ಇದು ಜಿಯೋ ಗ್ರಾಹಕರಿಗೆ ಮಾತ್ರ!..ಒಮ್ಮೆ ರೀಚಾರ್ಜ್ ಮಾಡಿದರೇ, 336 ದಿನ ಟೆನ್ಷನ್ ಫ್ರೀ!
ದೇಶದ ಟೆಲಿಕಾಂ ವಿಭಾಗದಲ್ಲಿ ರಿಲಯನ್ಸ್ ಜಿಯೋ ಸಂಸ್ಥೆಯು ಈಗಾಗಲೇ ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ ಸದ್ದು ಮಾಡಿವೆ. ಆ ಪೈಕಿ ಜಿಯೋ ಸಂಸ್ಥೆಯ ಬಹುತೇಕ ರೀಚಾರ್ಜ್ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಪ್ರಯೋಜನ ಒಳಗೊಂಡಿವೆ. ಅದೇ ರೀತಿ ಜಿಯೋ ತನ್ನ ಗ್ರಾಹಕರಿಗಾಗಿ ಬಜೆಟ್ ಬೆಲೆಯಲ್ಲಿಯೂ ಕೆಲವು ಅತ್ಯುತ್ತಮ ಯೋಜನೆಗಳ ಆಯ್ಕೆ ನೀಡಿದೆ. ಆ ಪೈಕಿ ಜಿಯೋ ಟೆಲಿಕಾಂನ 895ರೂ. ರೀಚಾರ್ಜ್ ಯೋಜನೆಯು ವ್ಯಾಲಿಡಿಟಿಯಿಂದ ಗಮನ ಸೆಳೆದಿದೆ.
ಹೌದು, ರಿಲಯನ್ಸ್ ಜಿಯೋ ಸಂಸ್ಥೆಯ 895ರೂ. ರೀಚಾರ್ಜ್ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದ್ದು, ಈ ಬಜೆಟ್ ದರದ ಯೋಜನೆಯು ಜಿಯೋ ಚಂದಾದಾರರನ್ನು ಆಕರ್ಷಿಸಿದೆ. ಹಾಗೆಯೇ ಈ ರೀಚಾರ್ಜ್ ಪ್ಲ್ಯಾನ್ ಡೇಟಾ ಪ್ರಯೋಜನ, ಅನಿಯಮಿತ ವಾಯಿಸ್ ಕರೆ ಸೌಲಭ್ಯಗಳನ್ನು ಕೂಡಾ ಹೊಂದಿದೆ. ಅಲ್ಲದೇ ಎಸ್‌ಎಮ್‌ಎಸ್ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಸಂಸ್ಥೆಯ ಈ 895ರೂ. ರೀಚಾರ್ಜ್ ಪ್ಲ್ಯಾನಿನ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೋನ್ ಬಳಕೆದಾರರಿಗೆ ಲಭ್ಯ
ಜಿಯೋ ಸಂಸ್ಥೆಯ ಈ 895ರೂ. ರೀಚಾರ್ಜ್ ಯೋಜನೆಯು ನಿಜಕ್ಕೂ ಆಕರ್ಷಕ ಎನಿಸಿದ್ದು, ಈ ಪ್ಲ್ಯಾನ್ ಒಟ್ಟು 336 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ ಈ ರೀಚಾರ್ಜ್ ಯೋಜನೆಯು ಜಿಯೋಫೋನ್ (JioPhone) ಬಳಕೆದಾರರಿಗೆ ಮಾತ್ರ ಲಭ್ಯ ಇದೆ. ಇನ್ನುಳಿದ ಬಳಕೆದಾರರಿಗೆ ಈ ಯೋಜನೆ ರೀಚಾರ್ಜ್‌ಗೆ ಲಭ್ಯ ಇರುವುದಿಲ್ಲ.
ಜಿಯೋ ಸಂಸ್ಥೆಯ 895ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ ಸಂಸ್ಥೆಯ 895ರೂ. ರೀಚಾರ್ಜ್ ಯೋಜನೆಯು ಒಟ್ಟು 336 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 24GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ಪಡೆದಿದ್ದು, 28 ದಿನಗಳಿಗೆ 2GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಅನಿಯಮಿತ ಧ್ವನಿ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ 28 ದಿನಗಳಿಗೊಮ್ಮೆ 50 ಎಸ್‌ಎಮ್ಎಸ್ ಸೌಲಭ್ಯ ಲಭ್ಯ.
ಜಿಯೋ ಸಂಸ್ಥೆಯ 222ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ ಸಂಸ್ಥೆಯ 222 ರೂ. ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 56 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದೆ. ಅಲ್ಲದೇ ಅನಿಯಮಿತ ಧ್ವನಿ ಕರೆಯ ಸೌಲಭ್ಯ ಸಹ ಸಿಗುತ್ತದೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್ ಸೌಲಭ್ಯ ಲಭ್ಯ.
ಜಿಯೋ ಸಂಸ್ಥೆಯ 186ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ ಸಂಸ್ಥೆಯ 186ರೂ. ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 28 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 1GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಅನಿಯಮಿತ ಧ್ವನಿ ಕರೆಯ ಪ್ರಯೋಜನ ಸಹ ಸಿಗುತ್ತದೆ. ಇದಲ್ಲದೇ ಪ್ರತಿದಿನ 100 ಎಸ್‌ಎಮ್ಎಸ್ ಸೌಲಭ್ಯ ಲಭ್ಯ.
ಜಿಯೋ ಸಂಸ್ಥೆಯ 152ರೂ. ರೀಚಾರ್ಜ್ ಪ್ಲ್ಯಾನ್
ಜಿಯೋ ಸಂಸ್ಥೆಯ 152ರೂ. ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 14 GB ಡೇಟಾ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿದ್ದು, ಪ್ರತಿದಿನ 0.5 GB ಡೇಟಾ ಸೌಲಭ್ಯ ಸಿಗಲಿದೆ. ಅದೇ ರೀತಿ ಅನಿಯಮಿತ ಧ್ವನಿ ಕರೆಯ ಸೌಲಭ್ಯ ಸಹ ಸಿಗುತ್ತದೆ. ಇದಲ್ಲದೇ ಪೂರ್ಣ ವ್ಯಾಲಿಡಿಟಿ ಅವಧಿಗೆ 300 ಎಸ್‌ಎಮ್ಎಸ್ ಸೌಲಭ್ಯ ಲಭ್ಯ.


Click it and Unblock the Notifications








