ಮಾರುಕಟ್ಟೆಗೆ ಬಂತು ಜಿಯೋಟ್ಯಾಗ್ ಗೋ ಟ್ರ್ಯಾಕರ್; ಸುಲಭವಾಗಿ ಕೀಗಳನ್ನು ಟ್ರ್ಯಾಕ್ ಮಾಡಿ!
ಜನಪ್ರಿಯ ರಿಲಯನ್ಸ್ ಜಿಯೋ ಸಂಸ್ಥೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗಾಗಿ ಜಿಯೋ ಟ್ಯಾಗ್ ಗೋ (JioTag Go tracker) ಟ್ರ್ಯಾಕರ್ ಬಿಡುಗಡೆ ಮಾಡಿದೆ. ಈ ಮೂಲಕ ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೂ ಟ್ರ್ಯಾಕರ್ ಪರಿಚಯಿಸಿದಂತೆ ಆಗಿದೆ. ಅಂದಹಾಗೆ ಈ ಡಿವೈಸ್ ಬ್ಲ್ಯಾಕ್, ಆರೆಂಜ್, ವೈಟ್ ಹಾಗೂ ಯೆಲ್ಲೋ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.
ಗೂಗಲ್‌ನ ಫೈಂಡ್ ಮೈ ಡಿವೈಸ್ ನೆಟ್‌ವರ್ಕ್‌ನೊಂದಿಗೆ ತಡೆರಹಿತವಾಗಿ ಕೆಲಸ ಮಾಡುವಂತೆ ಭಾರತದ ಮೊದಲ ಟ್ರ್ಯಾಕರ್ ಜಿಯೋ ಟ್ಯಾಗ್ ಗೋ (JioTag Go tracker) ಅನ್ನು ರಿಲಯನ್ಸ್ ಜಿಯೋ ವಿನ್ಯಾಸಗೊಳಿಸಿದೆ. ಈ ನವೀನ ನಾಣ್ಯ ಗಾತ್ರದ ಟ್ರ್ಯಾಕರ್, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಗೂಗಲ್ ಫೈಂಡ್ ಮೈ ಡಿವೈಸ್ ಅಪ್ಲಿಕೇಶನ್ ಜೊತೆಗೆ ಸಂಪರ್ಕಿಸುತ್ತದೆ ಮತ್ತು ನೈಜ-ಸಮಯದ ಸ್ಥಳ ನವೀಕರಣಗಳನ್ನು ಒದಗಿಸಲು ಹತ್ತಿರದ ಆಂಡ್ರಾಯ್ಡ್ ಡಿವೈಸ್ ಅನ್ನು ಬಳಸಿಕೊಳ್ಳುತ್ತದೆ.

ಬಹುಮುಖ ಜಿಯೋ ಟ್ಯಾಗ್ ಗೋ (JioTag Go tracker) ಟ್ರ್ಯಾಕರ್ ಅನ್ನು ಕೀ ಗಳು, ವ್ಯಾಲೆಟ್ ಗಳು, ಪರ್ಸ್‌ಗಳು, ಲಗೇಜ್‌ಗಳು, ಗ್ಯಾಜೆಟ್‌ಗಳು, ಬೈಕ್‌ಗಳು ಮತ್ತು ಹೆಚ್ಚಿನವುಗಳಿಗೆ ಕನೆಕ್ಟ್ ಮಾಡಬಹುದು. ಬಹು ಉಪಯೋಗಿ ಜಿಯೋಟ್ಯಾಗ್ ಗೋ ಅನ್ನು ಬಳಕೆದಾರರಿಗೆ ತಮ್ಮ ಬೆಲೆ ಬಾಳುವ ವಸ್ತುಗಳ ಮೇಲೆ ಕಣ್ಣಿಡಲು ವಿಶ್ವಾಸಾರ್ಹ ಮಾರ್ಗವನ್ನು ನೀಡುತ್ತದೆ. ಇದು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅತ್ಯಾಕರ್ಷಕ ಶ್ರೇಣಿಯ ಬಣ್ಣಗಳಲ್ಲಿ ಖರೀದಿಸಬಹುದು.
ಅಂದಹಾಗೆ ಜಿಯೋ ಟ್ಯಾಗ್ ಗೋ (JioTag Go tracker) ಟ್ರ್ಯಾಕರ್ ಅನ್ನು ಗ್ರಾಹಕರು ಅಮೆಜಾನ್ ( Amazon ), ಜಿಯೋಮಾರ್ಟ್ ( JioMart ) ಮತ್ತು ರಿಲಯನ್ಸ್ ಡಿಜಿಟಲ್ ( Reliance Digital ) ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಕೇವಲ 1499 ರೂ. ಗೆ ಖರೀದಿಸಬಹುದು. ಜಿಯೋ ಈ ಹಿಂದೆ ಐಒಎಸ್‌ಗಾಗಿ ಜಿಯೋಟ್ಯಾಗ್ ಏರ್ ಅನ್ನು ಪ್ರಾರಂಭಿಸಿತ್ತು, ಅದು ಆಪಲ್ ಫೈಂಡ್ ಮೈ ನೆಟ್‌ವರ್ಕ್ ಜೊತೆಗೆ ಸಂಯೋಜಿಸುತ್ತದೆ.


Click it and Unblock the Notifications








