Subscribe to Gizbot

ರಾಜ್ಯದಲ್ಲಿದ್ದಾರೆ 5.2 ಕೋಟಿ ಮೊಬೈಲ್‌ ಬಳಕೆದಾರರು

Written By:

ದೇಶದಲ್ಲಿ ಅತಿಹೆಚ್ಚು ಮೊಬೈಲ್‌ ಬಳಕೆದಾರರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 6ನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಸದ್ಯ 5.2 ಕೋಟಿ ಮೊಬೈಲ್‌ ಬಳಕೆದಾರರಿದ್ದಾರೆ. ಇನ್ನು ಮೊದಲ 5 ಸ್ಥಾನಗಳಲ್ಲಿ ಕ್ರಮವಾಗಿ ಉತ್ತರಪ್ರದೇಶ (12.10 ಕೋಟಿ), ತಮಿಳುನಾಡು (7.10 ಕೋಟಿ), ಮಹಾರಾಷ್ಟ್ರ (6.7 ಕೋಟಿ), ಆಂಧ್ರಪ್ರದೇಶ (6.4 ಕೋಟಿ), ಬಿಹಾರ (6 ಕೋಟಿ) ರಾಜ್ಯಗಳಿವೆ.

 ರಾಜ್ಯದಲ್ಲಿದ್ದಾರೆ 5.2 ಕೋಟಿ ಮೊಬೈಲ್‌ ಬಳಕೆದಾರರು

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (Telecom Regulatory Authority of India ) ಮಾಹಿತಿಯಂತೆ ಭಾರತದಲ್ಲಿ ಒಟ್ಟು 86 ಕೋಟಿ ಮೊಬೈಲ್‌ ಬಳಕೆದಾರರಿದ್ದು, ಈ ಮೂಲಕ ಜಗತ್ತಿನಲ್ಲಿಯೇ ಅತಿ ಹೆಚ್ಚು ಮೊಬೈಲ್‌ ಬಳಕೆ ಮಾಡುವ ದೇಶಗಳ ಪೈಕಿ 2ನೇ ಸ್ಥಾನ ಪಡೆದುಕೊಂಡಿದೆ. ಮೊಬೈಲ್‌ ಬಳಕೆಯಲ್ಲಿ ಮೊದಲ 5 ರಾಜ್ಯಗಳಲ್ಲಿ ಇಡೀ ರಾಷ್ಟ್ರದ ಬಳಕೆದಾರರ ಪೈಕಿ ಬಹುತೇಕ ಅರ್ಧದಷ್ಟಿದ್ದಾರೆ. ವಿಶೇಷವೆಂದರೆ 2013, ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಶೇ. 0.11ರಷ್ಟು ಇಳಿಕೆ ಕಂಡುಬಂದಿದೆ.

ಜಾಗತಿಕವಾಗಿ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯವೆಂದು ಕರೆಸಿಕೊಂಡಿರುವ ಗುಜರಾತ್‌ 8ನೇ ಸ್ಥಾನದಲ್ಲಿದೆ. ಇಲ್ಲಿ 5.10 ಕೋಟಿ ಬಳಕೆದಾರರಿದ್ದಾರೆ. ವಿಸ್ತೀರ್ಣದ ಆಧಾರದಲ್ಲಿ ಅತೀ ದೊಡ್ಡ ರಾಜ್ಯವೆಂದೇ ಗುರುತಿಸಿರುವ ರಾಜಸ್ತಾನದಲ್ಲಿ 4.78 ಕೋಟಿ ಬಳಕೆದಾರರಿದ್ದಾರೆ. ಸ್ಥಿರ ಮತ್ತು ಮೊಬೈಲ್‌ ಎರಡನ್ನೂ ಸೇರಿಸಿ ಭಾರತದ ದೂರವಾಣಿ ಬಳಕೆದಾರರ ಸಂಖ್ಯೆ 80.92 ಕೋಟಿಗೆ ತಲುಪಿದೆ.

ಇದನ್ನೂ ಓದಿ : ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot