ವಿಶ್ವದ ಮೊಟ್ಟ ಮೊದಲ ಈ ಫ್ಲೆಕ್ಸಿಬಲ್ ಸ್ಮಾರ್ಟ್‌ವಾಚ್‌ಗೆ ಮನಸೋತ ಜಗತ್ತು!

|

ಈ ವರ್ಷದ ವರ್ಲ್ಡ್​​ ಮೊಬೈಲ್​ ಕಾಂಗ್ರೆಸ್‌ನಲ್ಲಿ ಗಮನಸೆಳೆದಿದ್ದ ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಕಾಣಿಸಿಕೊಂಡಿದ್ದ ಚೀನಾದ ನುಬಿಯಾ ಸಂಸ್ಥೆಯ ವಿಶ್ವದ ಮೊಟ್ಟ ಮೊದಲ ಫ್ಲೆಕ್ಸಿಬಲ್ ಸ್ಮಾರ್ಟ್​ಫೋನ್ ವಾಚ್ ಮಾರುಕಟ್ಟೆಗೆ ಕಾಲಿಟ್ಟಿದೆ. ವಿಶ್ವದ ಅತಿರಥ ತಂತ್ರಜ್ಞಾನ ಕಂಪೆನಿಗಳ ನಡುವೆ ಗಮನ ಸೆಳೆಯುವಲ್ಲಿ ಚೀನಾದ ನುಬಿಯಾ ಸಂಸ್ಥೆ, ಯುರೋಪ್​ ಹಾಗೂ ಚೀನಾ ಮಾರುಕಟ್ಟೆಯಲ್ಲಿ ನುಬಿಯಾ 'ಅಲ್ಫಾ' ಎಂಬ ಹೆಸರಿನ ಈ ಸ್ಮಾರ್ಟ್​ವಾಚ್ ಅನ್ನು ಮಾರಾಟಕ್ಕೆ ತಂದಿದೆ.

ಹೌದು, ನುಬಿಯಾ 'ಅಲ್ಫಾ' ವಿಶ್ವದ ಮೊದಲ ಫ್ಲೆಕ್ಸಿಬಲ್ ಸ್ಮಾರ್ಟ್​ಫೋನ್ ವಾಚ್ (ಸ್ಮಾರ್ಟ್‌ವಾಚ್) ಆಗಿ ಮಾರುಕಟ್ಟೆಗೆ ಕಾಲಿಟ್ಟಿದ್ದು, ಈ ಸ್ಮಾರ್ಟ್​ಫೋನ್ ವಾಚ್ ಅನ್ನು 10 ಸಾವಿರ ಬಾರಿ ಬೆಂಡ್ ಮಾಡಿ ಪರೀಕ್ಷಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. ಇದಲ್ಲದೆ ಅಲ್ಫಾ ವಾಚ್​ ಜಲ ನಿರೋಧಕವಾಗಿದ್ದು, ಸಾಮಾನ್ಯ ಸ್ಟ್ಯಾಂಡರ್ಡ್​ ಸ್ಮಾರ್ಟ್​ವಾಚ್​ಗಳಿಗಿಂತ ಶೇ.230 ರಷ್ಟು ರಿಯಲ್ ಎಸ್ಟೇಟ್​ ಸ್ಕ್ರೀನ್ ಕ್ವಾಲಿಟಿ ಇದಕ್ಕೆ ನೀಡಲಾಗಿದೆ ಎಂದು ನುಬಿಯಾ ಕಂಪೆನಿ ಹೇಳಿಕೊಂಡಿರುವುದು ವಿಶೇಷವಾಗಿದೆ.

ವಿಶ್ವದ ಮೊಟ್ಟ ಮೊದಲ ಈ ಫ್ಲೆಕ್ಸಿಬಲ್ ಸ್ಮಾರ್ಟ್‌ವಾಚ್‌ಗೆ ಮನಸೋತ ಜಗತ್ತು!

