ಕ್ಯಾಸ್ಪರ್ಸ್ಕಿ ಅಂಟಿ ವೈರಸ್ ಬಳಕೆ ತಕ್ಷಣವೇ ನಿಲ್ಲಿಸಿ: ಅಮೆರಿಕಾದಲ್ಲಿ ನಿಷೇಧ ವಿಧಿಸಿದ ಟ್ರಂಪ್! ಕಾರಣ?

By Srinidhi
|

ಅಂಟಿವೈರಸ್ ಸಾಫ್ಟ್‌ವೇರ್ ವಿಭಾಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಕ್ಯಾಸ್ಪರ್ಸ್ಕಿ ಸಾಫ್ಟ್‌ವೇರ್ ಅನ್ನು ಅಮೆರಿಕಾದ ಸರಕಾರಿ ಕಚೇರಿಗಳಲ್ಲಿ ಬಳಕೆ ಮಾಡದಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಆದರೆ ಇಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಸ್ಪರ್ಸ್ಕಿ ಸಾಫ್ಟ್‌ವೇರ್‌ಗಳನ್ನು ಅಮೆರಿಕಾದ ಸರಕಾರಿ ಕಚೇರಿಗಳಲ್ಲಿ ಬಳಕೆ ಮಾಡದಂತೆ ನಿ‍ಷೇಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಕ್ಯಾಸ್ಪರ್ಸ್ಕಿ ಅಂಟಿ ವೈರಸ್ ಬಳಕೆ ತಕ್ಷಣವೇ ನಿಲ್ಲಿಸಿ: ಕಾರಣ?

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೆಗಾ ಸೇಲ್: ಮಿಸ್‌ ಮಾಡಿದ್ರೆ ನಿಮಗೆ ಲಾಸ್‌...!

ಕ್ಯಾಸ್ಪರ್ಸ್ಕಿ ಸಾಫ್ಟ್‌ವೇರ್ ಬಳಕೆದಾರರ ಮಾಹಿತಿಗಳನ್ನು ಕದಿಯುವುದಲ್ಲದೇ ಇದನ್ನು ರಷ್ಯಾಗೆ ವರ್ಗಹಿಸುತ್ತಿದೆ ಎಂದು ಅಮೆರಿಕಾದ ಗುಪ್ತಚರ ಮೂಲಗಳು ಮಾಹಿತಿಯನ್ನು ನೀಡಿರುವ ಕಾರಣಕ್ಕೆ ಅಮೆರಿಕಾದ ಸರಕಾರಿ ಕಚೇರಿಗಳಲ್ಲಿ ಬಳಕೆ ಮಾಡದಂತೆ ನಿ‍ಷೇಧಿಸಿಲಾಗಿದೆ ಎನ್ನಲಾಗಿದೆ. ಈ ಸಾಫ್ಟ್‌ವೇರ್ ಬಳಕೆಯಿಂದಾಗಿ ದೇಶದ ಭದ್ರತೆಗೆ ಅಪಾಯ ಉಂಟಾಗಲಿದೆ.

ಸೈಬರ್ ದಾಳಿ:

ಸೈಬರ್ ದಾಳಿ:

ಎರಡನೇ ಮಹಾ ಯುದ್ದದ ನಂತರದಲ್ಲಿ ಯುದ್ದ ಸೈಬರ್ ಮೂಲಕವೇ ನಡೆಯಲಿದ್ದು, ಇದರಿಂದಾಗಿ ರಷ್ಯಾ ಮೂಲದ ಕ್ಯಾಸ್ಪರ್ಸ್ಕಿ ಸಾಫ್ಟ್‌ವೇರ್ ಗಳನ್ನು ಬಳಸುವುದು ಸುರಕ್ಷಿತವಲ್ಲ ಎನ್ನಲಾಗಿದೆ. ಇದರಿಂದಾಗಿ ಈ ಆಪ್‌ ಬಳಕೆಯನ್ನು ತಕ್ಷಣವೇ ನಿಲ್ಲಿಸಿ.

 ರಷ್ಯಾಗೆ ಮಾಹಿತಿ:

ರಷ್ಯಾಗೆ ಮಾಹಿತಿ:

ಈಗಾಗಲೇ ಕ್ಯಾಸ್ಪರ್ಸ್ಕಿ ಸಾಫ್ಟ್‌ವೇರ್ ರಷ್ಯಾ ಮೂಲದ ಸರ್ವರ್ ವೊಂದಕ್ಕೆ ತನ್ನ ಎಲ್ಲಾ ಬಳಕೆದಾರರ ಮಾಹಿತಿಯನ್ನು ರವಾನಿಸುತ್ತಿದೆ ಎನ್ನುವ ಮಾಹಿತಿಯೂ ಬಹಿರಂಗಗೊಂಡಿದ್ದು, ಅತೀ ಹೆಚ್ಚು ಮಂದಿ ಈಗಾಗಲೇ ಕ್ಯಾಸ್ಪರ್ಸ್ಕಿ ಸಾಫ್ಟ್‌ವೇರ್ ಬಳಕೆಯನ್ನು ನಿಲ್ಲಿಸಿದ್ದಾರೆ.

ನಿಮಗೆ ಅಪಾಯ:

ನಿಮಗೆ ಅಪಾಯ:

ಕ್ಯಾಸ್ಪರ್ಸ್ಕಿ ಸಾಫ್ಟ್‌ವೇರ್ ಅನ್ನು ರಷ್ಯಾ ಮೂಲದ ಹ್ಯಾಕರ್ ಗಳು ಸುಲಭವಾಗಿ ಬ್ರೇಕ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳು ಹಾಗೂ ವ್ಯವಹಾರಗಳು ಬಹಿರಂಗಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

Best Mobiles in India

English summary
Kaspersky Software Banned for US Government Use as Trump Signs Legislation Into Law. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X