ರಾಜ್ಯದ ಜನರಿಗೆ ಸಿಹಿಸುದ್ದಿ; ಇನ್ಮುಂದೆ ನೀವೇ ಫೋನಿನಲ್ಲಿ ಜಮೀನು ಸರ್ವೇ ಮಾಡಬಹುದು!

|

ರಾಜ್ಯದ ಜನರು/ರೈತರು ಇನ್ನು ಜಮೀನುಗಳ ಸರ್ವೇ ಮಾಡಿಸಲು ಸರ್ವೇಯರಗಳಿಗಾಗಿ ಸರ್ಕಾರಿ ಕಛೇರಿಗೆ ಅಲೆದಾಡುವ ಅಗತ್ಯ ಬರದು. ಜನರೇ ಸ್ವಯಂ ಅವರ ಜಮೀನುಗಳ ಸರ್ವೇ ಮಾಡಬಹುದಾದ ವ್ಯವಸ್ಥೆ ಜಾರಿ ಆಗಲಿದೆ.

ರಾಜ್ಯದ ಜನರಿಗೆ ಸಿಹಿಸುದ್ದಿ; ಇನ್ಮುಂದೆ ನೀವೇ ಫೋನಿನಲ್ಲಿ ಜಮೀನು ಸರ್ವೇ ಮಾಡಬಹುದು

ಹೌದು, ರಾಜ್ಯದ ಭೂ ಸರ್ವೇ ಇಲಾಖೆ ಭೂ ಸರ್ವೇ ಮಾಡಲು ನೂತನವಾಗಿ ಅಪ್ಲಿಕೇಶನ್ ಸಿದ್ಧಪಡಿಸುತ್ತಿದೆ. ಭ್ರಷ್ಟಾಚಾರ ತಡೆಯಲು ತಂತ್ರಜ್ಞಾನದ ಬಳಕೆ ಮಾಡಿಕೊಂಡು ಮೊಬೈಲ್‌ ಮೂಲಕ ಸರ್ವೇ ಮಾಡುವ ವ್ಯವಸ್ಥೆ ಇದು ದೇಶದಲ್ಲೇ ಬಾರಿ ಜಾರಿ ಆಗುವ ಸಾಧ್ಯತೆಗಳಿ ಅಧಿಕವಾಗಿವೆ. ಇನ್ನು ಈ ಆಪ್‌ ಬಿಡುಗಡೆ ಬಳಿಕ ಜನರು ಅವರ ಜಮೀನು/ಭೂಮಿಯನ್ನು ಸ್ವಯಂ ಸರ್ವೇ ಮಾಡಬಹುದಾಗಿದೆ. ರಾಜ್ಯ ಮೊಬೈಲ್ ಭೂ ಸರ್ವೇ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ. ಮುಂದಿನ ವರ್ಷದ ಪ್ರಾರಂಭದಲ್ಲಿಯೇ ಈ ನೂತನ ಅಪ್ಲಿಕೇಶನ್ ಜನರಿಗೆ ಲಭ್ಯ ಆಗುವ ನಿರೀಕ್ಷೆಗಳು ಇವೆ.

ರಾಜ್ಯದ ಜನರಿಗೆ ಸಿಹಿಸುದ್ದಿ; ಇನ್ಮುಂದೆ ನೀವೇ ಫೋನಿನಲ್ಲಿ ಜಮೀನು ಸರ್ವೇ ಮಾಡಬಹುದು

ಸರ್ವೇ ಮಾಡುವಾಗ ಪೋಡಿ ಮಾಡುವ, ಜಮೀನುಗಳ ಗಡಿ ಗುರುತಿಸುವ ಸೇರಿದಂತೆ ಇತರೆ ಕೆಲಸಗಳು ಇರುತ್ತವೆ. ಕೆಲವೊಮ್ಮೆ ಸರ್ವೇಗೆ ಸಲ್ಲಿಕೆಯಾದ ಅರ್ಜಿಗಳ ಸರ್ವೇ ಕಾರ್ಯ ವಿಳಂಬ ಆಗುತ್ತವೆ. ಜಮೀನು ಮಾರಾಟ ಅಥವಾ ಖರೀದಿ ಸಂದರ್ಭಗಳಲ್ಲಿ, ಹಾಗೆಯೇ ಜಮೀನ ವಿಭಜನ ಮಾಡುವ ಸಂದರ್ಭಗಳಲ್ಲಿ ಸರ್ವೇ ಮಾಡುವಾಗ ಕೆಲವು ಸಮಸ್ಯೆಗಳು ಇರುತ್ತವೆ. ಇಂತಹ ಹಲವು ಸಮಸ್ಯೆಗಳು ಮುಂದಿನ ದಿನಗಳಲ್ಲಿ ಕಡಿಮೆಯಾಗಲಿವೆ.

