ಕರ್ನಾಟಕದ ಮತಗಟ್ಟೆಗಳಲ್ಲಿ ಮೊಬೈಲ್ ಬ್ಯಾನ್!..ನೀವು ತಿಳಿಯಬೇಕಾದ ವಿಷಯಗಳು!!

|

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಲೋಕಸಭೆ ಚುನಾವಣೆಗೆ ಕರ್ನಾಟಕ ರಾಜ್ಯ ಅಣಿಯಾಗುತ್ತಿರುವ ವೇಳೆಗೆ ರಾಜ್ಯದ ಚುನಾವಣಾ ಆಯೋಗದ ಅಧಿಕಾರಿಗಳು ಮಹತ್ವದ ಸೂಚನೆಯೊಂದನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿ ಏ.18 ಮತ್ತು ಏಪ್ರಿಲ್ 23 ರಂದು ನಡೆಯಲಿರುವ ಮತದಾನದ ವೇಳೆ ಮತದಾರರು ಮತಗಟ್ಟೆಗಳಿಗೆ ಮೊಬೈಲ್ ತರದಂತೆ ಚುನಾವಣಾ ಆಯೋಗ ತಿಳಿಸಿದೆ.

ಹೌದು, ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮಾಡಲು ಕೆಲವೇ ದಿನಗಳು ಇರುವಾಗಲೇ ಮತದಾರರು ಮತಗಟ್ಟೆಗಳಿಗೆ ಮೊಬೈಲ್ ತರದಂತೆ ನಿರ್ಬಂಧ ಹೇರಲಾಗಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್‌ ಅವರು 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಕರ್ನಾಟಕದ ಮತಗಟ್ಟೆಗಳಲ್ಲಿ ಮೊಬೈಲ್ ಬ್ಯಾನ್!..ನೀವು ತಿಳಿಯಬೇಕಾದ ವಿಷಯಗಳು!!

ಚುನಾವಣಾ ಕರ್ತವ್ಯದ ಸಿಬ್ಬಂದಿ ಹೊರತುಪಡಿಸಿ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಈ ಕುರಿತು ಮಾಹಿತಿ ನೀಡಿರುವ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ಅವರು, ಕೇಂದ್ರ ಚುನಾವಣಾ ಆಯೋಗದ ಸೂಚನೆ ಇರುವ ಹಿನ್ನೆಲೆಯಲ್ಲಿ ಆದೇಶ ಜಾರಿಗೆ ತರಲಾಗುತ್ತಿದೆ ಎಂದು ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ಅವರುಯ ಮಾಹಿತಿ ನಿಡಿರುವಂತೆ, ಮಾಹಿತಿ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕಾಗಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆಯಿಂದ ಇರಲಿದೆ ಎಂದು ಹೇಳಿದ್ದಾರೆ. ಆದರೆ, ಒಂದು ವೇಳೆ ಮೊಬೈಲ್ ಅನ್ನು ತೆಗೆದುಕೊಂಡು ಹೋದರೆ ಅದರ ಪರಿಣಾಮ ಏನು ಎಂಬುದನ್ನು ತಿಳಿಸಿಲ್ಲ.

ಕರ್ನಾಟಕದ ಮತಗಟ್ಟೆಗಳಲ್ಲಿ ಮೊಬೈಲ್ ಬ್ಯಾನ್!..ನೀವು ತಿಳಿಯಬೇಕಾದ ವಿಷಯಗಳು!!

ಮತ್ತೊಂದು ಮುಖ್ಯ ವಿಷಯವೆಂದರೆ, ದೇಶದಲ್ಲಿ ಎಲ್ಲಿಯೂ ಕೂಡ ಮೊಬೈಲ್ ಅನ್ನು ಮತದಾರರು ಮತಗಟ್ಟೆಗಳಿಗೆ ಮೊಬೈಲ್ ತರದಂತೆ ಚುನಾವಣಾ ಆಯೋಗ ತಿಳಿಸಿಲ್ಲ. ಇನ್ನು ದೇಶದಲ್ಲಿ ಇದಕ್ಕೆ ನಿರ್ದಿಷ್ಟವಾಗಿ ನಿರ್ಬಂಧವನ್ನು ಸಹ ಹೇರಲಾಗಿಲ್ಲ. ಆದರೆ, ರಾಜ್ಯದಲ್ಲಿ ಇಂತಹದೊಂದು ಮಹತ್ವದ ನಿರ್ಣಯವನ್ನು ಚುನಾವಣಾ ಅಧಿಕಾರಿಗಳು ತೆಗೆದುಕೊಮಡಿದ್ದಾರೆ. ಒಂದು ರೀತಿಯಲ್ಲಿ ಶಾಂತಿಯುತ ಮತದಾನಕ್ಕೆ ಇದು ಉತ್ತಮ ಕ್ರಮ ಕೂಡ ಆಗಿದೆ ಎನ್ನಬಹುದು.

ಓದಿರಿ: ವಿಶ್ವದ ಮೊಟ್ಟ ಮೊದಲ ಈ ಫ್ಲೆಕ್ಸಿಬಲ್ ಸ್ಮಾರ್ಟ್‌ವಾಚ್‌ಗೆ ಮನಸೋತ ಜಗತ್ತು!

Best Mobiles in India

English summary
lectorate in Karnataka will not be allowed to carry smart-phones or mobile phones inside the polling booth while going to vote to prevent them from taking selfies or recording videos, an official said on Sunday. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X