ಶಿವಮೊಗ್ಗದ ಈ ಹೋಟೆಲ್‌ನಲ್ಲಿ ರೊಬೋಟ್ ಸಪ್ಲೈಯರ್‌ ಆಗಿದೆ.!

|

ರೊಬೋಟ್‌ಗಳು ಪರಿಚಿತವಾದ ಆರಂಭದಲ್ಲಿ ಅವು ಸಹ ಮನುಷ್ಯರಂತೆ ಕೆಲಸ ಮಾಡಲಿವೆ ಎನ್ನುವ ಸಂಗತಿಗಳು ಕೂತೂಹಲ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಹಾಗೇ ವಿದೇಶಗಳಲ್ಲಿ ಈಗಾಗಲೇ ಪ್ರಮುಖ ಕೆಲಸಗಳನ್ನು ನಿರ್ವಹಿಸಲು ಮಾನವ ರೊಬೋಟ್‌ಗಳನ್ನು ಬಳಕೆ ಮಾಡುತ್ತಿರುವುದನ್ನು ಸಹ ನೋಡಿದ್ದವೆ. ಆದರೆ ಇದೀಗ ಕರ್ನಾಟಕದ ರೆಸ್ಟೊರಂಟ್‌ವೊಂದರಲ್ಲಿ ರೊಬೋಟ್‌ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಸಖತ ವೈರಲ್ ಆಗಿದೆ.

ಶಿವಮೊಗ್ಗದ ಈ ಹೋಟೆಲ್‌ನಲ್ಲಿ ರೊಬೋಟ್ ಸಪ್ಲೈಯರ್‌ ಆಗಿದೆ.!

ಹೌದು, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ವಿನೋಭಾ ನಗರದಲ್ಲಿರುವ 'ಉಪಹಾರ ದರ್ಶಿನಿ' ಹೋಟೆಲ್‌ನಲ್ಲಿ ಮಾನವ ರೊಬೋಟ್ ಸಪ್ಲೈಯರ್‌ ಕೆಲಸ ಮಾಡುತ್ತಿದ್ದು, ಸದ್ಯ ಈ ಹೋಟೆಲ್ ಈಗ ಆಕರ್ಷಣೀಯ ಕೇಂದ್ರವಾಗಿದೆ. ರೆಸ್ಟೊರೆಂಟ್‌ಗೆ ಬರುವ ಗ್ರಾಹಕರನ್ನು ಈ ಮಾವನ ರೊಬೋಟ್ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿಸಿ ಅವರನ್ನು ಸ್ವಾಗತ ಕೋರುತ್ತದೆ.

ಓದಿರಿ : ಏರ್‌ಟೆಲ್ 399ರೂ. ಹಾಟ್‌ಸ್ಪಾಟ್ ಪ್ಲ್ಯಾನ್‌ ; 50GB ಡೇಟಾ ಖಚಿತ, ಆನಂತರ ಉಚಿತ!ಓದಿರಿ : ಏರ್‌ಟೆಲ್ 399ರೂ. ಹಾಟ್‌ಸ್ಪಾಟ್ ಪ್ಲ್ಯಾನ್‌ ; 50GB ಡೇಟಾ ಖಚಿತ, ಆನಂತರ ಉಚಿತ!

ಶಿವಮೊಗ್ಗದ ಈ ಹೋಟೆಲ್‌ನಲ್ಲಿ ರೊಬೋಟ್ ಸಪ್ಲೈಯರ್‌ ಆಗಿದೆ.!

