ಕನ್ನಡಿಗರಿಗೆ ಮತ್ತೊಂದು ಜಯ: ನಮ್ಮ ಮೆಟ್ರೋ ಬಳಿಕ, ಎಟಿಎಂನಲ್ಲಿ ಕನ್ನಡದ ಕಂಪು..!

|

ದಿನೇ ದಿನೇ ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗ ಕಣ್ಮರೆಯಾಗುತ್ತಿದ್ದಾನೆ ಎನ್ನುವ ಮಾತು ಕೇಳಿ ಬರುತ್ತಿದೆ. ಕೇಂದ್ರ ಸರಕಾರದ ಭಾಷೆ ಹೇರಿಕೆ, ವಲಸಿಗರ ಭಾಷಾ ಪ್ರಾಬಲ್ಯದ ನಡುವೆ ಕನ್ನಡವನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲು ಕನ್ನಡಿಗರನ್ನೇ ಪ್ರೇರೆಪಿಸುವ ಅಗತ್ಯತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಭಾಷಾ ಹೋರಾಟದ ಫಲವಾಗಿ ನಮ್ಮ ಮೆಟ್ರೋ ವಿಚಾರದಲ್ಲಿ ಗೆಲವು ಸಾಧಿಸಿದಂತೆ ಎಟಿಎಂ ಚೀಟಿಗಳಲ್ಲಿಯೂ ಕನ್ನಡ ಕಾಣಿಸಿಕೊಂಡಿದೆ.

ಕನ್ನಡಿಗರಿಗೆ ಮತ್ತೊಂದು ಜಯ: ನಮ್ಮ ಮೆಟ್ರೋ ಬಳಿಕ, ಎಟಿಎಂನಲ್ಲಿ ಕನ್ನಡದ ಕಂಪು..!

ಓದಿರಿ: ಸ್ಮಾರ್ಟ್‌ಪೋನ್‌ ಮೇಲೆ ವರ್ಷದ ಕೊನೆಯಲ್ಲಿ ಕನಸಲ್ಲೂ ನೆನೆಸದ ಆಫರ್ ನೀಡಿದ ಪೇಟಿಎಂ ಮಾಲ್..!

ಈಗಾಗಲೇ ಬ್ಯಾಂಕ್‌ಗಳು ಕನ್ನಡದಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಕನ್ನಡ ಬರುವ ಮಂದಿಯೇ ಕರ್ನಾಟಕದಲ್ಲಿ ಬಾಂಕ್ ಉದ್ಯೋಗಿಗಳಾಗ ಬೇಕು ಎಂಬ ಹೋರಾಟವು ಶುರುವಾಗಿದೆ. ಕಾರಣ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಇಂಗ್ಲಿಷ್ ಇಲ್ಲವೇ ಹಿಂದಿ ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಈ ಹಿನ್ನಲೆಯಲ್ಲಿ ಕನ್ನಡದ ಕೂಗೂ ಹೆಚ್ಚಾಗಿತ್ತು. ಸದ್ಯ ಕೆನರಾ ಬ್ಯಾಂಕ್ ತನ್ನ ಎಟಿಎಂ ವ್ಯವಹಾರದ ಚೀಟಿಯಲ್ಲಿ ಕನ್ನಡವನ್ನು ಬಳಕೆ ಮಾಡಲು ಶುರು ಮಾಡಿದೆ.

ಮೊದಲಿಗೆ ಕೆನರಾ ಬ್ಯಾಂಕ್‌ನಲ್ಲಿ:

ಮೊದಲಿಗೆ ಕೆನರಾ ಬ್ಯಾಂಕ್‌ನಲ್ಲಿ:

ಮೊದಲಿಗೆ ಕೇವಲ ಕೆನರಾ ಬ್ಯಾಂಕ್ ಎಟಿಎಂಗಳಲ್ಲಿ ಮಾತ್ರ ಕನ್ನಡದಲ್ಲಿ ವ್ಯವಹಾರದ ಚೀಟಿಗಳು ಪ್ರಿಂಟ್ ಆಗುತ್ತಿದೆ. ಇದೇ ರೀತಿ ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕ್ ಎಟಿಎಂಗಳ ವ್ಯವಹಾದ ಚೀಟಿಗಳಲ್ಲಿ ಕನ್ನಡದಲ್ಲಿ ದೊರೆಯುವ ದಿನಗಳೂ ದೂರವಿಲ್ಲ ಎನ್ನಲಾಗಿದೆ.

ಕನ್ನಡ ಗ್ರಾಹಕರ ಕೂಟದ ಹೋರಾಟ

ಕರ್ನಾಟಕದಲ್ಲಿ ಇರುವ ಬ್ಯಾಂಕ್‌ಗಳು ಗ್ರಾಹಕರಿಗೆ ಕನ್ನಡದಲ್ಲಿ ಸೇವೆಯನ್ನು ನೀಡಬೇಕು ಎನ್ನುವ ಹೋರಾಟವನ್ನು ಆರಂಭಿಸಿದ್ದು, ಇದರ ಫಲವಾಗಿ ಇಂದು ಬ್ಯಾಂಕ್ ಎಟಿಎಂ ಗಳಲ್ಲಿ ಕನ್ನಡದಲ್ಲಿ ವ್ಯವಹಾರದ ಚೀಟಿಗಳು ಲಭ್ಯವಾಗುತ್ತಿದೆ ಎನ್ನಲಾಗಿದೆ.

ಕನ್ನಡಕ್ಕೆ ಗೆಲುವು:

ಕನ್ನಡಕ್ಕೆ ಗೆಲುವು:

ರಾಷ್ಟ್ರೀಕೃತ ಬ್ಯಾಂಕ್‌ಗಳು ಕನ್ನಡದಲ್ಲಿ ಸಂಫೂರ್ಣವಾಗಿ ಸೇವೆಯನ್ನು ನೀಡಲು ಶುರು ಮಾಡಿದಲ್ಲಿ ಕನ್ನಡವು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ. ಸದ್ಯದ ಮಟ್ಟಿಗೆ ಎಟಿಎಂ ವ್ಯವಹಾರದ ಚೀಟಿ ಕನ್ನಡದಲ್ಲಿ ದೊರೆತಿರುವುದು ಕನ್ನಡಕ್ಕೆ ಸಂದ ದೊಡ್ಡ ಗೆಲುವಾಗಿದೆ.

Best Mobiles in India

English summary
kannada in canara bank atm slip. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X