Home
ಸುದ್ದಿಜಾಲ

ಜೋಶ್‌ ಆಪ್‌ ಡೌನ್‌ಲೋಡ್‌ ಮತ್ತು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಸದ್ಯ ಟ್ರೆಂಡಿಂಗ್‌ನಲ್ಲಿರುವ ಶಾರ್ಟ್‌ ವಿಡಿಯೊ ಕ್ರಿಯೆಟ್‌ ಅಪ್ಲಿಕೇಶನ್‌ಗಳಲ್ಲಿ ಜೋಶ್ ಅಪ್ಲಿಕೇಶನ್ ಸಹ ಒಂದಾಗಿದೆ. ಈ ಆಪ್‌ ಬಳಕೆದಾರರಿಗೆ ಸಣ್ಣ ವೀಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಟಿಕ್‌ಟಾಕ್‌ಗೆ ಪರ್ಯಾಯವಾದ ಅಪ್ಲಿಕೇಶನ್‌ಗಳಲ್ಲಿ ಇದು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಆದರೆ ಟಿಕ್‌ಟಾಕ್‌ ಪ್ರಸ್ತುತ ಬ್ಯಾನ್‌ ಆಗಿದೆ. ಈ ನಿಟ್ಟಿನಲ್ಲಿ ಸದ್ಯ ಭಾರತೀಯ ಮೂಲದ ಕಿರು ವೀಡಿಯೊ ಪ್ಲಾಟ್‌ಫಾರ್ಮ್‌ಗೆ ಜನಪ್ರಿಯ ಪಡೆಯುತ್ತಿವೆ. ಆ ಪೈಕಿ ಜೋಶ್‌ ಅಪ್ಲಿಕೇಶನ್ ಇತರೆ ಶಾರ್ಟ್‌ ವಿಡಿಯೊ ಕ್ರಿಯೆಟ್‌ ಆಪ್‌ಗಳಿಗಿಂತ ಭಿನ್ನವಾಗಿದೆ.

ಏನಿದು ಜೋಶ್ ಅಪ್ಲಿಕೇಶನ್?

ಏನಿದು ಜೋಶ್ ಅಪ್ಲಿಕೇಶನ್?

ಶಾರ್ಟ್‌ ವೀಡಿಯೊಗಳನ್ನು ಕ್ರಿಯೆಟ್‌ ಮಾಡಲು ಮತ್ತು ಶೇರ್‌ ಮಾಡಲು ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ಗೆ ಇತ್ತೀಚಿನ ಹೊಸ ಸೇರ್ಪಡೆಯೆಂದರೇ ಅದುವೇ ಜೋಶ್ ಅಪ್ಲಿಕೇಶನ್. ಈ ಆಪ್‌ ಭಾರತ ಮೂಲದ ಅಪ್ಲಿಕೇಶನ್‌ ಆಗಿದೆ. ಹಿಂದಿ, ತಮಿಳು, ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂನಂತಹ ವಿವಿಧ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತದೆ. ಟ್ರೆಂಡಿಂಗ್, ತಮಾಷೆ, ಗ್ಲಾಮರ್ಸ್‌, ಡ್ಯಾನ್ಸ್ ಮತ್ತು ಮ್ಯೂಸಿಕ್‌ ಪ್ರಕಾರಗಳು, ಬಾಲಿವುಡ್ ಮತ್ತು ಹೆಚ್ಚಿನವುಗಳಿಂದ ವಿವಿಧ ಪ್ರಕಾರಗಳು ಮತ್ತು ಭಾಷೆಗಳಿಂದ ಮನರಂಜನೆಯ ವೀಡಿಯೊಗಳನ್ನು ಬಳಕೆದಾರರು ಕಾಣಬಹುದು. ಇನ್ನು ಜೋಶ್ ಅಪ್ಲಿಕೇಶನ್‌ನ ಪ್ರಮುಖ ವಿಶೇಷವೆಂದರೆ ಈ ಆಪ್‌ ಲಾಗಿನ್ ಕಡ್ಡಾಯಗೊಳಿಸುವುದಿಲ್ಲ.

