Subscribe to Gizbot

3,000 ಇಂಜಿನಿಯರ್‌ಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ

Written By:

3,097 ಕೋಟಿ ರೂಪಾಯಿಯ ಒಟ್ಟಾರೆ ಹೂಡಿಕೆಯಿಂದ ಕರ್ನಾಟಕ ಸರ್ಕಾರ 9 ಮಾಹಿತಿ ತಂತ್ರಜ್ಞಾನ ಯೋಜನೆಗಳನ್ನು ರೂಪಿಸಲು ಅನುಮೋದನೆ ನೀಡುವಲ್ಲಿ ಸ್ಪಷ್ಟ ಮಾಹಿತಿ ನೀಡಿದೆ. ಇಂಟೆಲ್‌ ಚಿಪ್‌ ತಯಾರಕ ಕಂಪನಿಯಿಂದ 3,000 ಇಂಜಿನಿಯರ್‌ ಮುಗಿಸಿದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಹೇಳಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಇನ್ನು ಹಲವು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಆರಂಭದಿಂದ ಉದ್ಯೋಗಾವಕಾಶ ಹೆಚ್ಚಾಗುವ ಬಗ್ಗೆ ಹೇಳಿದ್ದು, ಯಾವ ಯಾವ ಕಂಪನಿಗಳಿಂದ ಎಷ್ಟೆಷ್ಟು ಉದ್ಯೋಗಾವಕಾಶ ದೊರೆಯಲಿದೆ ಎಂಬುದನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.


ಓದಿರಿ : ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
9 ಮಾಹಿತಿ ತಂತ್ರಜ್ಞಾನ ಯೋಜನೆ

9 ಮಾಹಿತಿ ತಂತ್ರಜ್ಞಾನ ಯೋಜನೆ

ಕರ್ನಾಟಕ ಸರ್ಕಾರ 9 ಮಾಹಿತಿ ತಂತ್ರಜ್ಞಾನ ಯೋಜನೆಗಳನ್ನು 3,097 ಕೋಟಿ ರೂಪಾಯಿಯ ಒಟ್ಟಾರೆ ಹೂಡಿಕೆಯಿಂದ ಸ್ಪಷ್ಟ ಮಾಹಿತಿ ನೀಡಿದೆ.

ಇಂಟೆಲ್‌ ಚಿಪ್‌ ತಯಾರಕ ಕಂಪನಿ

ಇಂಟೆಲ್‌ ಚಿಪ್‌ ತಯಾರಕ ಕಂಪನಿ

ಒಟ್ಟಾರೆ ಹೂಡಿಕೆ 3,097 ಕೋಟಿ ರೂಪಾಯಿಯಲ್ಲಿ ಇಂಟೆಲ್‌ ಚಿಪ್‌ ತಯಾರಕರ 1,100 ಕೋಟಿ ಹಣವು ಸೇರಿದ್ದು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ ಸೌಲಭ್ಯಗಳಿಗೆ ವೆಚ್ಚ ಮಾಡಲಾಗುವುದು ಎನ್ನಲಾಗಿದೆ.

 ಕರ್ನಾಟಕ ಕೈಗಾರಿಕ ಸಚಿವಾಲಯ

ಕರ್ನಾಟಕ ಕೈಗಾರಿಕ ಸಚಿವಾಲಯ

ಕರ್ನಾಟಕ ರಾಜ್ಯದ ಉನ್ನತ ಮಟ್ಟದ ಅನುಮೋದನೆ ಸಮಿತಿಯ ಅಧ್ಯಕ್ಷರಾದ ಸಿದ್ಧರಾಮಯ್ಯನವರು 4 ಪ್ರಮುಖ ಮಾಹಿತಿ ತಂತ್ರಜ್ಞಾನ ಯೋಜನೆಗಳನ್ನು 2,957 ಕೋಟಿ ಹೂಡಿಕೆಯಲ್ಲಿ ಮತ್ತು ಇತರೆ 5 ಯೋಜನೆಗಳನ್ನು ಮಾಹಿತಿ ತಂತ್ರಜ್ಞಾನ ಸಚಿವರಾದ ಎಸ್‌ ಆರ್‌ ಪಾಟೀಲ್‌ ರವರು 140 ಕೋಟಿ ಸಹಭಾಗಿತ್ವ ಹೂಡಿಕೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಕರ್ನಾಟಕ ಕೈಗಾರಿಕಾ ಸಚಿವಾಲಯ ಹೇಳಿದೆ.