ಸ್ಮಾರ್ಟ್‌ಫೋನ್ ತಯಾರಿಕೆಯಲ್ಲೂ ಕೂಡ ಮುಂದಿರುವ ನುಬಿಯಾ ಕಂಪೆನಿ ಭಾರತದಲ್ಲಿ ಹೇಳಿಕೊಳ್ಳುವಂತಹ ಹೆಸರನ್ನೇನು ಮಾಡಲಿಲ್ಲ. ಆದರೆ, ಈ ಫ್ಲೆಕ್ಸಿಬಲ್ ಸ್ಮಾರ್ಟ್​ಫೋನ್ ವಾಚ್ ಮೂಲಕ ಭಾರತ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಸದ್ದು ಮಾಡಲು ತಯಾರಾಗಿದೆ. ಹಾಗಾದರೆ, ವಿಶ್ವದ ಮೊದಲ ಫ್ಲೆಕ್ಸಿಬಲ್ ಸ್ಮಾರ್ಟ್​ಫೋನ್ ವಾಚ್ ಫೀಚರ್ಸ್ ಯಾವುವು?, ಈ ಸ್ಮಾರ್ಟ್‌ಫೋನ್ ವಾಚ್‌ನ ವಿಶೇಷತೆಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಹೇಗಿದೆ ನುಬಿಯಾ ಅಲ್ಫಾ ಸ್ಮಾರ್ಟ್‌ಫೋನ್ ​ವಾಚ್

ಹೇಗಿದೆ ನುಬಿಯಾ ಅಲ್ಫಾ ಸ್ಮಾರ್ಟ್‌ಫೋನ್ ​ವಾಚ್

ನುಬಿಯಾ ಅಲ್ಫಾ ಸ್ಮಾರ್ಟ್​ವಾಚ್​ನ ಮತ್ತೊಂದು ವಿಶೇಷತೆ ಎಂದರೆ ಇದರ ಸ್ಕ್ರೀನ್​ ಅನ್ನು ಎಡ-ಬಲ ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡುವ ಮೂಲಕ ನಿಯಂತ್ರಿಸಿಕೊಳ್ಳಬಹುದು. ಹಾಗೆಯೇ ಟೈಪಿಂಗ್​ಗಾಗಿ T9 ಆಲ್ಫಾನ್ಯೂಮರಿಕ್ ಡಯಲರ್ ಕೂಡ ಇದರಲ್ಲಿ ನೀಡಲಾಗಿದೆ. ಇದರ ವಿನ್ಯಾಸ ಮುಂದಿನ ದಿನಗಳಲ್ಲಿ ಮೊಬೈಲ್​ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿಸಲಿದೆ ಎನ್ನಲಾಗುತ್ತಿದೆ.

ನುಬಿಯಾ ಅಲ್ಫಾ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ಹೇಗಿದೆ?

ನುಬಿಯಾ ಅಲ್ಫಾ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ಹೇಗಿದೆ?

ನುಬಿಯಾ ಅಲ್ಫಾ ​ವಾಚ್‌ನಲ್ಲಿ 4 ಇಂಚಿನ ಪ್ಲೆಕ್ಸಿಬಲ್ OLED ಡಿಸ್​ಪ್ಲೇಯನ್ನು ಹೊಂದಿದ್ದು, ಇದರಲ್ಲಿ 960 x 192 ಪಿಕ್ಸೆಲ್​ ರೆಸಲ್ಯೂಷನ್ ನೀಡಲಾಗಿದೆ. ಸ್ಕ್ರೀನ್​ ಅನ್ನು ಎಡ-ಬಲ ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡುವ ಮೂಲಕ ನಿಯಂತ್ರಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಕ್ಯಾಮೆರಾಗಳನ್ನು ಈ ವಾಚ್​ ಹೊಂದಿದ್ದು, 6MP ಕ್ಯಾಮೆರಾ 82 ಡಿಗ್ರಿ ವೈಡ್ ಆಂಗಲ್ ಸೆನ್ಸರ್​ನಲ್ಲಿ ಬಳಸಬಹುದಾಗಿದೆ.

