಕೆ ಗೊತ್ತಾ?

ಕ್ಯಾಮೆರಾ ವಿಶೇಷ
ಜಿಯೋ ಫೋನ್ ಬೇಸಿಕ್ ಫೀಚರ್ ಫೋನ್ ಆಗಿದೆ. ಹೀಗಾಗಿ ಈ ಫೋನಿನ ಹಿಂಬದಿಯಲ್ಲಿ VGA ಕ್ಯಾಮೆರಾ ರಚನೆ ಒದಗಿಸಲಾಗಿದೆ. ಹಾಗೆಯೇ ಮುಂಬದಿಯಲ್ಲಿಯೂ ಕ್ಯಾಮೆರಾ ಇದೆ.

ಬ್ಯಾಟರಿ ಬಲ
ಜಿಯೋ ಫೋನ್ 2000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 15 ದಿನಗಳ ವರೆಗೂ ಬ್ಯಾಟರಿ ಬಾಳಿಕೆ ಲಭ್ಯವಾಗಲಿದೆ. ಇದರೊಂದಿಗೆ ಹೆಡ್‌ಫೋನ್ ಜಾಕ್‌ ವ್ಯವಸ್ಥೆಯು ಇದೆ.

ಜಿಯೋ ಫೋನ್ 2- ಫೀಚರ್ಸ್‌
ಜಿಯೋ ಫೋನ್ 2 QWERTY ಕೀಪ್ಯಾಡ್‌ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಜಿಯೋ ಫೋನ್ 2 ಹೊಂದಿದೆ. 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಹೊಂದಿದೆ. ಎರಡು ಫೋನ್‌ಗಳು ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿವೆ. ಈ ಫೋನ್ KaiOS ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜಿಯೋ ಫೋನ್‌ನಂತೆಯೇ 512MB RAM ಮತ್ತು 4GB ಆಂತರಿಕ ಸ್ಟೊರೇಜ್ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ.

Best Mobiles in India

English summary
Now that Jio is looking to hike the price to Rs 999, we are not sure whether it will retain the additional data pack offer on the first seven recharges.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X