Home
ಸುದ್ದಿಜಾಲ

ಬೆಂಗಳೂರಿನ ಈ ಭಾಗದ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರಿಸಲು ಸಲಹೆ

ಬೆಂಗಳೂರಿನಲ್ಲಿನ ಉದ್ದೇಶಿತ ಮೆಟ್ರೋ ಕಾಮಗಾರಿ ಹೊರ ವರ್ತುಲ ರಸ್ತೆಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಜನರು ಪ್ರಯಾಣಿಸಲು ತೊಂದರೆ ಅನುಭವಿಸುವಂತಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂದು, ಎಲೆಕ್ಟ್ರಾನಿಕ್ಸ್, ಐಟಿ, ಟಿವಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ (Karnataka Govt To IT Companies On ORR) ಆ ಭಾಗದ ಎಲ್ಲ ಕಂಪನಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ. ಈ ಪತ್ರದಲ್ಲಿ, ಕಂಪನಿಗಳಿಗೆ ಡಿಸೆಂಬರ್ 2022 ರವರೆಗೆ ವರ್ಕ್ ಫ್ರಮ್‌ ಹೋಮ್ ವಿಸ್ತರಿಸಲು ಸಲಹೆ ನೀಡಲಾಗಿದೆ.

ಬೆಂಗಳೂರಿನ ಈ ಭಾಗದ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರಿಸಲು ಸಲಹೆ

ಮೆಟ್ರೊ ರೈಲು ನಿಗಮವನ್ನು ಉಲ್ಲೇಖಿಸಿ, ಈ ಪತ್ರದಲ್ಲಿ 'ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಹೊರ ವಲಯದ ರಸ್ತೆಯಲ್ಲಿರುವ ಕೆಆರ್ ಪುರಂವರೆಗಿನ ಉದ್ದೇಶಿತ ಮೆಟ್ರೋ (Metro Sake) ಮಾರ್ಗವು ಉದ್ಯೋಗಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಎಲೆಕ್ಟ್ರಾನಿಕ್ಸ್ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಈ ಕೆಲಸ ಒಂದೂವರೆ ವರ್ಷದಿಂದ ಎರಡು ವರ್ಷಗಳವರೆಗೆ ಮುಂದುವರಿಯಬಹುದು ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕಂಪನಿಗಳು ತಮ್ಮ ಉದ್ಯೋಗಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮನೆಯಿಂದ ಕೆಲಸ ಮುಂದುವರಿಸಬಹುದು ಎಂದು ಹೇಳಿದ್ದಾರೆ.

ಬೆಂಗಳೂರಿನ ಈ ಭಾಗದ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರಿಸಲು ಸಲಹೆ

ಈ ಕುರಿತು ಹೇಳಿಕೆ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ. ವಿ. ರಮಣರೆಡ್ಡಿ, ಇದು ಕೇವಲ ಒಂದು ಸಲಹೆಯಾಗಿದೆ. ಆದರೆ, ಇದರ ಮೇಲೆ ವಿಚಾರ ನಡೆಸುವುದು ಹಾಗೂ ಅದನ್ನು ಜಾರಿಗೊಳಿಸುವುದು ಕಂಪನಿಗೆ ಬಿಟ್ಟ ವಿಚಾರವಾಗಿದೆ ಎಂದಿದ್ದಾರೆ. ಇದು ಕಂಪನಿಗಳಿಗೆ ಕಡ್ಡಾಯವಾಗಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ, ಕಂಪನಿ ವರ್ಕ್ ಫ್ರಮ್ ಆಫಿಸ್ ಕೂಡ ಆರಂಭಿಸಬಹುದು ಎಂದು ರಮಣರೆಡ್ಡಿ ಹೇಳಿದ್ದಾರೆ. ನೌಕರರಿಗೆ ಯಾವುದೇ ರೀತಿಯ ತೊದರೆಯಾಗಬಾರದು ಎಂಬ ಉದ್ದೇಶದಿಂದ ವಿಭಾಗ ಈ ಸಲಹೆ ಜಾರಿಮಾಡಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಈ ಭಾಗದ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್ ಮುಂದುವರಿಸಲು ಸಲಹೆ

ಇನ್ನೊಂದೆಡೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ.ಮಂಜುಳಾ, ಮನೆಯಿಂದ ಕೆಲಸವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದರೆ, ನಾವು ಅದನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಬಸ್, ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದ್ದಾರೆ. ಏಕೆಂದರೆ ಕಂಪನಿಗಳಿಗೆ ನಮ್ಮ ವತಿಯಿಂದ ಕೇವಲ ಸಲಹೆ ನೀಡಲಾಗಿದೆ. ಕಂಪನಿ ತನ್ನ ಅನುಕೂಲಕ್ಕೆ ತಕ್ಕಂತೆ ಅದನ್ನು ಪರಿಗಣಿಸಬಹುದು ಎಂದು ಆಯುಕ್ತೆ ಹೇಳಿದ್ದಾರೆ.

''ಮನೆಯಿಂದಲೆ ಕಾರ್ಯನಿರ್ವಹಣೆ ಮಾಡಲು ಅಂತರರಾಷ್ಟ್ರೀಯ ಕಂಪೆನಿಗಳಿಗೆ ಸಹಕಾರ ಕೊಟ್ಟಂತಿದೆ. ಇದರಿಂದ ನಗರ ಭಾಗದಲ್ಲಿರುವ ಟ್ರಾವೆಲ್ಸ್ ಉದ್ಯಮ ನಡೆಸುವವರು, ಎಂಪ್ಲಾಯಿ ಟ್ರನ್ಸಪೋರ್ಟ ಮಾಡುವವರು, ಸರ್ವೀಸ್ ಎಪಾರ್ಟಮೆಂಟ್ ಗಳು, ಹೊರವರ್ತುಲ ರಸ್ತಯಲ್ಲಿ ಇರುವ ಪಂಚಾತಾರ ಸೌಲಭ್ಯದ ಹೋಟೆಲ್ ಗಳು ಅವಲಂಭಿತ ಉದ್ಯಮಗಳು ಇನ್ನೂ ಒಂದು ವರ್ಷಗಳ ಅತಿಥಿಗಳ ಕೊರತೆಯಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗುತ್ತದೆ'' ಎಂದು ಕರ್ನಾಟಕ ರಾಜ್ಯ ಪ್ರಯಾಣ ನಿರ್ವಾಹಕರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.

Best Mobiles in India

English summary
Karnataka Govt Asks Bengaluru IT Firms To Allow WFH Till December 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+