ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವ ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಕೇವಲ ರೂ.5290ಕ್ಕೆ.!
ಈಗಾಗಲೇ ಕಾರ್ಬನ್ ಹಲವಾರು ಎಂಟ್ರೆ ಲೆವೆಲ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು, ಅದಕ್ಕೆ ಹೊಸ ಸೇರ್ಪಡೆ ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್, ಈ ಹಿಂದೆ ಇದೇ ಮಾದರಿಯಲ್ಲಿ ಕಾರ್ಬನ್ K9 ಸ್ಮಾರ್ಟ್ ಎಂಬ ಫೋನ್ ಅನ್ನು ಕಾರ್ಬನ್ ಲಾಂಚ್ ಮಾಡಿತ್ತು.
ಭಾರತೀಯ ಮೂಲದ ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಇದರಿಂದ ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳಿಗೆ ಈಗಾಗಲೇ ನಡುಕ ಶುರುವಾಗಿದ್ದು, ಕಾರ್ಬನ್ ಕೇವಲ ರೂ. 5,290ಕ್ಕೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇರುವಂತಹ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ.

ಓದಿರಿ: ದಿನಕ್ಕೆ 1GB ಸಾಲುತ್ತಿಲ್ಲವೇ? ಏರ್‌ಟೆಲ್‌ನಿಂದ ದಿನಕ್ಕೇ 4GB ಡೇಟಾ ಆಫರ್.!
ಈಗಾಗಲೇ ಕಾರ್ಬನ್ ಹಲವಾರು ಎಂಟ್ರೆ ಲೆವೆಲ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು, ಅದಕ್ಕೆ ಹೊಸ ಸೇರ್ಪಡೆ ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್, ಈ ಹಿಂದೆ ಇದೇ ಮಾದರಿಯಲ್ಲಿ ಕಾರ್ಬನ್ K9 ಸ್ಮಾರ್ಟ್ ಎಂಬ ಫೋನ್ ಅನ್ನು ಕಾರ್ಬನ್ ಲಾಂಚ್ ಮಾಡಿತ್ತು.

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್:
ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಸ್ಮಾರ್ಟ್‌ಫೋನಿನ ವಿಶೇಷತೆಗಳಲ್ಲಿ ಒಂದು ಎಂದರೆ ಫಿಂಗರ್ ಪ್ರಿಂಟ್ ಸ್ಕ್ಯಾನರ್. ಫೋನಿನ ಹಿಂಭಾಗದ ಮಧ್ಯಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ.

5.2 ಇಂಚಿನ ಡಿಸ್‌ಪ್ಲೇ:
ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಫೋನಿನಲ್ಲಿ 5.2 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಆದರೆ ಇದು HD ಡಿಸ್‌ಪ್ಲೇಯಲ್ಲ, ಬದಲಿಗೆ FWVGA ಗುಣಮಟ್ಟದಾಗಿದೆ. 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ನೀಡಲಾಗಿದೆ.

ಕ್ವಾಡ್ ಕೋರ್ ಪ್ರೋಸೆಸರ್:
ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಸ್ಮಾರ್ಟ್‌ಫೋನಿನಲ್ಲಿ 1.3GHz ವೇಗದ ಕ್ವಾಡ್ ಕೋರ್ ಪ್ರೋಸೆಸರ್, 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇಲ್ಲದೇ ಕಾರ್ಡ್ ಹಾಕಿಕೊಳ್ಳುವ ಮೂಲಕ 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಉತ್ತಮ ಕ್ಯಾಮೆರಾ:
ಈ ಫೋನಿನ ಹಿಂಭಾಗದಲ್ಲಿ 8MP ಕ್ಯಾಮೆರಾದೊಂದಿಗೆ LED ಫ್ಲಾಷ್ ಹಾಗೂ ಮುಂಭಾಗದಲ್ಲಿ 5MP ಕ್ಯಾಮೆರಾ ಮತ್ತು LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ. 4G VoLTE ಸಪೋರ್ಟ್ ಮಾಡಲಿದೆ.

ಆಂಡ್ರಾಯ್ಡ್ ನ್ಯಾಗಾ:
ಕಾರ್ಬನ್ K9 ಸ್ಮಾರ್ಟ್‌ಗ್ರಾಂಡ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಓರಿಯೋ ಆಪ್ಡೇಟ್ ಸಹ ಪಡೆಯಲಿದೆ.


Click it and Unblock the Notifications