Home
ಸುದ್ದಿಜಾಲ

ಫೋನ್ ಅಪ್‌ಡೇಟ್ ಏಕೆ ಮುಖ್ಯ? ಇಲ್ಲಿದೆ ಕಾರಣ

By Shwetha

ನಿಮ್ಮ ಫೋನ್‌ನಲ್ಲಿ ಆಗಾಗ್ಗೆ ಫೋನ್ ನವೀಕರಣ ಸಂದೇಶಗಳು ಬರುತ್ತಿರಬಹುದು. ಆದರೆ ಈ ನವೀಕರಣಗಳಿಂದ ಉಂಟಾಗುವ ಪ್ರಯೋಜನಗಳೇನು ಎಂಬುದನ್ನು ನೀವು ಆಲೋಚಿಸುತ್ತಿರಬಹುದು. ಈ ನವೀಕರಣಗಳನ್ನು ಫೋನ್‌ನಲ್ಲಿ ಮಾಡುವ ಅವಶ್ಯಕತೆಯಾದರೂ ಏನು ಎಂದು ನೀವು ಜಿಜ್ಞಾಸೆಯಲ್ಲಿ ಬಿದ್ದಿರಬಹುದು.

ಓದಿರಿ: ಹೊಸ ಸಂಖ್ಯೆಯಿಂದ ಹಳೆಯ ವಾಟ್ಸಾಪ್ ಬಳಸುವುದು ಹೇಗೆ?

ಇಂದಿನ ಲೇಖನದಲ್ಲಿ ಫೋನ್ ನವೀಕರಣ ಅಥವಾ ಅಪ್‌ಡೇಟ್ ಮಾಡುವುದರಿಂದ ಉಂಟಾಗುವ ಪ್ರಯೋಜನಗಳನ್ನು ನೀವು ತಿಳಿಯಲಿದ್ದೀರಿ. ಸರಳವಾಗಿರುವ ಈ ಪ್ರಯೋಜನಗಳು ನಿಮ್ಮ ಫೋನ್‌ಗೆ ಸಹಾಯಕವಾಗಲಿದ್ದು ಫೋನ್ ನವೀಕರಣ ಏಕೆ ಮುಖ್ಯ ಎಂಬುದನ್ನು ನೀವು ಅರಿಯಲಿದ್ದೀರಿ.

ಹಾಗಿದ್ದರೆ ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿರುವ ಮಾಹಿತಿಗಳನ್ನು ಅರಿತುಕೊಂಡು ಫೋನ್ ನವೀಕರಣಗಳ ಪ್ರಯೋಜನವನ್ನು ತಿಳಿದುಕೊಳ್ಳಿ.

ಹೊಸ ಫೀಚರ್ ಲಭ್ಯತೆ

ಹೊಸ ಫೀಚರ್ ಲಭ್ಯತೆ

ಹೊಸ ಫೀಚರ್ ಫೋನ್‌ನಲ್ಲಿ ಬಂದಾಗ ನಮಗೆ ಹೊಸ ಹೊಸ ಫೋನ್ ವಿಶೇಷತೆಗಳು ಲಭ್ಯವಾಗುತ್ತವೆ. ಇಂಟರ್ನೆಟ್‌ನಿಂದ ನಿಮ್ಮ ಫೋನ್‌ಗೆ ದೊರಕುವ ಹತ್ತು ಹಲವು ವಿಶೇಷತೆಗಳನ್ನು ನಿಮ್ಮ ಫೋನ್ ಪಡೆದುಕೊಳ್ಳುತ್ತದೆ. ಈ ಫೀಚರ್‌ಗಳು ನಿಮ್ಮ ಫೋನ್‌ಗೆ ಬಂದಾಗ ಇನ್ನಷ್ಟು ಸರಳವಾಗಿ ಫೋನ್‌ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

ಬಗ್ ಫಿಕ್ಸ್

ಬಗ್ ಫಿಕ್ಸ್

ಇನ್ನು ಅಪ್ಲಿಕೇಶನ್ ನವೀಕರಣದ ಇನ್ನೊಂದು ಪ್ರಯೋಜನ ಎಂದರೆ ಬಗ್ ಫಿಕ್ಸ್ ಆಗಿದೆ. ನಿಮ್ಮ ಫೋನ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಏನಾದರೂ ಸಮಸ್ಯೆಯಾಯಿತು ಎಂದಾದಲ್ಲಿ ಈ ನವೀಕರಣದ ಬಳೆಯಿಂದ ಬಗ್ ಫಿಕ್ಸ್ ಮಾಡಬಹುದಾಗಿದೆ.

ಬಳಸಲು ಸುಲಭ

ಬಳಸಲು ಸುಲಭ

ಸಾಫ್ಟ್‌ವೇರ್ ಅಪ್‌ಡೇಟ್‌ನಿಂದಾಗಿ ಯೂಸರ್ ಇಂಟರ್ಫೇಸ್ ಇನ್ನಷ್ಟು ಸರಳವಾಗುತ್ತದೆ. ಬಳೆದಾರರ ಸಮಸ್ಯೆಗಳನ್ನು ನಿವಾರಿಸಿ ಇನ್ನಷ್ಟು ಸರಳ ಬಳಕೆಯನ್ನು ಫೋನ್ ಬಳಕೆದಾರರಿಗೆ ಇದು ಒದಗಿಸುತ್ತಿದೆ.

ಆಪರೇಟಿಂಗ್ ವೇಗಗೊಳಿಸುವುದು

ಆಪರೇಟಿಂಗ್ ವೇಗಗೊಳಿಸುವುದು

ಫೋನ್ ನವೀಕರಣ ಮಾಡುವುದರಿಂದ ಆಪರೇಟಿಂಗ್ ವ್ಯವಸ್ಥೆ ವೇಗಗೊಳ್ಳುತ್ತದೆ. ಇದರೊಂದಿಗೆ ಸಾಫ್ಟ್‌ವೇರ್‌ಗೆ ಹೊಸ ಹಾರ್ಡ್‌ವೇರ್ ಮತ್ತು ಆಪರೇಟಿಂಗ್‌ನ ಕಾಂಪಿಟಿಬಿಲಿಟಿ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ.

ಸುರಕ್ಷಿತ ಬಳಕೆ

ಸುರಕ್ಷಿತ ಬಳಕೆ

ಸಾಫ್ಟ್‌ವೇರ್ ನವೀಕರಣದಲ್ಲಿ ಇನ್ನಷ್ಟು ಸುರಕ್ಷಿತಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಸಾಫ್ಟ್‌ವೇರ್ ಬಳಕೆಯ ಜೊತೆಗೆ ಸುರಕ್ಷತೆಯಲ್ಲಿ ಏನಾದರೂ ಲೋಪ ದೋಷಗಳು ಇದ್ದಲ್ಲಿ ನವೀಕರಣದ ಮೂಲಕ ಅದನ್ನು ದೂರಮಾಡಲಾಗುತ್ತದೆ.

Best Mobiles in India

English summary
In this article we can find what is the better usage of update phone software.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+