ಆನ್‌ಲೈನ್ ವಂಚನೆ ತಡೆಗೆ ಕರ್ನಾಟಕ ಪೋಲಿಸರಿಂದ ಮಾಸ್ಟರ್ ಪ್ಲ್ಯಾನ್!
ಇಂದಿನ ದಿನಗಳಲ್ಲಿ ಜನರು ಬ್ಯಾಂಕಿಂಗ್ ಸೇರಿದಂತೆ ಇತರೆ ಬಹುತೇಕ ಕೆಲಸಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ನಡೆಸುತ್ತಾರೆ. ಆನ್‌ಲೈನ್ ಬಳಕೆ ಜನರಿಗೆ ಉಪಯುಕ್ತವಾಗಿದೆ ನಿಜ, ಆದರೆ ಎಚ್ಚರವಹಿಸುವುದು ಮುಖ್ಯ. ಏಕೆಂದರೇ ಆನ್‌ಲೈನ್ ಸೇವೆಗಳಲ್ಲಿ ಸೈಬರ್ ವಂಚಕರು ದುರುದ್ದೇಶ ಮಾರ್ಗಗಳ ಮೂಲಕ ಜನರನ್ನು ಯಾಮಾರಿಸುವ ಘಟನೆಗಳು ಹೆಚ್ಚುತ್ತಲಿವೆ. ವಂಚನೆ ಆದಾಗ ಕೆಲವರು ತಡವಾಗಿ ದೂರು ನೀಡುತ್ತಾರೆ, ಇನ್ನು ಕೆಲವರು ದೂರು ನೀಡಲು ಹಿಂದೆಟು ಹಾಕುತ್ತಾರೆ. ಹೀಗಾಗಿ ಆನ್‌ಲೈನ್ ವಂಚನೆ ತಡೆಯಲು ಕರ್ನಾಟಕ ಪೋಲಿಸ್ ಇಲಾಖೆ ಈಗ ಮಾಸ್ಟರ್ ಪ್ಲ್ಯಾನ್‌ಯೊಂದನ್ನು ಜಾರಿ ಮಾಡಿದೆ.
ಸೈಬರ್ ಅಪರಾಧ ತಡೆಗೆ ಬೆಂಗಳೂರು ಪೋಲಿಸರು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಸೈಬರ್ ಕ್ರೈಮ್ ಇನ್ಸಿಡೆಂಟ್ ರಿಪೋರ್ಟ್ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಜನರು ಡಯಲ್ 112 ನಂಬರ್‌ಗೆ ಕರೆ ಮಾಡಿ, ಆಗಿರುವ ಸೈಬರ್ ವಂಚನೆ ಬಗ್ಗೆ ದೂರು ನೀಡಲು ಅವಕಾಶ ನೀಡಿದ್ದಾರೆ.

ಇತ್ತೀಚಿಗೆ ಹಣಕಾಸಿನ ವಂಚನೆಯ ದೂರುಗಳು ಅಧಿಕವಾಗುತ್ತಿರುವ ಹಿನ್ನೆಲೆ ಸೈಬರ್ ಠಾಣೆಗೆ ಬಂದು ದೂರು ನೀಡುವಷ್ಟರಲ್ಲಿ ತುಂಬಾ ವಿಳಂಬವಾಗುತ್ತಿತ್ತು. ಆದರೆ ಈಗ 112 ನಂಬರ್‌ಗೆ ಕರೆ ಮಾಡಿ ಜನರು ತಮಗಾಗಿರುವ ಆನ್‌ಲೈನ್ ವಂಚನೆಯ ಬಗ್ಗೆ ತಕ್ಷಣಕ್ಕೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.

ಅಪರಾಧ ನಡೆದ ನಂತರ ತಕ್ಷಣವೇ ದೂರು ನೀಡುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ 112 ನಂಬರ್ ಜನರಿಗೆ ನೆರವಾಗಲಿದೆ. ಜನರು ತಕ್ಷಣವೇ ದೂರು ನೀಡಿದರೇ, ದೂರು ಪಡೆದ ನಂತರ ಪೋಲಿಸರು ಕಾರ್ಯ ಪ್ರವೃತ್ತರಾಗಲಿದ್ದಾರೆ.

