ಜಿಯೋ ಟೆಲಿಕಾಂನ ಈ ಅಗ್ಗದ ರೀಚಾರ್ಜ್‌ನಲ್ಲಿ 56GB ಡೇಟಾ ಪಕ್ಕಾ!
ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಆಕರ್ಷಕ ಯೋಜನೆಗಳ ಮೂಲಕ ಸದ್ದು ಮಾಡಿದೆ. ಆ ಪೈಕಿ ಬಹುತೇಕ ಯೋಜನೆಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಪ್ರಯೋಜನ ಒಳಗೊಂಡಿವೆ. ಜಿಯೋ ತನ್ನ ಜಿಯೋಫೋನ್ ಗ್ರಾಹಕರಿಗಾಗಿ ಭಿನ್ನ ಪ್ರೈಸ್ ಟ್ಯಾಗ್ ನಲ್ಲಿ ಹಲವು ಯೋಜನೆಗಳನ್ನು ಪರಿಚಯಿಸಿದೆ. ಆ ಪೈಕಿ ಜಿಯೋ 185ರೂ. ಯೋಜನೆ ತಿಂಗಳ ಅವಧಿಗೆ ಅತ್ಯುತ್ತಮ ಎನಿಸಿದೆ.

ಹೌದು, ಜಿಯೋ ಟೆಲಿಕಾಂ ಜಿಯೋಫೋನ್ ಗ್ರಾಹಕರಿಗಾಗಿಯೇ ಕೆಲವು ರೀಚಾರ್ಜ್ ಯೋಜನೆಗಳ ಆಯ್ಕೆ ನೀಡಿದೆ. ಅವುಗಳಲ್ಲಿ ಜಿಯೋ 185ರೂ. ರೀಚಾರ್ಜ್ ಯೋಜನೆಯು ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿದ್ದು, ಅಗ್ಗದ ದರದಲ್ಲಿ ಅತ್ಯುತ್ತಮ ಆಯ್ಕೆ ಎನಿಸಲಿದೆ. ಜೊತೆಗೆ ಹೆಚ್ಚುವರಿಯಾಗಿ ಜಿಯೋ ಆಪ್ಸ್‌ಗಳು ಲಭ್ಯವಾಗಲಿವೆ. ಹಾಗಾದರೇ ಜಿಯೋಫೋನ್ 185ರೂ. ಯೋಜನೆಯ ಪ್ರಯೋಜನಗಳೆನು?..ಹಾಗೆಯೇ ಜಿಯೋಫೋನಿನ ಇತರೆ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೋನ್ 185ರೂ. ರೀಚಾರ್ಜ್ ಪ್ಲ್ಯಾನ್
ಜಿಯೋಫೋನ್ ರೀಚಾರ್ಜ್ ಯೋಜನೆಗಳಲ್ಲಿ 185ರೂ. ರೀಚಾರ್ಜ್ ಪ್ಲ್ಯಾನ್ ಸಹ ಒಂದಾಗಿದ್ದು, ಇದು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಇತರೆ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೋನ್ 155ರೂ. ರೀಚಾರ್ಜ್ ಪ್ಲ್ಯಾನ್
ಜಿಯೋಫೋನ್ ರೀಚಾರ್ಜ್ ಯೋಜನೆಗಳಲ್ಲಿ 155ರೂ. ರೀಚಾರ್ಜ್ ಪ್ಲ್ಯಾನ್ ಸಹ ಒಂದಾಗಿದ್ದು, ಇದು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ ಪ್ರಯೋಜನವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ.

ಜಿಯೋಫೋನ್ 125ರೂ. ರೀಚಾರ್ಜ್ ಪ್ಲ್ಯಾನ್
ಜಿಯೋಫೋನ್ 125ರೂ. ರೀಚಾರ್ಜ್ ಪ್ಲ್ಯಾನ್ ಸಹ ಅಗ್ಗದ ದರದಲ್ಲಿ ಗಮನ ಸೆಳೆದಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 0.5GB ಡೇಟಾ ಪ್ರಯೋಜನವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ.

ಜಿಯೋಫೋನ್ 75ರೂ. ರೀಚಾರ್ಜ್ ಪ್ಲ್ಯಾನ್
ಜಿಯೋಫೋನ್ 75ರೂ. ರೀಚಾರ್ಜ್ ಪ್ಲ್ಯಾನ್ ಸಹ ಅಗ್ಗದ ದರದಲ್ಲಿ ಗಮನ ಸೆಳೆದಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 0.1GB ಡೇಟಾ ಪ್ರಯೋಜನವನ್ನು ಹೊಂದಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ.

ಜಿಯೋಫೋನ್ 749ರೂ. ರೀಚಾರ್ಜ್ ಪ್ಲ್ಯಾನ್
ಜಿಯೋಫೋನ್ ರೀಚಾರ್ಜ್ ಯೋಜನೆಗಳಲ್ಲಿ 749ರೂ. ರೀಚಾರ್ಜ್ ಪ್ಲ್ಯಾನ್ ಸಹ ಒಂದಾಗಿದ್ದು, ಇದು 336 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಡೇಟಾ ಪ್ರಯೋಜನವನ್ನು ಹೊಂದಿದ್ದು, ಆರಂಭದಲ್ಲಿ 50 ಎಸ್‌ಎಮ್‌ಎಸ್ ಲಭ್ಯವಾಗಲಿವೆ. ಹಾಗೆಯೇ ಈ ಯೋಜನೆಯು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ.


Click it and Unblock the Notifications