ಜೋಶ್ ಆಪ್‌ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಜೋಶ್ ಆಪ್‌ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಪ್ರಸ್ತುತ, ಜೋಶ್ ಅಪ್ಲಿಕೇಶನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಲಭ್ಯವಿದೆ. ಈ ಅಪ್ಲಿಕೇಶನ್ ಅನ್ನು Google Play ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಅಪ್ಲಿಕೇಶನ್ ಅನ್ನು ಸರ್ಚ್‌ಬಾರ್‌ನಲ್ಲಿ ಹುಡುಕಬಹುದು. ಅಲ್ಲದೇ ಜೋಶ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನೀವು ಈ ಲಿಂಕ್ ಅನ್ನು ಸಹ ಕ್ಲಿಕ್ ಮಾಡಬಹುದು. ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ಅಪ್ಲಿಕೇಶನ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಆಗುವುದು. ಮತ್ತು ನೀವು ಆಪ್‌ ಬಳಸಲು ಪ್ರಾರಂಭಿಸಬಹುದು. ಇನ್ನು ಈ ಅಪ್ಲಿಕೇಶನ್ ಗಾತ್ರವು 7.6MB ಆಗಿದೆ. ಮತ್ತು ಹೆಚ್ಚಿನ ರೇಟಿಂಗ್ ಪಡೆದಿದೆ.

ಜೋಶ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ?

ಜೋಶ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ?

ಅಪ್ಲಿಕೇಶನ್‌ನಲ್ಲಿ ಭಾಷೆ ಆಯ್ಕೆಗಳಿಗೆ ತೆರೆಯುತ್ತದೆ, ಅಲ್ಲಿ ನಿಮ್ಮ ಆದ್ಯತೆಯ ಭಾಷೆಯನ್ನು ನೀವು ಆಯ್ಕೆ ಮಾಡಬಹುದು. ಪ್ರಸ್ತುತ, ಜೋಶ್ ಅಪ್ಲಿಕೇಶನ್ ಹಿಂದಿ, ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಇಂಗ್ಲಿಷ್ ಅನ್ನು ಮಾತ್ರ ಬೆಂಬಲಿಸುತ್ತದೆ. ನೀವು ಭಾಷೆಯನ್ನು ಆರಿಸಿದ ನಂತರ, ಅಪ್ಲಿಕೇಶನ್ ಮೇನ್‌ಪೇಜ್‌ ತೆರೆಯುತ್ತದೆ, ನಂತರ ನೀವು ಶಾರ್ಟ್‌ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ.

 ಜೋಶ್ ಅಪ್ಲಿಕೇಶನ್

ಅದರ ವೀಕ್ಷಣೆಯಿಂದ, ಜೋಶ್ ಅಪ್ಲಿಕೇಶನ್ ಟಿಕ್‌ಟಾಕ್‌ ಹೋಲುವ ಅತ್ಯಂತ ಕ್ಲಿಯರ್‌ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಟಿಕ್‌ಟಾಕ್‌ನಂತೆಯೇ ಬಳಕೆದಾರರು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವೀಡಿಯೊಗಳನ್ನು ವೀಕ್ಷಿಸಬಹುದು. ಹೆಚ್ಚಿನ ವೀಡಿಯೊಗಳನ್ನು ನೋಡುವುದನ್ನು ಮುಂದುವರಿಸಲು, ಹೋಮ್‌ ಪೇಜ್‌ ಮೂಲಕ ಸ್ಕ್ರಾಲ್ ಮಾಡಿ.

ಜೋಶ್ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ರಚಿಸಲು ಮತ್ತು ಅಪ್‌ಲೋಡ್ ಮಾಡುವುದು ಹೇಗೆ?

ಜೋಶ್ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ರಚಿಸಲು ಮತ್ತು ಅಪ್‌ಲೋಡ್ ಮಾಡುವುದು ಹೇಗೆ?

