Subscribe to Gizbot

ಸ್ಮಾರ್ಟ್‌ಪೋನ್‌ ಮೇಲೆ ವರ್ಷದ ಕೊನೆಯಲ್ಲಿ ಕನಸಲ್ಲೂ ನೆನೆಸದ ಆಫರ್ ನೀಡಿದ ಪೇಟಿಎಂ ಮಾಲ್..!

Written By:

ವರ್ಷದ ಕೊನೆ ಹತ್ತಿರವಾಗುತ್ತಿರುವಂತೆ ಪ್ರಮುಖ ಆನ್‌ಲೈನ್‌ ಶಾಪಿಂಗ್ ತಾಣಗಳು ಒಂದರ ಹಿಂದೆ ಒಂದರಂತೆ ಭರ್ಜರಿ ಸೇಲ್‌ಗಳನ್ನು ಆರಂಭಿಸುತ್ತಿವೆ. ಫ್ಲಿಪ್‌ಕಾರ್ಟ್ ನ್ಯೂ ಪಿಂಚ್ ಡೇ ಸೇಲ್ ಘೋಷಣೆ ಮಾಡಿದ ಬೆನ್ನಲೇ ಪೇಟಿಎಂ ಮಾಲ್ 2017 ಗ್ರಾಂಡ್ ಫೈನಲ್ ಡೇ ಸೇಲ್ ಅನ್ನು ಆಂಭಿಸಿದ್ದು, ಡಿಸೆಂಬರ್ 15ರ ವರೆಗೆ ನಡೆಯುವ ಸೇಲ್ ನಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಶಾಪಿಂಗ್ ತಾಣಗಳೊಂದಿಗೆ ಸ್ಪರ್ಧೆಗೆ ಇಳಿದಿದೆ.

ಸ್ಮಾರ್ಟ್‌ಪೋನ್‌ ಮೇಲೆ ವರ್ಷದ ಕೊನೆಯಲ್ಲಿ ಕನಸಲ್ಲೂ ನೆನೆಸದ ಆಫರ್ ನೀಡಿದ ಪೇಟಿಎಂ

ಓದಿರಿ: ಡ್ಯುಯಲ್ ಕ್ಯಾಮೆರಾ ಇರುವ ಶಿಯೋಮಿ Mi A1 ಮತ್ತು ಹಾನರ್ 7X: ಕೊಡುವ ಬೆಲೆಗೆ ಯಾವುದು ಬೆಸ್ಟ್..?

ಪೇಟಿಎಂ ಮಾಲ್ 2017 ಗ್ರಾಂಡ್ ಫೈನಲ್ ಡೇ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಸಾಕಷ್ಟು ಆಫರ್ ಗಳನ್ನು ಲಾಂಚ್ ಮಾಡಿದೆ. ಈಗಾಗಲೇ ಸ್ಮಾರ್ಟ್‌ಫೋನ್ ಖರೀದಿಗೆ ಉತ್ತಮ ತಾಣ ಎನ್ನುವ ಪಟ್ಟವನ್ನು ಕ್ರಮೇಣವಾಗಿ ಪಡೆದುಕೊಳ್ಳುತ್ತಿರುವ ಪೇಟಿಎಂ ಮಾಲ್, ಲಿನೊವೊ. ಮೊಟಾರೋಲಾ. ಸ್ಯಾಮ್‌ಸಂಗ್ ಮತ್ತು ಶಿಯೋಮಿ ಫೋನ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಣೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ಗಳ ಹಬ್ಬ:

ಸ್ಮಾರ್ಟ್‌ಫೋನ್‌ಗಳ ಹಬ್ಬ:

ಪೇಟಿಎಂ ಮಾಲ್‌ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S7 ಸ್ಮಾರ್ಟ್‌ಫೋನ್‌ ಅನ್ನು ರೂ. 32,750ಕ್ಕೆ (ಅಸಲಿ ಬೆಲೆ: ರೂ. 48,900) ಮಾರಾಟ ಮಾಡುತ್ತಿದೆ. ಇದಲ್ಲದೇ ವಿವೋ V7+ ಸ್ಮಾರ್ಟ್‌ ಫೋನ್ ಅನ್ನು ರೂ. 21,900ಕ್ಕೆ (ಅಸಲಿ ಬೆಲೆ: ರೂ. 22,900) ಸೇಲಿಗೆ ಇಟ್ಟಿದೆ. ಅಲ್ಲದೇ ಜೊತೆಗೆ ಕ್ಯಾಷ್ ಬ್ಯಾಕ್ ಅನ್ನು ನೀಡಿದೆ.

ಲಿನೊವೋ-ಒಪ್ಪೋ:

ಲಿನೊವೋ-ಒಪ್ಪೋ:

ಲಿನೊವೋ K8 32GB ಫೋನ್ ಅನ್ನು ರೂ.10356ಕ್ಕೆ ಮಾರಾಟ ಮಾಡುತ್ತಿದೆ ಪೇಟಿಎಂ ಮಾಲ್, ಅಲ್ಲದೇ ಇದಕ್ಕೆ ಕ್ಯಾಷ್ ಬ್ಯಾಕ್ ಸಹ ನೀಡುತ್ತಿದೆ. ಅಲ್ಲದೇ ಒಪ್ಪೋ A71 16GB ಸ್ಮಾರ್ಟ್ಫೋನ್ ರೂ. 11,800ಕ್ಕೆ ಮಾರಾಟವಾಗುತ್ತಿದೆ. ಅಲ್ಲದೇ LG Q6+ ಸ್ಮಾರ್ಟ್‌ಫೋನ್ ರೂ.18,899ಕ್ಕೆ ದೊರೆಯುತ್ತಿದೆ.

ಡಿಸ್ಕೌಂಟ್ ಇನ್ನು ಇದೆ:

ಡಿಸ್ಕೌಂಟ್ ಇನ್ನು ಇದೆ:

ಇದಲ್ಲದೇ ಸ್ವೈಪ್ ಕನೆಕ್ಟ್ ಪವರ್ 4G, ಸ್ವೈಪ್ ಎಲೈಟ್ ಪ್ರೊ 32 GB, ಸ್ವೈಪ್ ಎಲೈಟ್ 2 ಪ್ಲಸ್, ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 6, ಮತ್ತು ಇಂಟೆಕ್ಸ್ ಆಕ್ವಾ ಎಸ್ 3 4G ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಿದೆ ಪೇಟಿಎಂ ಮಾಲ್.

ಟ್ಯಾಬ್ಲೆಟ್ ಮೇಲೆ ಆಫರ್:

ಟ್ಯಾಬ್ಲೆಟ್ ಮೇಲೆ ಆಫರ್:

ಇದಲ್ಲದೇ ಪೇಟಿಎಂ ಮಾಲ್ ನಲ್ಲಿ ಟ್ಯಾಬ್ಲೆಟ್ ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ಅಲ್ಲೇ ಆಪಲ್ ಫೋನ್‌ಗಳು ಮತ್ತು ಐಪ್ಯಾಡ್‌ಗಳ ಮೇಲೆಯೂ ಭರ್ಜರಿ ಆಫರ್ ಅನ್ನು ನೀಡಲಾಗಿದೆ. ಇದಲ್ಲದೇ ಕ್ಯಾಷ್ ಬ್ಯಾಕ್ ಕೊಡುಗೆಗಳು ಸಹ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Paytm Mall 2017 Grand Finale Sale Has Discounts, Cashbacks on iPhone X, iPhone 8, Samsung Galaxy S7, and More Offers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot