ಐಫೋನ್‌ನಲ್ಲಿನ್ನು ಕನ್ನಡ ಕಲರವ!..'ಐಒಎಸ್ 11'ನಲ್ಲಿ ಕನ್ನಡಕ್ಕೆ ಸ್ಥಾನ!!

ಕನ್ನಡಿಗರ ಬೇಡಿಕೆಗೆ ಆಪಲ್ ಮಣಿದಿದ್ದು, ಆಪಲ್‌ನಲ್ಲಿನ್ನು ಕನ್ನಡ ಕೀಲಿಮಣೆ ಸದ್ದು ಮಾಡಲಿದೆ.!!

|

ಆಪಲ್ ಕಂಪೆನಿ ತನ್ನ ನೂತನ ಆಪರೇಟಿಂಗ್ ಸಿಸ್ಟಮ್‌ 'ಐಒಎಸ್ 11' ಅನ್ನು ಬಿಡುಗಡೆಗೊಳಿಸಿದ್ದು, ಕನ್ನಡಿಗರ ಬಹುದಿನದ ಬೇಡಿಕೆಯೊಂದು ಈಡೇರಿದೆ.! ಹೌದು, ಐಫೋನ್‌ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಬೇಕೆಂಬ ಕನ್ನಡಿಗರ ಬೇಡಿಕೆಗೆ ಆಪಲ್ ಮಣಿದಿದ್ದು, ಆಪಲ್‌ನಲ್ಲಿನ್ನು ಕನ್ನಡ ಕೀಲಿಮಣೆ ಸದ್ದು ಮಾಡಲಿದೆ.!!

ಇದುವರೆಗೆ ಐಪೋನ್‌ನಲ್ಲಿ ಗೂಗಲ್ ಒದಗಿಸಿದ ಜಿ-ಬೋರ್ಡ್ ಕೀಬೋರ್ಡ್ ಅಳವಡಿಸಿ ಕನ್ನಡ ಟೈಪ್ ಮಾಡುತ್ತಿದ್ದವರೆಲ್ಲರೂ ಇನ್ನು ಐಒಎಸ್ 11 ಆವೃತ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತ್ಯೇಕ ಆಪ್ ಅಗತ್ಯವೇ ಇಲ್ಲದೆ ಟೈಪ್ ಮಾಡಬಹುದಾಗಿದೆ.! ಹಾಗಾಗಿ, ಐಫೋನ್‌ನಲ್ಲಿ ಅಂತರ್‌-ನಿರ್ಮಿತ ಕನ್ನಡ ಕೀಲಿಮಣೆ ಸಿಕ್ಕಿದ್ದರಿಂದ ಎಲ್ಲರೂ ಬಹಳ ಖುಷಿಯಾಗಿದ್ದಾರೆ.!

ಐಫೋನ್‌ನಲ್ಲಿನ್ನು ಕನ್ನಡ ಕಲರವ!..'ಐಒಎಸ್ 11'ನಲ್ಲಿ ಕನ್ನಡಕ್ಕೆ ಸ್ಥಾನ!!

ಫೇಸ್‌ಬುಕ್, ವಾಟ್ಸ್‌ಆಪ್ ಅಥವಾ ಇನ್ನಾವುದೇ ಮಾಧ್ಯಮಗಳಲ್ಲಿ ಇಂಗ್ಲೀಷ್‌ಗಿಂತ ಹೆಚ್ಚು ಕನ್ನಡದಲ್ಲಿಯೇ ಟೈಪ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮಗಿಂತಲೂ ಹೆಚ್ಚಾಗಿ ಅನಿವಾಸಿ ಭಾರತೀಯರಿರು ಕನ್ನಡದಲ್ಲಿಯೇ ಟೈಪ್ ಮಾಡುತ್ತಿದ್ದಾರೆ.!! ಅಂತರ್‌-ನಿರ್ಮಿತ ಕನ್ನಡ ಕೀಲಿಮಣೆ ಅಗತ್ಯತೆ ಹೆಚ್ಚಾಗಿತ್ತು.!!

ಐಫೋನ್‌ನಲ್ಲಿನ್ನು ಕನ್ನಡ ಕಲರವ!..'ಐಒಎಸ್ 11'ನಲ್ಲಿ ಕನ್ನಡಕ್ಕೆ ಸ್ಥಾನ!!

ಐಫೋನ್‌ಳಲ್ಲಿ ಹಿಂದಿ ಕೀಬೋರ್ಡ್ ಮೊದಲೇ ಸೇರಿದ್ದರೆ, ತಮಿಳು, ತೆಲುಗು, ಪಂಜಾಬಿ, ಗುಜರಾತಿ, ಮರಾಠಿ, ಬಂಗಾಳಿ ಹಾಗೂ ಉರ್ದು ನಂತರ ಸೇರ್ಪಡಗೊಂಡಿದ್ದವು. ಈಗ ಹೊಸದಾಗಿ ಕನ್ನಡ ಜತೆಗೆ ಮಲಯಾಳಂ ಎರಡು ಭಾಷೆಗಳ ಕೀಬೋರ್ಡ್ಗಳು ಐಫೋನ್‌ನಲ್ಲಿ ಸ್ಥಾನ ಪಡೆದಿವೆ.!!

All about Nokia 3310 Phone - GIZBOT KANNADA

ಓದಿರಿ: ಜಿಯೋಫೈ ಮೇಲೆ 50% ಡಿಸ್ಕೌಂಟ್ಸ್.!! ಪ್ರಸ್ತುತ ಬೆಲೆ ಎಷ್ಟು?

Best Mobiles in India

English summary
Tech giant Apple has introduced a Kannada keyboard in the latest version of its operating system, iOS11.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X