ಹಾಗೆಯೇ ಸೈಬರ್ ವಂಚನೆ ಆದಾಗ ಜನರು ಸೈಬರ್ ಠಾಣೆಗೆ ಭೇಟಿ ನೀಡಿ ಸಹ ದೂರು ಸಲ್ಲಿಸಬಹುದಾಗಿದೆ. ಹಾಗಾದರೇ ಆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಸದ್ಯ ಫುಡ್ ಆರ್ಡರ್, ಆನ್‌ಲೈನ್ ಶಾಪಿಂಗ್, ಬಿಲ್ ಪೇಮೆಂಟ್ ಸೇರಿದಂತೆ ಬ್ಯಾಂಕ್ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಯುತ್ತವೆ. ಆನ್‌ಲೈನ್ ವ್ಯವಹಾರ ಕೆಲಸಗಳನ್ನು ಸರಳವಾಗಿಸಿದೆ ನಿಜ ಆದರೆ ಅದನ್ನೆ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಗ್ರಾಹಕರನ್ನು ಮೋಸದ ಬಲೆಗೆ ಬೀಳಿಸಿ ಯಾಮಾರಿಸುವ ಘಟನೆಗಳು ಹೆಚ್ಚುತ್ತಿವೆ. ಎಷ್ಟೂ ಸಂದರ್ಭಗಳಲ್ಲಿ ವಂಚನೆಗೊಳಗಾದ ಗ್ರಾಹಕರು ದೂರು ನೀಡುವುದು ಕಡಿಮೆ.

ಆನ್‌ಲೈನ್ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕು. ಸೈಬರ್ ವಂಚಕರು ಪೇಮೆಂಟ್ ಆಪ್, ಫುಡ್ ಆರ್ಡರ್, ಸಕಲಿ ಬ್ಯಾಂಕ್ ಕರೆಗಳು, ಮೋಸದ ಕರೆಗಳು, ಇ-ಮೇಲ್‌ಗಳು, ಎಸ್‌ಎಮ್ಎಸ್‌ಗಳ ಜಾಲ ಬೀಸಿರುತ್ತಾರೆ. ಆನ್‌ಲೈನ್ ಯಾವುದೇ ರೀತಿಯ ಆನ್‌ಲೈನ್ ವಂಚನೆಯ ಪ್ರಕರಣಗಳು ನಡೆದರೇ ಗ್ರಾಹಕರು/ಬಳಕೆದಾರರು ಸೈಬರ್ ಪೋಲಿಸ್ ವಿಭಾಗಕ್ಕೆ ದೂರು ಸಲ್ಲಿಸಬಹುದಾಗಿದೆ. ಗ್ರಾಹಕರು ಆನ್‌ಲೈನ್‌ನಲ್ಲಿಯೇ ಸೈಬರ್ ಪೋಲಿಸ್ ವಿಭಾಗಕ್ಕೆ ದೂರು ಸಲ್ಲಿಸಬಹುದಾದ ಸೌಲಭ್ಯವು ಇದೆ.

* ಆನ್‌ಲೈನ್‌ನಲ್ಲಿ ಸೈಬರ್ ವಿಭಾಗದ ಅಧಿಕೃತ ವೆಬ್‌ತಾಣ ತೆರೆಯಿರಿ. https://cybercrime.gov.in.
* ವೆಬ್‌ಸೈಟ್ ತೆರೆದ ಮೇಲೆ 'File a complaint' ಆಯ್ಕೆಯನ್ನು ಒತ್ತಿರಿ.
* ನಂತರ ಕಾಣಿಸುವ ಟರ್ಮ್ ಮತ್ತು ಕಂಡಿಷನ್ accept ಮಾಡಿ.