ಆಧಾರ್ ಸಂಖ್ಯೆ ಕಡ್ಡಾಯ
ನೂತನ ಭೂ ಸರ್ವೇ ಆಪ್‌ ಮೂಲಕ ಸರ್ವೇ ಮಾಡುವ ಮಾಲೀಕರು/ರೈತರು ಅವರ ಆಧಾರ್ ಕಾರ್ಡ್‌ ನಂಬರ್ ನಮೂದಿಸುವುದು ಕಡ್ಡಾಯ ಆಗಿರಲಿದೆ. ಆಧಾರ್ ನಂಬರ್ ಇಲ್ಲದಿದ್ದರೇ ಭೂಮಿಯ/ಜಮೀನಿನ ನಕಾಶೆ/ಸ್ಕೆಚ್ ಬರುವುದಿಲ್ಲ. ಇದರಿಂದ ಸಮೀಕ್ಷೆ ಮಾಡಲಾಗುವುದಿಲ್ಲ. ಹೀಗಾಗಿ ಆಧಾರ್ ನಂಬರ್ ನಮೂದಿಸುವುದು ಕಡ್ಡಾಯ ಆಗಿರುತ್ತದೆ.

ರಾಜ್ಯದ ಜನರಿಗೆ ಸಿಹಿಸುದ್ದಿ; ಇನ್ಮುಂದೆ ನೀವೇ ಫೋನಿನಲ್ಲಿ ಜಮೀನು ಸರ್ವೇ ಮಾಡಬಹುದು

ಸರ್ವೇಗೆ ಶುಲ್ಕ ನಿಗದಿ
ಭೂಮಿಯ ಸರ್ವೇ ಆದ ಬಳಿಕ, ಮೊಬೈಲ್‌ ಆಪ್‌ನಲ್ಲಿ ಸರ್ವೇ ಮಾಡಿದ ಜಮೀನಿನ ಸ್ಕೆಚ್ ಪಡೆಯುವ ಅವಕಾಶವು ಇರಲಿದೆ. ಸ್ಕೆಚ್/ನಕಾಶೆ ಪಡೆಯಲು ನಿಗದಿತ ಶುಕ್ಕ ವಿಧಿಸಲಾಗುತ್ತದೆ. ಇನ್ನು ಸರ್ವೇಯರಗಳು ಬಂದು ಸರ್ವೇ ಮಾಡಲು ಶುಲ್ಕ ನೀಡುವಂತೆಯೇ, ಆಪ್‌ ಮೂಲಕ ಸ್ವಯಂ ಸರ್ವೇ ಮಾಡಲು ಸಹ ನಿಗದಿತ ಶುಲ್ಕ ವಿಧಿಸುವ ಸಾಧ್ಯತೆಗಳಿವೆ. ಆಪ್ ಲಾಂಚ್ ಮಾಡುವಾಗ ಶುಲ್ಕಗಳ ಬಗ್ಗೆ ಮಾಹಿತಿ ತಿಳಿಸಲಿದೆ.

ಸರ್ವೇಯರಗಳಿಂದ ಸರ್ವೇ ಮಾಡಿಸಲು ಇನ್ಮುಂದೆ ಫೋನ್‌ ಮೂಲಕವೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುವುದು ಹಾಗೂ ಸರ್ವೇ ಕಾರ್ಯವನ್ನು ಪೇಪರ್‌ಲೆಸ್‌ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

Best Mobiles in India

English summary
Karnataka People Can Survey Their Land Through Mobile Application: App Will Launch Soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X