 ಚಿಪ್‌ ತಯಾರಕ ಇಂಟೆಲ್‌

ಚಿಪ್‌ ತಯಾರಕ ಇಂಟೆಲ್‌

ಇಂಟೆಲ್‌ ಚಿಪ್‌ ತಯಾರಕ ಕಂಪನಿಯು 1,100 ಕೋಟಿ ಹೂಡಿಕೆಯೊಂದಿಗೆ ಎರಡನೇ ಕಂಪ್ಯೂಟರ್‌ ಸಾಫ್ಟ್‌ವೇರ್ ಅಭಿವೃದ್ದಿ ಕೇಂದ್ರವನ್ನು ಹಾಗೂ ಹಾರ್ಡ್‌ವೇರ್‌ ವಿನ್ಯಾಸ ಸೇವೆ ಸೌಲಭ್ಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಹೂಡಿಕೆ ಮಾಡುವುದಾಗಿ ಹೇಳಿದೆ.

ಇಂಟೆಲ್‌ನಿಂದ 3000 ಉದ್ಯೋಗ

ಇಂಟೆಲ್‌ನಿಂದ 3000 ಉದ್ಯೋಗ

ಚಿಪ್‌ ತಯಾರಕ ಇಂಟೆಲ್‌ ಕಂಪನಿ ಬೆಂಗಳೂರಿನಲ್ಲಿ ತನ್ನ ಕೇಂದ್ರ ಸ್ಥಾಪಿಸುವುದರಿಂದ 3000 ಇಂಜಿನಿಯರ್ ಮುಗಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗಲಿದೆ ಎಂದು ಹೇಳಲಾಗಿದೆ.

ವೆಲಂಕನಿ ಇಲೆಕ್ಟ್ರಾನಿಕ್ಸ್

ವೆಲಂಕನಿ ಇಲೆಕ್ಟ್ರಾನಿಕ್ಸ್

ವೆಲಂಕನಿ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ 1,130 ಕೋಟಿ ರೂಪಾಯಿ ಹೂಡಿಕೆಯಿಂದ ಇಲೆಕ್ಟ್ರಾನಿಕ್‌ಸಿಟಿಯಲ್ಲಿ ತನ್ನ ಪ್ರಾಡಕ್ಟ್‌ಗಳ ತಯಾರಿಕಾ ಸಾಮರ್ಥ್ಯ ಹೆಚ್ಚಿಸುವುದಾಗಿ ಹೇಳಲಾಗಿದೆ. ಇದರಿಂದ 2,400 ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಸಾಲ್‌ಟೈರ್‌ ಅಭಿವೃದ್ದಿ ಲಿಮಿಟೆಡ್‌

ಸಾಲ್‌ಟೈರ್‌ ಅಭಿವೃದ್ದಿ ಲಿಮಿಟೆಡ್‌

ಸಾಲ್‌ಟೈರ್‌ ಅಭಿವೃದ್ದಿ ಲಿಮಿಟೆಡ್‌ 463 ಕೋಟಿಯನ್ನು ಮಾಹಿತಿ ತಂತ್ರಜ್ಞಾಣ SEZ ಅಭಿವೃದ್ದಿಗಾಗಿ ಹೂಡಿಕೆ ಮಾಡಲಿದೆ. ಇದರಿಂದ 25,000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಲಾಗಿದೆ.

ಅಮಿನ್‌ ಪ್ರಾಪರ್ಟೀಸ್‌

ಅಮಿನ್‌ ಪ್ರಾಪರ್ಟೀಸ್‌

ಅಮಿನ್‌ ಪ್ರಾಪರ್ಟೀಸ್ 264.25 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿ 8,000 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಹೇಳಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Jobs for 3000 engineers in bengaluru by chip maker intel. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot