ಜೆವಿಸಿಯಿಂದ ಹೊಸ ಸ್ಮಾರ್ಟ್‌ LED ಟಿವಿ ಲಾಂಚ್!.ಆರಂಭಿಕ ಬೆಲೆ 7,499ರೂ!

|

ಜೆವಿಸಿ ಕಂಪನಿಯು ಕಳೆದ ತಿಂಗಳು ಆರು ಹೊಸ ಬಜೆಟ್‌ ಬೆಲೆಯ ಸ್ಮಾರ್ಟ್‌ LED ಟಿವಿಗಳನ್ನು ಅನಾವರಣ ಮಾಡಿ ಗ್ರಾಹಕರನ್ನು ಆಕರ್ಷಿಸಿತ್ತು. ಆದ್ರೆ ಇದೀಗ ಕಂಪನಿಯು ಆ ಆರು ಸ್ಮಾರ್ಟ್‌ LED ಟಿವಿಗಳ ಪೈಕಿ ಎರಡು ಮಾಡೆಲ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಎರಡು LED ಟಿವಿಗಳು ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದುಕೊಂಡಿದ್ದು, ಸ್ಪೀಕರ್ಸ್‌ಗಳು ಡಾಲ್ಬಿ ಸೌಂಡ್ ಪಡೆದುಕೊಂಡಿವೆ.

ಜೆವಿಸಿಯಿಂದ ಹೊಸ ಸ್ಮಾರ್ಟ್‌ LED ಟಿವಿ ಲಾಂಚ್!.ಆರಂಭಿಕ ಬೆಲೆ 7,499ರೂ!

ಹೌದು, ಜೆವಿಸಿ ಕಂಪನಿಯು ದೇಶಿಯ ಮಾರುಕಟ್ಟೆಗೆ ಹೊಸದಾಗಿ 32 ಮತ್ತು 24 ಇಂಚಿನ (32N380C ಮತ್ತು 24N380C ಮಾಡೆಲ್‌) ಎರಡು ಹೆಚ್‌ಡಿ LED ಟಿವಿಗಳನ್ನು ಪರಿಚಯಿಸಿದೆ. ಬಿಲ್ಟ್‌ಇನ್‌ ಬ್ಲೂಟೂತ್ ಸೌಲಭ್ಯ ಹೊಂದಿರುವ ಈ ಟಿವಿಗಳು, ಝಿರೋ ಡಾಟ್ A+ ಗ್ರೇಡ್‌ ಮತ್ತು ಅಲ್ಟ್ರಾ ಲ್ಯುಮಿನಸ್‌ ಬ್ಯಾಕ್‌ಲೈಟ್‌ ಟೆಕ್ ತಂತ್ರಜ್ಞಾನವನ್ನು ಪಡೆದಿವೆ. ಹೀಗಾಗಿ ಸೂಪ್ರಿಮ್ ಪಿಚ್ಚರ್ ಕ್ವಾಲಿಟಿಯಲ್ಲಿ ಮೂಡಿಬರಲಿದ್ದು, ಅತ್ಯುತ್ತಮ ಸಿನಿಮಿಯ ಅನುಭವವನ್ನು ನೀಡಲಿವೆ.

ಜೆವಿಸಿಯಿಂದ ಹೊಸ ಸ್ಮಾರ್ಟ್‌ LED ಟಿವಿ ಲಾಂಚ್!.ಆರಂಭಿಕ ಬೆಲೆ 7,499ರೂ!

ಈ ಸ್ಮಾರ್ಟ್‌ ಟಿವಿಗಳಲ್ಲಿ ಅಲ್ಟ್ರಾವೈಲ್ಡ್‌ ಕಲರ್ ಟೆಕ್‌ ತಂತ್ರಜ್ಞಾನವಿದ್ದು, ಜೊತೆಗೆ ಡಾಲ್ಬಿ ಸೌಂಡ್‌ ಸೌಲಭ್ಯವಿರುವ 24W ಸಾಮರ್ಥ್ಯದ ಸ್ಪೀಕರ್ಸ್‌ಗಳನ್ನು ನೀಡಲಾಗಿದೆ. ಹಾಗೆಯೇ ಗೇಮ್ಸ್ ಪ್ರಿಯರಿಗಾಗಿ ಗೇಮಿಂಗ್ ಮೋಡ್‌ ಆಯ್ಕೆಯನ್ನು ಸೇರಿಸಲಾಗಿದ್ದು, ಜನಪ್ರಿಯ ಗೇಮ್ ಆಪ್ಸ್‌ಗಳಿಗೆ ಬೆಂಬಲ ನೀಡಲಿದೆ. ಹಾಗಾದರೇ ಜೆವಿಸಿಯ ಹೊಸ ಸ್ಮಾರ್ಟ್‌ LED ಟಿವಿಗಳ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಭಾರತದಲ್ಲಿ ಇಂದಿನಿಂದ 'ಒಪ್ಪೊ ಕೆ3' ಸೇಲ್ ಆರಂಭ!..ಹೇಗಿವೆ ಫೀಚರ್ಸ್?ಓದಿರಿ : ಭಾರತದಲ್ಲಿ ಇಂದಿನಿಂದ 'ಒಪ್ಪೊ ಕೆ3' ಸೇಲ್ ಆರಂಭ!..ಹೇಗಿವೆ ಫೀಚರ್ಸ್?

