ಜಿಯೋ ಫೋನ್ ಬಳಕೆದಾರರಿಗೆ ಎರಡು ಅಗ್ಗದ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ!
ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಆಕರ್ಷಕ ಪ್ರೀಪೇಯ್ಡ್ ಯೋಜನಗಳನ್ನು ಪರಿಚಯಿಸಿದೆ. ಮುಖ್ಯವಾಗಿ ಅಧಿಕ ಡೇಟಾ ಪ್ರಯೋಜನಗಳ ರೀಚಾರ್ಜ್ ಪ್ಲ್ಯಾನ್ ಲಾಂಚ್ ಮಾಡಿ ಡೇಟಾ ಪ್ರಿಯರನ್ನು ಖುಷಿ ಪಡೆಸಿದೆ. ಆದ್ರೆ ಇದೀಗ ಜಿಯೋ ಸಂಸ್ಥೆಯು 'ಜಿಯೋ ಫೋನ್' ಬಳಕೆದಾರರತ್ತ ಮುಖ ಮಾಡಿದ್ದು, ಎರಡು ವಿಶೇಷ ಕೊಡುಗೆಯನ್ನು ಘೋಷಿಸಿದೆ.

ಹೌದು, ರಿಲಾಯನ್ಸ್ ಜಿಯೋ ತನ್ನ ಜಿಯೋ ಫೋನ್ ಬಳಕೆದಾರರಿಗೆ ಈಗ ಎರಡು ನೂತನ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ 49ರೂ. ಮತ್ತು 69ರೂ. ಬೆಲೆಯನ್ನು ಹೊಂದಿವೆ. ಈ ಎರಡು ಹೊಸ ಪ್ಲ್ಯಾನ್‌ಗಳು ಅಲ್ಪಾವಧಿ ವ್ಯಾಲಿಡಿಟಿಯ ಯೋಜನಗಳಾಗಿದ್ದು, ಆದರೆ ಅಗತ್ಯ ಡೇಟಾ, ಎಸ್ಎಮ್ಎಸ್, ಜಿಯೋ ಟು ಜಿಯೋ ಅನಿಯಮಿತ ಕರೆಗಳ ಸೌಲಭ್ಯಗಳನ್ನು ಒಳಗೊಂಡಿದೆ.

ಜಿಯೋ 49ರೂ, ಪ್ಲ್ಯಾನ್
ಜಿಯೋದ ಹೊಸ 49ರೂ, ಪ್ಲ್ಯಾನ್ ಒಟ್ಟು 14 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಜಿಯೋ ಟು ಜಿಯೋ ವಾಯಿಸ್ ಕರೆಗಳು ಸಂಪೂರ್ಣ ಅನಿಯಮಿತವಾಗಿರಲಿವೆ. ಜೊತೆಗೆ ಇತರೆ ನೆಟವರ್ಕ ಕರೆಗಳಿಗೆ 250 ನಿಮಿಷಗಳ ಮಿತಿ ಲಭ್ಯವಿದ್ದು, ಇದರೊಂದಿಗೆ 25 ಉಚಿತ ಎಸ್ಎಮ್ಎಸ್ ಸೌಲಭ್ಯ ಹೊಂದಿದೆ. 4G ವೇಗದ 2GB ಡೇಟಾ ಪ್ರಯೋಜನವನ್ನು ಪಡೆದಿದೆ.

ಜಿಯೋ 69ರೂ, ಪ್ಲ್ಯಾನ್
ಜಿಯೋದ ಹೊಸ 69ರೂ, ಪ್ಲ್ಯಾನ್ ಸಹ ಒಟ್ಟು 14 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಜಿಯೋ ಟು ಜಿಯೋ ವಾಯಿಸ್ ಕರೆಗಳು ಸಂಪೂರ್ಣ ಅನಿಯಮಿತವಾಗಿರಲಿವೆ. ಜೊತೆಗೆ ಇತರೆ ನೆಟವರ್ಕ ಕರೆಗಳಿಗೆ 250 ನಿಮಿಷಗಳ ಮಿತಿ ಲಭ್ಯವಿದ್ದು, ಇದರೊಂದಿಗೆ 25 ಉಚಿತ ಎಸ್ಎಮ್ಎಸ್ ಸೌಲಭ್ಯ ಹೊಂದಿದೆ. 4G ವೇಗದ 7GB ಡೇಟಾ ಪ್ರಯೋಜನವನ್ನು ಪಡೆದಿದೆ.

ಇತರೆ ಜಿಯೋ ಫೋನ್ ಪ್ಲ್ಯಾನ್‌ಗಳು
ಜಿಯೋ 75ರೂ. ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದ್ದು, ಪ್ರತಿದಿನ 100MB ಡೇಟಾ, ವಾಯಿಸ್ ಕರೆ ಮತ್ತು ಎಸ್ಎಮ್ಎಸ್ ಪ್ರಯೋಜನಗಳನ್ನು ಪಡೆದಿದೆ. ಹಾಗೆಯೆ ಜಿಯೋ 185ರೂ. ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸಹ ಇದ್ದು, ಜಿಯೋ ಟು ಜಿಯೋ ಉಚಿತ ಕರೆ, ಇತರೆ ನೆಟವರ್ಕಗಳಿಗೆ 500 ನಿಮಿಷದ ಮಿತಿ ಸೌಲಭ್ಯಗಳನ್ನು ಪಡೆದಿದೆ.


Click it and Unblock the Notifications