ನುಬಿಯಾ ಅಲ್ಫಾ ​ವಾಚ್ ಪ್ರೊಸೆಸರ್ ಮತ್ತು RAM

ನುಬಿಯಾ ಅಲ್ಫಾ ​ವಾಚ್ ಪ್ರೊಸೆಸರ್ ಮತ್ತು RAM

ನುಬಿಯಾ ಅಲ್ಫಾ ​ವಾಚ್ ಅಡ್ರಿನೋ 304 ಜಿಪಿಯುನ 28nm ಸ್ನ್ಯಾಪ್​ಡ್ರಾಗನ್ ವೇರ್ 2100 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್​ವಾಚ್​ನಲ್ಲಿ 1GB RAM ಮತ್ತು 8GB ಆಂತರಿಕ ಸಂಗ್ರಹವಿದೆ. ಆಂಡ್ರಾಯ್ಡ್​ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿರುವ ಈ ವಾಚ್, ಇತ್ತೀಚಿನ ಆಂಡ್ರಾಯ್ಡ್ ಅಪ್‌ಡೇಟ್ ಅನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ ನುಬಿಯಾ ಅಲ್ಫಾ?

ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ ನುಬಿಯಾ ಅಲ್ಫಾ?

ಅಲ್ಫಾ ವಾಚ್​ ಜಲ ನಿರೋಧಕವಾಗಿದ್ದು, ಸಾಮಾನ್ಯ ಸ್ಟ್ಯಾಂಡರ್ಡ್​ ಸ್ಮಾರ್ಟ್​ವಾಚ್​ಗಳಿಗಿಂತ ಶೇ.230 ರಷ್ಟು ರಿಯಲ್ ಎಸ್ಟೇಟ್​ ಸ್ಕ್ರೀನ್ ಕ್ವಾಲಿಟಿ ಹೊಂದಿದೆ. ಇದರಲ್ಲಿ 5000 mAh ಬ್ಯಾಟರಿಯನ್ನು ನೀಡಲಾಗಿದ್ದು, ಒಂದು ಬಾರಿ ಚಾರ್ಜ್​ ಮಾಡಿದ್ರೆ 48 ಗಂಟೆಗಳವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಕಂಪೆನಿಯೇ ಹೇಳಿ ಕೊಂಡಿರುವುದು ವಿಶೇಷತೆ ಎಂದು ಹೇಳಬಹುದು.

ನುಬಿಯಾ ಅಲ್ಫಾ ಸ್ಮಾರ್ಟ್‌ವಾಚ್ ಬೆಲೆ ಎಷ್ಟು?

ನುಬಿಯಾ ಅಲ್ಫಾ ಸ್ಮಾರ್ಟ್‌ವಾಚ್ ಬೆಲೆ ಎಷ್ಟು?

ಚೀನಾದಲ್ಲಿ ನುಬಿಯಾ ಅಲ್ಫಾ ಸ್ಮಾರ್ಟ್‌ವಾಚ್ ಎರಡು ಮಾಡೆಲ್​ಗಳಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ ಕ್ರಮವಾಗಿ 3,499 ಹಾಗೂ 4,499 ಸಿಎನ್​ವೈಗಳಾಗಿವೆ. ಅಂದರೆ, ಭಾರತದಲ್ಲಿ ಈ ಫ್ಲೆಕ್ಸಿಬಲ್ ಸ್ಮಾರ್ಟ್​ವಾಚ್ ಬೆಲೆ 35 ಸಾವಿರದಿಂದ 45 ಸಾವಿರದೊಳಗೆ ಇರಲಿದೆ ಎಂದು ಹೇಳಬಹುದು. ಆದರೆ, ಇದು ಭಾರತದಲ್ಲಿ ಖರೀದಿಗೆ ಲಭ್ಯವಾಗುವ ಯಾವುದೇ ಮಾಹಿತಿ ಲಭ್ಯವಿಲ್ಲ.

Best Mobiles in India

English summary
Nubia Alpha was showcased at IFA 2018 and MWC 2019, but it is being ... Nubia Alpha smartwatch with a bendable panel launched, pricing. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X