ದಿನಕ್ಕೆ 1GB ಸಾಲುತ್ತಿಲ್ಲವೇ? ಏರ್‌ಟೆಲ್‌ನಿಂದ ದಿನಕ್ಕೇ 4GB ಡೇಟಾ ಆಫರ್.!
ಗ್ರಾಹಕರಿಗೆ ಪ್ರತಿ ನಿತ್ಯ 4GB ಡೇಟಾವನ್ನು ನೀಡುವ ಪ್ಲಾನ್ ವೊಂದನ್ನು ಏರ್‌ಟೆಲ್ ಘೋಷಣೆ ಮಾಡಿದೆ, ಈ ಮೂಲಕ ಹೆಚ್ಚಿನ ಡೇಟಾ ಅಗತ್ಯವಿರುವ ಮಂದಿಯನ್ನು ಸೆಳೆಯಲು ಮುಂದಾಗಿದೆ.
ಏರ್‌ಟೆಲ್-ಜಿಯೋದೊಂದಿಗೆ ಪ್ರತಿ ವಿಚಾರದಲ್ಲಿಯೂ ಸ್ಪರ್ಧೆಗೆ ಇಳಿದಿರುವ ವಿಚಾರ ತಿಳಿದಿರುವಂತದ್ದು, ಜಿಯೋ ಮಾದರಿಯಲ್ಲಿಯೇ ತನ್ನ ಬಳಕೆದಾರರಿಗೆ ಹೊಸ ಹೊಸ ಆಫರ್ ಗಳನ್ನು ನೀಡುವ ಏರ್‌ಟೆಲ್ ಈ ಬಾರಿ ಜಿಯೋಗಿಂತಲೂ ಭರ್ಜರಿ ಡೇಟಾ ಪ್ಲಾನ್ ನೀಡಲು ಮುಂದಾಗಿದೆ.

ಗ್ರಾಹಕರಿಗೆ ಪ್ರತಿ ನಿತ್ಯ 4GB ಡೇಟಾವನ್ನು ನೀಡುವ ಪ್ಲಾನ್ ವೊಂದನ್ನು ಏರ್‌ಟೆಲ್ ಘೋಷಣೆ ಮಾಡಿದೆ, ಈ ಮೂಲಕ ಹೆಚ್ಚಿನ ಡೇಟಾ ಅಗತ್ಯವಿರುವ ಮಂದಿಯನ್ನು ಸೆಳೆಯಲು ಮುಂದಾಗಿದೆ. ಕಾರಣ ದಿನದಿಂದ ದಿನಕ್ಕೆ ಜನರ ಡೇಟಾ ಹಸಿವು ಹೆಚ್ಚಾಗುತ್ತಿರುವುದಕ್ಕೆ ಈ ಆಫರ್ ಲಾಂಚ್ ಮಾಡಲಾಗಿದೆ ಎನ್ನಲಾಗಿದೆ.

ಪ್ರತಿ ನಿತ್ಯ 4GB ಡೇಟಾ ಪ್ಲಾನ್:
ಈಗಾಗಲೇ ಜಿಯೋ ತನ್ನ ಗ್ರಾಹಕರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಡೇಟಾ ಪ್ಲಾನ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಹಾಗಾಗಿ ಜಿಯೋಗೆ ಸೆಡ್ಡು ಹೊಡೆಯುವ ಸಲುವಾಗಿ ಮತ್ತು ಜನರಿಗೆ ಹೆಚ್ಚಿನ ಡೇಟಾ ಅವಶ್ಯಕತೆ ಇರುವದನ್ನು ಅರಿತ ಏರ್‌ಟೆಲ್ ಪ್ರತಿ ನಿತ್ಯ 4G ವೇಗದ 4GB ಡೇಟಾವನ್ನು ನೀಡುವ ಪ್ಲಾನ್ ಘೋಷಣೆ ಮಾಡಿದೆ.

ಇದು ಜಿಯೋಗಿಂತಲೂ ಉತ್ತಮ ಪ್ಲಾನ್:
ಏರ್‌ಟೆಲ್ ಈ ಬಾರಿ ಜಿಯೋಗಿಂತಲೂ ಉತ್ತಮ ಪ್ಲಾನ್ ಘೋಷಣೆ ಮಾಡಿದೆ. ಜಿಯೋ ರೂ.999ಕ್ಕೆ 90 ದಿನಗಳ ವ್ಯಾಲಿಡಿಟಿಗೆ ಕೇವಲ 90 GB ಡೇಟಾವನ್ನು(ಪ್ರತಿ ನಿತ್ಯ 1GB) ನೀಡುತ್ತಿದೆ. ಆದರೆ ಏರ್‌ಟೆಲ್ ರೂ.999ಕ್ಕೆ 28 ದಿನಗಳ ವ್ಯಾಲಿಡಿಟಿಗೆ ಪ್ರತಿ ನಿತ್ಯ 4G ವೇಗದ 4GB ಡೇಟಾವನ್ನು ನೀಡುತ್ತಿದೆ.

ಏರ್‌ಟೆಲ್‌ನಲ್ಲಿ ಇನ್ನು ಇದೇ!
ಈ ಪ್ಲಾನ್ ಹೊರತುಪಡಿಸಿದರು ಏರ್‌ಟೆಲ್‌ನಲ್ಲಿ ಇನ್ನು ಹಲವು ಆಫರ್ ಗಳು ಲಭ್ಯವಿದೆ. ರೂ. 349, ರೂ.399, ರೂ.499 ಮತ್ತು ರೂ.799 ಪ್ಲಾನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಸಾರವಾಗಿ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








