Home
ಸುದ್ದಿಜಾಲ

ಕರ್ನಾಟಕ ಚುನಾವಣೆಗೆ ಕ್ಷಣಗಣನೆ; ಮತದಾರರ ಗುರುತಿನ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ ಚೆಕ್‌ ಮಾಡಿಕೊಳ್ಳಿ!

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka election 2023) ಇನ್ನೆರಡು ದಿನ ಬಾಕಿ ಇದ್ದು, ಈ ಮೊದಲೇ ಪ್ರಮುಖ ರಾಜಕೀಯ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಎಲ್ಲಾ ರೀತಿಯ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ನಡುವೆ ನಿಮ್ಮ ಅಭ್ಯರ್ಥಿಗೆ ಮತ ಹಾಕಲು ಮತದಾರರ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಪರಿಶೀಲಿಸುವುದು ಅಗತ್ಯವಾಗಿದೆ.

ಹೌದು, ಮತದಾನಕ್ಕೂ ಮುನ್ನ ಮತದಾರರು ತಾವು ಎಲ್ಲಿ ಮತ ಚಲಾವಣೆ ಮಾಡಬೇಕು?, ಮತದಾರರ ಲಿಸ್ಟ್‌ನಲ್ಲಿ ತಮ್ಮ ಹೆಸರಿದೆಯೇ, ಅಥವಾ ವಿಳಾಸ ಹಾಗೂ ಹೆಸರಿನಲ್ಲಿ ಏನಾದರೂ ತಪ್ಪುಗಳಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕಿದೆ. ಈ ಮೂಲಕ ಒಂದು ಮತವೂ ವ್ಯರ್ಥವಾಗದಂತೆ ಮತದಾನ ಮಾಡಲು ಸಾಧ್ಯವಾಗುತ್ತದೆ. ಹಾಗಿದ್ರೆ, ನಿಮ್ಮ ಮೊಬೈಲ್‌ನಲ್ಲಿಯೇ ಮತದಾರರ ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಪತ್ತೆ ಮಾಡುವುದು ಹೇಗೆ?, ಮತದಾನ ಮಾಡಲು ಯಾವೆಲ್ಲಾ ದಾಖಲಾತಿ ಒಯ್ಯಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಮತದಾರರ ಗುರುತಿನ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ ಚೆಕ್‌ ಮಾಡಿಕೊಳ್ಳಿ!

ಕರ್ನಾಟಕ ವಿಧಾನಸಭಾ ಚುನಾವಣೆ 2023ಗೆ ಇನ್ನೆರಡು ದಿನ ಬಾಕಿ ಇದೆ. ಅಂದರೆ, ಮೇ 10 ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ನಡುವೆ ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಇನ್ನೂ ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಚುನಾವಣೆಗೆ ಮುಂಚಿತವಾಗಿ ನೀವು ನಿಮ್ಮ ಚಲಾಯಿಸಲು ಅರ್ಹರೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಮತದಾರರ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಬೇಕಿದೆ .

ಚುನಾವಣೆ ಹಿನ್ನೆಲೆ ಭಾರತೀಯ ಚುನಾವಣಾ ಆಯೋಗವು ಎಲ್ಲಾ ಮತದಾರರಿಗೆ ಮತದಾರರ ಫೋಟೋ ಗುರುತಿನ ಚೀಟಿ ಅಥವಾ EPIC ಸಂಖ್ಯೆಯನ್ನು ನೀಡಿದ್ದು, ಇದು ವ್ಯಕ್ತಿಗೆ ನೀಡಲಾದ ಮತದಾರರ ಗುರುತಿನ ಚೀಟಿಯಲ್ಲಿ ಉಲ್ಲೇಖ ಆಗಿರುತ್ತದೆ. ಈ ಮೂಲಕ ತಮ್ಮ ವಿಶಿಷ್ಟ EPIC ಸಂಖ್ಯೆ ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಈ ಸರಳ ಮಾರ್ಗ ಅನುಸರಿಸಿ.

