ಜೆವಿಸಿ : ಅತೀ ಕಡಿಮೆ ಬೆಲೆಗೆ 6 ಸ್ಮಾರ್ಟ್‌ಟಿವಿಗಳ ಬಿಡುಗಡೆ!

|

ಸದ್ಯ ಸ್ಮಾರ್ಟ್‌ಟಿವಿ ವಲಯದಲ್ಲಿ ಭಾರೀ ಚೇತರಿಕೆ ಕಂಡುಬಂದಿದ್ದು, ಮಾರುಕಟ್ಟೆಯಲ್ಲಿ ಪೈಪೋಟಿ ತೀವ್ರಗೊಳ್ಳುತ್ತಲೇ ಇದೆ. ಬಹುತೇಕ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯೇ ಅತ್ಯುತ್ತಮವೆನಿಸಿದ್ದು, ಹೀಗಾಗಿ ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಈ ಲಿಸ್ಟ್‌ಗೆ ಜೆವಿಸಿ (ಜಪನ್ ವಿಕ್ಟರ್ ಕಂಪನಿ-JVC) ಕಂಪನಿಯು ಸೇರ್ಪಡೆ ಆಗಿದ್ದು, ಅಗ್ಗದ ದರದಲ್ಲಿ ಸ್ಮಾರ್ಟ್‌ಟಿವಿಗಳನ್ನು ಘೋಷಿಸಿದೆ.

ಜೆವಿಸಿ : ಅತೀ ಕಡಿಮೆ ಬೆಲೆಗೆ 6 ಸ್ಮಾರ್ಟ್‌ಟಿವಿಗಳ ಬಿಡುಗಡೆ!

ಹೌದು, ಜೆವಿಸಿ ಕಂಪನಿಯು ಒಟ್ಟು ಆರು ವಿವಿಧ ಶ್ರೇಣಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದ್ದು, ಆರಂಭಿಕ ಬೆಲೆಯು 7,499ರೂ.ಗಳು ಆಗಿದೆ. ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿವೆ. ಈ ಸ್ಮಾರ್ಟ್‌ಟಿವಿ ಸರಣಿಗಳು 29 ಇಂಚಿನಿಂದ 39 ಇಂಚಿನ ಆಯ್ಕೆಗಳಲ್ಲಿ ದೊರೆಯಲಿದೆ. ಜೆವಿಸಿ ಸ್ಮಾರ್ಟ್‌ಟಿವಿಗಳು ಇನ್‌ಬಿಲ್ಟ್‌ ಅಪ್ಲಿಕೇಶನ್‌ಗಳನ್ನು ಹೊಂದಿವೆ.

ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಜೆವಿಸಿ : ಅತೀ ಕಡಿಮೆ ಬೆಲೆಗೆ 6 ಸ್ಮಾರ್ಟ್‌ಟಿವಿಗಳ ಬಿಡುಗಡೆ!

ಜೆಸಿವಿ ಕಂಪನಿಯು ಒಟ್ಟು ಆರು ಮಾದರಿಗಳಲ್ಲಿ ಸ್ಮಾರ್ಟ್‌ಟಿವಿಗಳನ್ನು ಘೋಷಿಸಿದೆ. ಅವುಗಳೆಂದರೇ ಜೆವಿಸಿ 32N3105C (7,499ರೂ), ಜೆವಿಸಿ 32N380C (9,999ರೂ), ಜೆವಿಸಿ 24N380C (7,499ರೂ), ಜೆವಿಸಿ 32N385C (11,999ರೂ), ಜೆವಿಸಿ 39N380C (15,999ರೂ), ಮತ್ತು ಜೆವಿಸಿ 39N3105C (16,999ರೂ). ಇವು ಮಾರುಕಟ್ಟೆಯಲ್ಲಿ ಬಜೆಟ್‌ ಗ್ರಾಹಕರನ್ನು ಸೆಳೆಯುವ ಲಕ್ಷಣಗಳನ್ನು ಸೂಚಿಸಿವೆ.

ಜೆವಿಸಿ : ಅತೀ ಕಡಿಮೆ ಬೆಲೆಗೆ 6 ಸ್ಮಾರ್ಟ್‌ಟಿವಿಗಳ ಬಿಡುಗಡೆ!

ಜೆವಿಸಿಯ ಆರು ಸ್ಮಾರ್ಟ್‌ಟಿವಿಗಳಲ್ಲಿ ಆರಂಭಿಕ ಮಾದರಿಯ ಜೆವಿಸಿ-32N3105C ಆಗಿದ್ದು, ಈ ಸ್ಮಾರ್ಟ್‌ಟಿವಿಯು 1366x768 ಪಿಕ್ಸಲ್ ರೆಸಲ್ಯೂಶನ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ತನ್ನ ವರ್ಗದಲ್ಲಿಯೇ ಇದು ಉತ್ತಮ ಡಿಸ್‌ಪ್ಲೇ ಆಗಿದೆ. ಹಾಗೆಯೇ 24W ಸೌಂಡ್‌ ಔಟ್‌ಪುಟ್‌ ಸಾಮರ್ಥ್ಯವನ್ನು ಹೊಂದಿದ್ದು, 1GB RAM ಮತ್ತು 8GB ಸ್ಟೋರೇಜ್‌ ಬಲದೊಂದಿಗೆ ಕ್ವಾಡ್‌ಕೋರ್‌ ಪ್ರೊಸೆಸರ್‌ ಶಕ್ತಿಯನ್ನು ಪಡೆದುಕೊಂಡಿದೆ.

ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು! ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಈ ಸ್ಮಾರ್ಟ್‌ಟಿವಿಯು ಮಿರಾಕಾಸ್ಟ್‌(Miracast) ಬೆಂಬಲವನ್ನು ಹೊಂದಿದ್ದು, ಇದರ ನೆರವಿನಿಂದ ಸ್ಕ್ರೀನ್‌ ಕಾಸ್ಟಿಂಗ್ ಮಾಡಬಹುದು. ಇದರೊಂದಿಗೆ ಮೂರು HDMI ಫೋರ್ಟ್‌ಗಳ ಆಯ್ಕೆ ನೀಡಲಾಗಿದೆ. ಎರಡು USB ಫೋರ್ಟ್‌ ಸೌಲಭ್ಯ ಒಳಗೊಂಡಿದ್ದು, ಇನ್‌ಬಿಲ್ಟ್‌ ವೈ-ಫೈ ಮತ್ತು ಎತರ್ನೆಟ್ (Ethernet) ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಗಳು ಸ್ಮಾರ್ಟ್‌ ರಿಮೋಟ್‌ ಆಯ್ಕೆಯನ್ನು ಹೊಂದಿವೆ.

ಓದಿರಿ : ಶಿಯೋಮಿ LED ಸ್ಮಾರ್ಟ್‌ ಬಲ್ಬ್ ಖರೀದಿಗೆ ಲಭ್ಯ!..ಬೆಲೆ ಎಷ್ಟು ಗೊತ್ತಾ? ಓದಿರಿ : ಶಿಯೋಮಿ LED ಸ್ಮಾರ್ಟ್‌ ಬಲ್ಬ್ ಖರೀದಿಗೆ ಲಭ್ಯ!..ಬೆಲೆ ಎಷ್ಟು ಗೊತ್ತಾ?

Best Mobiles in India

English summary
JVC has announced six new LED TVs as part of its range of affordable smart TVs. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X