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಜೆವಿಸಿಯ ಈ ಹೊಸ ಎರಡು ಸ್ಮಾರ್ಟ್‌ LED ಟಿವಿಗಳು 32 ಮತ್ತು 24 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪೇಯು 1366 x 768 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಟಿವಿಗಳು ತೆಳುವಾದ ಬೆಜಲ್ ಅನ್ನು ಹೊಂದಿದ್ದು, ಅಲ್ಟ್ರಾ ಲ್ಯುಮಿನಸ್‌ ಬ್ಯಾಕ್‌ಲೈಟ್‌ ತಂತ್ರಜ್ಞಾನವು ಟಿವಿ ವೀಕ್ಷಣೆಯ ಅನುಭವವನ್ನು ಅತ್ಯುತ್ತಮಗೊಳಿಸಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಜೆವಿಸಿಯ ಹೊಸ ಸ್ಮಾರ್ಟ್‌ ಎಲ್‌ಇಡಿ ಟಿವಿಗಳು ಕ್ವಾರ್ಡ್‌ ಕೋರ್‌ ಕಾರ್ಟೆಕ್ಸ್ A53 CPU ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಪ್ರೊಸೆಸರ್‌ 1.5GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ Mali-450MP ಸಾಮರ್ಥ್ಯದ ಗ್ರಾಫಿಕ್‌ ಪ್ರೊಸೆಸರ್‌ ಒಳಗೊಂಡಿದ್ದು, 1GB RAM ನೊಂದಿಗೆ 8GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದೆ.

ಓದಿರಿ : ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!ಓದಿರಿ : ವಿಶ್ವದ ಮೊದಲ 64ಎಂಪಿ ಕ್ಯಾಮೆರಾ ಫೋನ್‌ ಬಿಡುಗಡೆಗೆ ಸಜ್ಜಾದ ಶಿಯೋಮಿ!

ಆರು ಹೊಸ ಟಿವಿ ಮಾದರಿಗಳು

ಆರು ಹೊಸ ಟಿವಿ ಮಾದರಿಗಳು

ಜೆವಿಸಿ ಕಂಪನಿಯು 32N3105C (7,499ರೂ), ಜೆವಿಸಿ 32N380C (9,999ರೂ), ಜೆವಿಸಿ 24N380C (7,499ರೂ), ಜೆವಿಸಿ 32N385C (11,999ರೂ), ಜೆವಿಸಿ 39N380C (15,999ರೂ), ಮತ್ತು ಜೆವಿಸಿ 39N3105C (16,999ರೂ) ಮಾಡೆಲ್‌ನ ಒಟ್ಟು ಆರು ಮಾದರಿಗಳಲ್ಲಿ ಸ್ಮಾರ್ಟ್‌ ಎಲ್‌ಇಡಿ ಟಿವಿಗಳನ್ನು ಇತ್ತೀಚಿಗೆ ಘೋಷಿಸಿತ್ತು. ಅವುಗಳಲ್ಲಿಗ 32N380C ಮತ್ತು 24N380C ಮಾಡೆಲ್‌ಗಳು ಭಾರತದಲ್ಲಿ ಲಾಂಚ್‌ ಆಗಿವೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಬಿಲ್ಟ್‌ಇನ್ ಬ್ಲೂಟೂತ್ ಸೌಲಭ್ಯ ಹಾಗೂ ಮಿರಾಕಾಸ್ಟ್‌(Miracast) ಬೆಂಬಲವನ್ನು ಹೊಂದಿದ್ದು, ಇದರ ನೆರವಿನಿಂದ ಸ್ಕ್ರೀನ್‌ ಕಾಸ್ಟಿಂಗ್ ಮಾಡಬಹುದು. ಹಾಗೆಯೇ ಮೂರು HDMI ಫೋರ್ಟ್‌ಗಳ ಆಯ್ಕೆ ನೀಡಲಾಗಿದ್ದು, ಎರಡು USB ಫೋರ್ಟ್‌ ಸೌಲಭ್ಯ ಒಳಗೊಂಡಿದೆ. ಇನ್‌ಬಿಲ್ಟ್‌ ವೈ-ಫೈ ಮತ್ತು ಎತರ್ನೆಟ್ (Ethernet) ಕನೆಕ್ಟಿವಿಟಿಯನ್ನು ಸಹ ಹೊಂದಿದ್ದು, ಜೊತೆಗೆ ಸ್ಮಾರ್ಟ್‌ ರಿಮೋಟ್‌ ಆಯ್ಕೆಯನ್ನು ಹೊಂದಿವೆ.

ಲಭ್ಯತೆ

ಲಭ್ಯತೆ

ದೇಶಿಯ ಮಾರುಕಟ್ಟೆಗೆ ಲಾಂಚ್‌ ಆಗಿರುವ ಈ ಎರಡು ಸ್ಮಾರ್ಟ್‌ ಎಲ್‌ಇಡಿ ಟಿವಿಗಳು ಪ್ರಮುಖ ರೀಟೈಲ್‌ ಶಾಪ್‌ಗಳಲ್ಲಿ ಮತ್ತು ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿದೆ. ಜೆವಿಸಿ 32N380C ಮಾಡೆಲ್ 9,999ರೂ.ಗಳಾಗಿದ್ದು ಹಾಗೂ ಜೆವಿಸಿ 24N380C ಮಾಡೆಲ್ 7,499ರೂ. ಪ್ರೈಸ್‌ಟ್ಯಾಗ್‌ನಲ್ಲಿ ದೊರೆಯಲಿದೆ.

ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
JVC has unveiled two new TVs in India. The model 32N380C and 24N380C are HD LED TVs with inbuilt Bluetooth. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X