Home
ಸುದ್ದಿಜಾಲ

'ಜಿಯೋ ಟಿವಿ ಕ್ಯಾಮೆರಾ' ಬಿಡುಗಡೆ!..ಬೆಲೆ ಜಸ್ಟ್‌ 2,999ರೂ.!

ರಿಲಾಯನ್ಸ್‌ ಜಿಯೋ ಟೆಲಿಕಾಂ ಸಂಸ್ಥೆಯು ಅಗ್ಗದ ದರದಲ್ಲಿ ಡೇಟಾ ಪ್ಲ್ಯಾನ್‌ಗಳನ್ನು ಲಾಂಚ್‌ ಮಾಡಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸಂಚಯನ ಮೂಡಿಸಿತ್ತು. ಅದರ ಬೆನ್ನಲೇ ಬ್ರಾಡ್‌ಬ್ಯಾಂಡ್ ವಲಯದಲ್ಲಿಯೂ ಕಡಿಮೆ ಬೆಲೆಗೆ ತನ್ನ ಜಿಯೋಫೈಬರ್ ಸೇವೆಯನ್ನು ಪರಿಚಯಿಸಿ ಹೊಸ ಅಲೆಯನ್ನು ಎಬ್ಬಿಸಿತ್ತು. ಜಿಯೋಫೈಬರ್‌ ಬ್ರಾಡ್‌ಬ್ಯಾಂಡ್‌ ಸೇವೆಯಲ್ಲಿ ಹಲವು ಸೌಲಭ್ಯಗಳನ್ನು ನೀಡುವುದಾಗಿ ಹೇಳಿತ್ತು. ಅದರಂತೆ ಈಗ ಜಿಯೋ ಟಿವಿ ಕ್ಯಾಮೆರಾ ಡಿವೈಸ್‌ ಬಿಡುಗಡೆ ಮಾಡಿದೆ.

ಜಿಯೋ ಟಿವಿ ಕ್ಯಾಮೆರಾ

ಹೌದು, ಜನಪ್ರಿಯ ಜಿಯೋ ಟೆಲಿಕಾಂ ಇದೀಗ ಜಿಯೋ ಟಿವಿ ಕ್ಯಾಮೆರಾ (JioTVCamera) ಡಿವೈಸ್‌ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್‌ ಜಿಯೋ 4K ಸೆಟ್‌ಟಾಪ್‌ ಬಾಕ್ಸ್‌ಗೆ ಕನೆಕ್ಟ್‌ ಮಾಡುವ ಸೌಲಭ್ಯ ಪಡೆದಿದ್ದು, ಜಿಯೋಫೈಬರ್‌ನ ಮೊದಲ ಆಕ್ಸಸರಿಸ್‌ ಇದಾಗಿದೆ. ಇನ್ನು ಜಿಯೋದ ಟಿವಿ ಕ್ಯಾಮೆರಾ ಡಿವೈಸ್‌ ಅನ್ನು ಜಿಯೋ ಫೈಬರ್‌ ಗ್ರಾಹಕರು ಕೇವಲ 2,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಜಿಯೋ ಟಿವಿ ಕ್ಯಾಮೆರಾ ಡಿವೈಸ್‌ ಸೌಲಭ್ಯಗಳೆನು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಜಿಯೋ ಟಿವಿ ಕ್ಯಾಮೆರಾ ರಚನೆ