Report Other Cybercrime
* ಆನಂತರ Report Other Cybercrime ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
* ನಂತರದಲ್ಲಿ ಸಿಟಿಜನ್ ಲಾಗ್ ಇನ್ ಆಯ್ಕೆ ಒತ್ತಿರಿ. ಮತ್ತು ಅಲ್ಲಿ ಕಾಣಿಸುವ ಕೀ ಮಾಹಿತಿಗಳನ್ನು ಭರ್ತಿ ಮಾಡಿರಿ.
* ನಂತರ OTP ನಮೂದಿಸಿ. ಹಾಗೂ ಗಣಿತದ ಕ್ಯಾಪ್ಚಾ ಉತ್ತರ ನಮೂದಿಸಿ ಸಬ್‌ಮೀಟ್ ಮಾಡಿರಿ.

ನಂತರ ಒಂದು ಫಾರ್ಮ್ ಮಾದರಿ ಕಾಣಿಸುತ್ತದೆ. ಈ ಫಾರ್ಮ್ ನಾಲ್ಕು ಭಾಗಗಳನ್ನು ಒಳಗೊಂಡಿರುತ್ತದೆ. ಘಟನೆಯ ಮಾಹಿತಿ, ಶಂಕಿತ ವಿವರಗಳು, ದೂರುಗಳ ವಿವರಗಳನ್ನು ಒಂದು ಬಾರಿ ಪರಿಶೀಲಿಸಿ ಸಬ್‌ಮೀಟ್ ಮಾಡಿರಿ.

ಘಟನೆ ಮಾಹಿತಿ ಫುಟ: ಈ ಪುಟದಲ್ಲಿ ಘಟನೆಯ ಮಾಹಿತಿ, ಘಟನೆಯ ಕೇಟಗೆರಿ, ಘಟನೆ ನಡೆದ ಸಮಯ, ದಿನಾಂಕ, ದೂರು ನೀಡಲು ತಡ ಮಾಡಿರುವುದಕ್ಕೆ ಕಾರಣ ಮತ್ತು ಘಟನೆ ಎಲ್ಲಿ ನಡೆಯಿತು ಎನ್ನುವ ಕುರಿತಾಗಿ ಮಾಹಿತಿ ಭರ್ತಿ ಮಾಡಿರಿ.

ಸಾಮಾಜಿಕ ತಾಣಗಳ ಮಾಹಿತಿ: ಕೆಲವೊಮ್ಮೆ ಅರ್ಜಿದಾರರ ಸಾಮಾಜಿಕ ತಾಣಗಳ ಖಾತೆಯ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ವಂಚನೆಯಾದ ವೆಬ್‌ಸೈಟ್, URL ನಂತಹ ಮಾಹಿತಿಗಳು ಅಗತ್ಯವಾಗಿರುತ್ತದೆ.

ಕಂಪ್ಲೇಟ್ ಮಾಹಿತಿ: ಕಂಪ್ಲೇಟ್ ಮಾಹಿತಿಯಲ್ಲಿ ಶಂಕಿತ ವ್ಯಕ್ತಿಯ ಕುರಿತು ಮಾಹಿತಿ ಇದ್ದರೇ ನಮೂದಿಸುವುದು. (ಹೆಸರು, ವಿಳಾಸ, ಇ-ಮೇಲ್ ಐಡಿ,)

ಆನಂತರ ಅರ್ಜಿದಾರರು ಅವರ ಇ-ಮೇಲ್ ಐಡಿ, ಫೋಟೊಗ್ರಫಿ, ಇನ್ನಿತರೆ ಅಗತ್ಯ ಮಾಹಿತಿ ಭರ್ತಿ ಮಾಡುವುದು. ಕೊನೆಯಲ್ಲಿ Confirm and Submit ಆಯ್ಕೆಯನ್ನು ಒತ್ತಿರಿ. ಹಾಗೆಯೇ ಸಲ್ಲಿಸಲಾದ ಅರ್ಜಿಯನ್ನು PDF ನಲ್ಲಿ ಪಡೆದುಕೊಳ್ಳಲು ಅವಕಾಶವಿದೆ.


Click it and Unblock the Notifications