ಈ ಮಾನವ ರೊಬೋಟ್ ರೆಸ್ಟೊರೆಂಟ್‌ನಲ್ಲಿ ಗ್ರಾಹಕರ ಬಳಿಗೆ ಹೋಗಿ ಮೊದಲು ಅವರಿಗೆ ಕುಡಿಯಲು ನೀರು ಸಪ್ಲೈ ಮಾಡುತ್ತದೆ ನಂತರ ಫುಡ್‌ ಮೆನುವನ್ನು ಓದಿ ಹೇಳುತ್ತದೆ. ಅಷ್ಟೆ ಅಲ್ಲದೆ ಗ್ರಾಹಕರು ಆರ್ಡರ್‌ ಮಾಡಿರುವ ಆಹಾರವನ್ನು ತಂದು ಕೊಡುತ್ತದೆ. ಒಟ್ಟಾರೆ ಒಬ್ಬ ಸಪ್ಲೈಯರ್‌ ಮಾಡುವ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸುವ ಈ ರೊಬೋಟ್ ಗ್ರಾಹಕರನ್ನು ಸೆಳೆಯುತ್ತಿದೆ.

ರೊಬೋಟ್‌ನ ಬ್ಯಾಟರಿಯಿಂದ ಕಾರ್ಯನಿರ್ವಹಿಸಲಿದ್ದು, ಸುಮಾರು ಎರಡು ಗಂಟೆ ಚಾರ್ಜ್ ಮಾಡಿದರೇ ಮೂರುದಿನಗಳ ವರೆಗೆ ಬ್ಯಾಟರಿ ಬಾಳಿಕೆ ಒದಗಿಸಲಿದೆ. ರೊಬೋಟ್‌ನ ವೇಗವನ್ನು ರೆಸ್ಟೊರೆಂಟ್ ಮಾಲೀಕರು ನಿಯಂತ್ರಿಸುತ್ತಾರೆ. ಸದ್ಯ ಕರ್ನಾಟಕದ ಮೊದಲ ಮಾನವ ರೊಬೋಟ್ ಸಪ್ಲೈಯರ್‌ ಎಂದು ಗುರುತಿಸಿಕೊಂಡಿರುವ ಇದರ ಬೆಲೆಯು 5.5 ಲಕ್ಷ ಎನ್ನಲಾಗಿದೆ.

ಶಿವಮೊಗ್ಗದ ಈ ಹೋಟೆಲ್‌ನಲ್ಲಿ ರೊಬೋಟ್ ಸಪ್ಲೈಯರ್‌ ಆಗಿದೆ.!

ಹೋಟಲ್‌ಗಳಲ್ಲಿ ಸಪ್ಲೈಯರ್‌ ಕೆಲಸಕ್ಕೆ ರೊಬೋಟ್‌ಗಳನ್ನು ಬಳಕೆ ಮಾಡುವ ಟ್ರೆಂಡ್ ಈಗ ಭಾರತದಲ್ಲಿಯೂ ಶುರುವಾಗಿದ್ದು, ಶಿವಮೊಗ್ಗದ 'ಉಪಹಾರ ದರ್ಶಿನಿ' ಹೋಟೆಲ್ ದೇಶದಲ್ಲಿ ರೊಬೋಟ್‌ ಅನ್ನು ಬಳಸುತ್ತಿರುವ ಮೂರನೇಯ ಹೋಟೆಲ್ ಆಗಿದೆ. ರೆಸ್ಟೊರಂಟ್ ಮಾಲೀಕರು ಈ ರೊಬೋಟ್‌ ಅನ್ನು ವಿಜಯವಾಡದಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ.

ಓದಿರಿ : ಪಬ್‌ಜಿ ಕಥೆ ಮುಗಿಯಿತು!..ಶುರುವಾಗಲಿದೆ ಹೊಸ ಗೇಮ್‌ನ ಅಬ್ಬರ! ಓದಿರಿ : ಪಬ್‌ಜಿ ಕಥೆ ಮುಗಿಯಿತು!..ಶುರುವಾಗಲಿದೆ ಹೊಸ ಗೇಮ್‌ನ ಅಬ್ಬರ!

Best Mobiles in India

English summary
Karnataka's first robot waiter is ready to take your orders in this restaurant.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X