ಹಂತ 1: ವೀಡಿಯೊಗಳನ್ನು ರಚಿಸಲು ಬಳಕೆದಾರರು ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಗ್ಯಾಲರಿಯನ್ನು ಪ್ರವೇಶಿಸಲು ಅನುಮತಿ ನೀಡಬೇಕಾಗುತ್ತದೆ.

ಹಂತ 2: ನಿಮ್ಮ ವೀಡಿಯೊವನ್ನು ಹೆಚ್ಚು ಆಸಕ್ತಿಕರಗೊಳಿಸಲು ಜೋಶ್ ಅಪ್ಲಿಕೇಶನ್‌ನಲ್ಲಿ ಸರಳ ಎಡಿಟಿಂಗ್ ತಂತ್ರಗಳನ್ನು ನೀವು ಬಳಸಬಹುದು. ನೀವು ಸಂಗೀತ, ಫಿಲ್ಟರ್‌ಗಳು ಮತ್ತು ಹೆಚ್ಚಿನದನ್ನು ಕೂಡ ಸೇರಿಸಬಹುದು.

ಹಂತ 3: ನೀವು ಲಾಗ್ ಇನ್ ಆಗಬೇಕು ಅಥವಾ ನೀವು ಖಾತೆ ಹೊಂದಿಲ್ಲದಿದ್ದರೆ, ಹೊಸ ಖಾತೆಯನ್ನು ರಚಿಸಬೇಕಾಗುತ್ತದೆ. ಇದು ಜೋಶ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಬಳಕೆದಾರ ಹೆಸರನ್ನು ಹೊರತರುತ್ತದೆ, ಅಲ್ಲಿ ಬಳಕೆದಾರರು ನಿಮ್ಮ ವೀಡಿಯೊಗಳನ್ನು ವೀಕ್ಷಿಸಬಹುದು.

ಹಂತ 4: ನಂತರ, ನೀವು ವೀಡಿಯೊವನ್ನು ಅಪ್‌ಲೋಡ್ ಮಾಡಬಹುದು. ವೀಡಿಯೊ ಅಪ್‌ಲೋಡ್ ಮಾಡುವಾಗ ಒಂದೆರಡು ಆಯ್ಕೆಗಳಿವೆ. ಉದಾಹರಣೆಗೆ, ನೀವು ಅದನ್ನು ಅಪ್ಲಿಕೇಶನ್‌ನಲ್ಲಿರುವ ಎಲ್ಲರೊಂದಿಗೆ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು ಅಥವಾ ಅದನ್ನು ನಿಮ್ಮ ಫಾಲೋವರ್ಸ್‌ಗೆ ಮಾತ್ರ ಹಂಚಿಕೊಳ್ಳಬಹುದು.

ಜೋಶ್ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ಶೇರ್‌ ಮಾಡುವುದು ಹೇಗೆ

ಜೋಶ್ ಅಪ್ಲಿಕೇಶನ್‌ನಲ್ಲಿ ವೀಡಿಯೊಗಳನ್ನು ಶೇರ್‌ ಮಾಡುವುದು ಹೇಗೆ

ನಿಮ್ಮ ವೀಡಿಯೊ ಅಪ್‌ಲೋಡ್ ಮಾಡಿದ ನಂತರ, ನೀವು ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಬಹುದು. ನೀವು ರಚಿಸಿದ ವೀಡಿಯೊಗಳ ಹೊರತಾಗಿ, tree-dotted ಬಟನ್‌ ಕ್ಲಿಕ್ ಮಾಡುವುದರ ಮೂಲಕ ಇತರ ಬಳಕೆದಾರರು ರಚಿಸಿದ ವೀಡಿಯೊಗಳನ್ನು ಸಹ ನೀವು ಹಂಚಿಕೊಳ್ಳಬಹುದು.

Best Mobiles in India

English summary
Josh app is one of the trending apps, providing users a platform to create and share short videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+