ಜಿಯೋ ಟಿವಿ ಕ್ಯಾಮೆರಾ ರಚನೆ

ಜಿಯೋ ಟಿವಿ ಕ್ಯಾಮೆರಾ ಡಿವೈಸ್‌ 118x37.2x30.8 ಮಿಮೀ. ಸುತ್ತಳತೆಯನ್ನು ಪಡೆದಿದೆ. ಜಿಯೋಟಿವಿ 1 / 2.7-ಇಂಚಿನ CMOS ಸೆನ್ಸಾರ್ ಕ್ಯಾಮೆರಾ ಹೊಂದಿದ್ದು, 120 ಡಿಗ್ರಿ ವೀಕ್ಷಣಾ ವ್ಯಾಪ್ತಿಯನ್ನು ಕವರ್ ಮಾಡುತ್ತದೆ ಹಾಗೂ 1mm ನ ಫೋಕಲ್ ಲೆಂತ್‌ ಹೊಂದಿದೆ. ಇನ್ನು ಈ ಕ್ಯಾಮೆರಾದ ತೂಕ ಕೇವಲ 93 ಗ್ರಾಂ ಆಗಿದ್ದು, ಈ ಡಿವೈಸ್‌ ಇನ್‌ಪುಟ್‌ ವೋಲ್ಟೇಜ್ 5V ಸಾಮರ್ಥ್ಯದಲ್ಲಿದೆ.

ವಿಡಿಯೊ ಕಾಲ್ ಸೌಲಭ್ಯ

ವಿಡಿಯೊ ಕಾಲ್ ಸೌಲಭ್ಯ

ಜಿಯೋ ಸೆಟ್-ಟಾಪ್ ಬಾಕ್ಸ್ ಕನೆಕ್ಟ್‌ ಮಾಡುವ ಸೌಲಭ್ಯ ಪಡೆದಿರುವ ಜಿಯೋ ಟಿವಿ ಕ್ಯಾಮೆರಾ ಡಿವೈಸ್‌ ವಿಡಿಯೊ ಕರೆ ಮತತ್ಉ ಆಡಿಯೊ ವಾಯಿಸ್‌ ಕರೆ ಮಾಡುವ ಸೌಲಭ್ಯಗಳನ್ನು ಪಡೆದಿದೆ. ವಿಡಿಯೊ ಕರೆಗಳನ್ನು ಜಿಯೋ ನಂಬರ್‌ಗಳಿಗೆ ಮಾತ್ರ ಮಾಡುವ ಅವಕಾಶ ಹೊಂದಿದೆ. ಆದ್ರೆ ವಾಯಿಸ್‌ ಕರೆಗಳನ್ನು ಯಾವುದೇ ಟೆಲಿಕಾಂ ಲ್ಯಾಂಡ್‌ಲೈನ್ ನಂಬರ್‌ ಮತ್ತು ಎಲ್ಲ ಮೊಬೈಲ್‌ ನಂಬರ್‌ಗಳಿಗೆ ಮಾಡಬಹುದಾಗಿದೆ.

ಬೆಲೆ, ಲಭ್ಯತೆ ಮತ್ತು ಆಫರ್

ಬೆಲೆ, ಲಭ್ಯತೆ ಮತ್ತು ಆಫರ್

JioTVCamera ಡಿವೈಸ್‌ 2,999ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಅಧಿಕೃತ jio.com ವೆಬ್‌ತಾಣದಲ್ಲಿ ಖರೀದಿಗೆ ಲಭ್ಯವಿದೆ. ಜಿಯೋ ಫೈಬರ್ ಸೆಟ್-ಟಾಪ್ ಬಾಕ್ಸ್ ಹೊಂದಿರುವ ಜಿಯೋ ಫೈಬರ್ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಆರ್ಡರ್ ಮಾಡಿದ 3-5 ದಿನಗಳೊಳಗಾಗಿ ಡಿವೈಸ್ ಡೆಲಿವರಿ ಆಗುತ್ತದೆ ಎಂದು ಸಂಸ್ಥೆಯು ಹೇಳಿದೆ. ಹಾಗೆಯೇ ಈ ಡಿವೈಸ್ ಖರೀದಿಸಲು ಇಎಮ್‌ಐ ಸೌಲಭ್ಯ ಸಹ ನೀಡಲಾಗಿದೆ.

Best Mobiles in India

English summary
JioTVCamera lets you make video calls via the Jio Fiber set top-box to Jio numbers only. It attaches itself to the Jio Fiber set-top box and sits on top of the television set. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+