ಹಂತ 1 : ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ ಮೂಲಕ ECI ಯ ವೆಬ್‌ಸೈಟ್‌ಗೆ ಹೋಗಿ ಇದಕ್ಕಾಗಿ ನೀವು electoralsearch.in ಎಂದು ಟೈಪ್‌ ಮಾಡಬೇಕಾಗುತ್ತದೆ. ನಂತರ ನಿಮಗೆ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಒಂದು ವಿವರದ ಮೂಲಕ ಹುಡುಕಿ ಅಥವಾ EPIC ಸಂಖ್ಯೆಯ ಮೂಲಕ ಹುಡುಕಿ ಎಂಬ ಆಯ್ಕೆ. ಇದರಲ್ಲಿ ನಿಮಗೆ ಯಾವುದು ಉಚಿತವೋ ಅದರ ಮೇಲೆ ಟ್ಯಾಪ್ ಮಾಡಿ.

ಮತದಾರರ ಗುರುತಿನ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ ಚೆಕ್‌ ಮಾಡಿಕೊಳ್ಳಿ!

ಹಂತ 2 : ನೀವು EPIC ಸಂಖ್ಯೆಯ ಮೂಲಕ ಹುಡುಕಿ ಎಂಬ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿದರೆ ಮೊದಲು EPIC ಸಂಖ್ಯೆಯನ್ನು ನಮೂದಿಸಿ ಬಳಿಕ ನೀವು ನೋಂದಾಯಿಸಿರುವ ರಾಜ್ಯವನ್ನು ಆಯ್ಕೆಮಾಡಿ. ಇದಾದ ನಂತರದಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಿದೆ. ಬಳಿಕ ಅದರಲ್ಲಿ ಕಾಣಿಸಿಕೊಳ್ಳುವ ಸರ್ಚ್‌ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ಇಷ್ಟು ಮಾಡಿದರೆ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ನಿಮ್ಮ ವಿವರಗಳು ಮತ್ತು ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ.

ಇನ್ನು ನಿಮಗೆ ನಿಮ್ಮ EPIC ಸಂಖ್ಯೆ ತಿಳಿದಿಲ್ಲ ಅಥವಾ ವೋಟರ್‌ ಐಡಿ ಕಳೆದುಹೋಗಿದೆ ಎಂದಾದರೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಧಾನಸಭಾ ಕ್ಷೇತ್ರದಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡುವ ಮೂಲಕವೂ ಸುಲಭವಾಗಿ ನಿಮ್ಮ ಹೆಸರು ಈ ಲಿಸ್ಟ್‌ನಲ್ಲಿ ಇದೆಯೇ ಎಂದು ಪರಿಶೀಲನೆ ಮಾಡಬಹುದು. ಅದರಲ್ಲಿ ನಿಮಗೆ EPIC ಸಂಖ್ಯೆ ಮತ್ತು ಮತಗಟ್ಟೆ ವಿಳಾಸ ಕಾಣಿಸಿಕೊಳ್ಳುತ್ತದೆ.

ಮತದಾರರ ಗುರುತಿನ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ ಚೆಕ್‌ ಮಾಡಿಕೊಳ್ಳಿ!

ಮತದಾನದ ಚೀಟಿ ಇಲ್ಲ ಎಂದಾದರೆ ಈ ದಾಖಲಾತಿಗಳನ್ನು ಜೊತೆಗೆ ಒಯ್ಯಿರಿ: ಮತದಾನದ ವೇಳೆ ಮತದಾರರ ಗುರುತಿನ ಚೀಟಿ ಅಗತ್ಯ. ಅದಾಗ್ಯೂ ನಿಮ್ಮ ಬಳಿ ಇದು ಇಲ್ಲ ಎಂದಾದರೆ ನೀವು ಆಧಾರ್ ಕಾರ್ಡ್ ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸನ್ಸ್‌ನಂತಹ ಯಾವುದೇ ಫೋಟೋ ಐಡಿಯನ್ನು ಬಳಕೆ ಮಾಡಬಹುದಾಗಿದೆ. ಇನ್ನು ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗುತ್ತದೆ.

Best Mobiles in India

English summary
Karnataka elections 2023 is just around the corner, here is how you can check your name in the voter’s list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+