Karnataka Budget 2023 PDF ; ಕರ್ನಾಟಕ ಬಜೆಟ್ ಪ್ರತಿ ಡೌನ್‌ಲೋಡ್ ಮಾಡಲು ಈ ಹಂತ ಅನುಸರಿಸಿ!
ಇಂದು ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ಇಸ್ರೋ ಸಹಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಯನ್ನು ಅಳವಡಿಸಲು 50 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆಯಡಿ 2023-24 ನೇ ಸಾಲಿನಿಂದ 10 ಸಾವಿರ ರೂಪಾಯಿ ಹೆಚ್ಚುವರಿ ಸಹಾಯ ಸಹ ನೀಡುವುದಾಗಿಯೂ ಉಲ್ಲೇಖ ಮಾಡಿದ್ದಾರೆ.

ಹೌದು, ರಾಜ್ಯದ ಸಾಮಾನ್ಯ ಜನರು ಹಾಗೂ ಬಜೆಟ್ ಬಗ್ಗೆ ಆಸಕ್ತಿ ಇರುವವರು ಮಾಧ್ಯಮಗಳು ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಕೆಲವು ಮಾಹಿತಿ ಪಡೆದಿದ್ದಾರೆ. ಆದರೆ, ಇದರಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹಲವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಬಜೆಟ್ ಪ್ರತಿಯನ್ನು ನೀವೇ ಓದಿಕೊಂಡರೆ ಹೇಗೆ. ಇದಕ್ಕಾಗಿಯೇ ಕನ್ನಡದಲ್ಲಿ ಲಭ್ಯ ಇರುವ ಬಜೆಟ್ ಪ್ರತಿಯನ್ನು ಯಾವ ರೀತಿ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್‌ನಲ್ಲಿ ಓದಿಕೊಳ್ಳಬಹುದು ಎಂಬುದನ್ನು ಹಂತ ಹಂತವಾಗಿ ವಿವರಿಸಿದ್ದೇವೆ ಓದಿರಿ.
ಕನ್ನಡದಲ್ಲಿ ಬಜೆಟ್ ಮಂಡನೆ ಪ್ರತಿ ಡೌನ್ ಮಾಡಲು ಈ ಹಂತ ಅನುಸರಿಸಿ
ಹಂತ 1
ಮೊದಲು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್‌ಡಿವೈಸ್‌ನಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು https://www.karnataka.gov.in/ ಎಂದು ಸರ್ಚ್ ಮಾಡಿ. ಇದಾದ ನಂತರ ಮುಖ್ಯ ಪುಟದಲ್ಲಿ 'ಸರ್ಕಾರ' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದರೆ 'ಇಲಾಖೆಗಳು' ಎಂಬ ವಿಭಾಗ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 2
'ಇಲಾಖೆಗಳು' ವಿಭಾಗದ ಮೇಲೆ ಕ್ಲಿಕ್ ಮಾಡಿದರೆ ಸರ್ಕಾರದ ಎಲ್ಲಾ ಇಲಾಖೆ ಹಾಗೂ ನಿಗಮಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ಹದಿಮೂರನೇ ಆಯ್ಕೆಯಾದ 'ಹಣಕಾಸು ಇಲಾಖೆ' ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದನ್ನು ಕ್ಲಿಕ್ ಮಾಡಿದ ನಂತರ ಸಚಿವಾಲಯ ಹಾಗೂ ಮಂಡಳಿ, ನಿಗಮ ಗಳ ಪಟ್ಟಿ ತೆರೆದುಕೊಳ್ಳುತ್ತದೆ. ಈ ವಿಭಾಗದಲ್ಲಿ ಮೊದಲನೇ ಆಯ್ಕೆಯಾದ 'ಆರ್ಥಿಕ ಇಲಾಖೆ' ಮೇಲೆ ಕ್ಲಿಕ್ ಮಾಡಿ.
ಹಂತ 3
'ಆರ್ಥಿಕ ಇಲಾಖೆ' ಮೇಲೆ ಕ್ಲಿಕ್ ಮಾಡಿದ ಬಳಿಕ ಇದಕ್ಕಾಗಿ ರಚಿಸಲಾದ ಪ್ರತ್ಯೇಕ ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಇನ್ನು ಈ ಮೇಲೆ ತಿಳಿಸಿದ ಹಂತದ ಹೊರತಾಗಿಯೂ ನೀವು ನೇರವಾಗಿ ಆರ್ಥಿಕ ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಲು https://finance.karnataka.gov.in/ ಎಂದು ಸರ್ಚ್ ಮಾಡಿದರೆ ಸಾಕು.
ಹಂತ 4
ಆರ್ಥಿಕ ಇಲಾಖೆಯ ಮೇನ್ ಪೇಜ್ ತೆರೆದಾಕ್ಷಣ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ನಿಮಗೆ ಅಗತ್ಯವಾಗಿರುವ ಬಜೆಟ್ ಪ್ರತಿ ಡೌನ್‌ಲೋಡ್‌ಗಾಗಿ 'ಅಯವ್ಯಯ ದಾಖಲೆಗಳು' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಗಮನಿಸಿ ಹಾಗೆಯೇ ಇದರ ಕೆಳಗೆ ಯಾವೆಲ್ಲಾ ಸಾಲಿನ ದಾಖಲೆ ನಿಮಗೆ ಅಗತ್ಯವೋ ಆ ಇಸವಿಯನ್ನು ಸಹ ಅಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ 2023-24 ನೇ ಸಾಲಿನ ಬಜೆಟ್ ಪ್ರತಿ ಡೌನ್‌ಲೋಡ್‌ಗಾಗಿ ಮೊದಲನೇ ಆಯ್ಕೆ ಮೇಲೆಯೇ ಕ್ಲಿಕ್ ಮಾಡಿ.

ಹಂತ 5
ನಂತರದಲ್ಲಿ ನಿಮಗೆ 'ಅಯವ್ಯಯ ಸಂಬಂಧಿತ ಆದೇಶಗಳು' ಹಾಗೂ 'ಅಯವ್ಯಯದ ಸಂಪುಟಗಳು 2023-24' ಎಂಬ ಎರಡು ಆಯ್ಕೆ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ನೀವು 'ಅಯವ್ಯಯದ ಸಂಪುಟಗಳು 2023-24' ಎಂಬುದರ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದಲ್ಲಿ ಅಂದರೆ ಹೊಸ ಪುಟದ ಬಲ ಭಾಗದ ಮೂಲೆಯಲ್ಲಿ ಪಿಡಿಎಫ್ ಫೈಲ್ ಅನ್ನು ಸೇರಿಸಲಾಗಿದ್ದು, ಇದರಲ್ಲಿ ವೀಕ್ಷಿಸಿ ಅಥವಾ ಡೌನ್‌ಲೋಡ್ ಮಾಡಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತವೆ. ಈ ಮೂಲಕ ನೀವು ನೇರವಾಗಿ ವೆಬ್ ಪುಟದಲ್ಲೇ ಓದಬಹುದು ಅಥವಾ ಡೌನ್‌ಲೋಡ್ ಮಾಡಿಕೊಂಡು ಬೇಕೆಂದಾಗ ನಿಮ್ಮ ಮೊಬೈಲ್ ಅಥವಾ ಸ್ಮಾರ್ಟ್ ಡಿವೈಸ್ ಮೂಲಕ ಓದಬಹುದಾಗಿದೆ.


Click it and Unblock the Notifications








