ಕರ್ನಾಟಕ ಜೈಲುಗಳಲ್ಲಿ ಕೈದಿಗಳಿಗಾಗಿ ವೀಡಿಯೊ ಕಾನ್ಫರೆನ್ಸ್

By Shwetha
|

ಹೈ ಟೆಕ್ ಕರ್ನಾಟಕದಲ್ಲಿ ಇನ್ನು ಕೈದಿಗಳು ಹೈಟೆಕ್ ಆಗಲಿದ್ದಾರೆ. ಕೆಲವೇ ತಿಂಗಳಲ್ಲಿ ಜೈಲಿನಲ್ಲಿರುವ ಕೈದಿಯನ್ನು ಸಂಧಿಸುವುದು ಕೆಲವೇ ಕ್ಲಿಕ್‌ಗಳಲ್ಲಿ ನಡೆಯಲಿದೆ. ಸರಕಾರ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಆರಂಭಿಸುವ ನಿಟ್ಟಿನಲ್ಲಿದ್ದು, ಕೈದಿಗಳ ಕುಟುಂಬ ಸದಸ್ಯರಿಗಾಗಿ ವೀಡಿಯೊ ಕಾನ್ಫರೆನ್ಸ್ ವ್ಯವಸ್ಥೆಯನ್ನು ಪರಿಚಯಿಸುವ ಯೋಜನೆಯಲ್ಲಿದೆ.

ಕರ್ನಾಟಕ ಜೈಲುಗಳಲ್ಲಿ ಕೈದಿಗಳಿಗಾಗಿ ವೀಡಿಯೊ ಕಾನ್ಫರೆನ್ಸ್

ಈ ಹೊಸ ವ್ಯವಸ್ಥೆಯಡಿಯಲ್ಲಿ, ಕೈದಿಯ ಸಂಬಂಧಿಕರು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಆನ್‌ಲೈನ್‌ನಲ್ಲಿ ಅಪಾಯಿಂಟ್‌ಮೆಂಟ್ ಅನ್ನು ಪಡೆದುಕೊಳ್ಳಬಹುದು. ಕೈದಿಗಳ ವೆಬ್‌ಸೈಟ್ ಎಲ್ಲಾ ಕೈದಿಗಳ ಮಾಹಿತಿಯನ್ನು ಹೊಂದಿರುತ್ತದೆ. ಯಾರನ್ನು ಭೇಟಿ ಮಾಡಬೇಕೋ ಆನ್‌ಲೈನ್‌ನಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಂಡರಾಯಿತು. ಅಪಾಯಿಂಟ್‌ಮೆಂಟ್ ದಿನದಂದು, ತಮ್ಮ ಆನ್‌ಲೈನ್ ಬುಕ್ಕಿಂಗ್ ಸಂಖ್ಯೆಯನ್ನು ತೋರಿಸಿದರಾಯಿತು ನಂತರ ಕೈದಿಯನ್ನು ಸಂಧಿಸಬಹುದು.

ಓದಿರಿ: ಫೋನ್ ಅಪ್‌ಡೇಟ್ ಏಕೆ ಮುಖ್ಯ? ಇಲ್ಲಿದೆ ಕಾರಣ

ಇನ್ನು ದೂರ ಪ್ರದೇಶಗಳಲ್ಲಿರುವ ಕೈದಿಯ ಸಂಬಂಧಿಕರು ವೀಡಿಯೊ ಕಾನ್ಫರೆನ್ಸ್ ಮಾಡುವ ಮೂಲಕ ಕೈದಿಯೊಂದಿಗೆ ನೇರವಾಗಿ ಮಾತನಾಡಬಹುದು. ಅಪಾಯಿಂಟ್‌ಮೆಂಟ್ ದಿನದಂದು ವೀಡಿಯೊ ಕಾನ್ಫರೆನ್ಸ್‌ಗೆ ಅವಕಾಶವನ್ನು ಮಾಡಿಕೊಡಲಾಗುವುದು.

Best Mobiles in India

English summary
In hi-tech state Karnataka, even the prisons are going hi-tech. Meeting with a prisoner will be just a click away in a few months, as the government has decided to start online booking system for the same. It is also planning to introduce video conference facilities for the family members of inmates.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X