Home
ಸುದ್ದಿಜಾಲ

ನೀವು ನಿತ್ಯವೂ ಇಂಟರ್ನೆಟ್‌ ಬಳಕೆ ಮಾಡುತ್ತೀರಾ?... ಹಾಗಿದ್ರೆ ಇರಲಿ ಈ ಬಗ್ಗೆ ಎಚ್ಚರ!

ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚಾದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಬಳಕೆದಾರರಿಗೆ ವಿವಿಧ ಸೌಲಭ್ಯಗಳ ಜೊತೆಗೆ ಅತ್ಯುತ್ತಮವಾದ ಇಂಟರ್ನೆಟ್‌ ಸೌಲಭ್ಯಗಳನ್ನು ನೀಡುತ್ತಿವೆ. ಅದರಲ್ಲೂ 5G ಭಾರತದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಈ ಮೂಲಕ ಜನರು ತ್ವರಿತವಾಗಿ ತಮಗೆ ಬೇಕಾದ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅದಾಗ್ಯೂ ಈ ಇಂಟರ್ನೆಟ್ ಮೂಲಕ‌ ಬಳಕೆದಾರರನ್ನು ವಂಚಿಸಲು ಸಿದ್ಧವಾಗಿವೆ ಈ ಮೂರು ಮಾಲ್‌ವೇರ್‌ಗಳು.

ಹೌದು, ಮೂರು ವಿಭಿನ್ನ ಮಾಲ್‌ವೇರ್ ತಳಿಗಳು ಅಂತರ್ಜಾಲದಲ್ಲಿ ಬಳಕೆದಾರರನ್ನು ಬಲೆಗೆ ಬೀಳಿಸಲು ಹಲವು ವಿಧಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ. ಕ್ಯಾಸ್ಪರ್ಸ್ಕಿಯ ವರದಿಯ ಪ್ರಕಾರ ಮೂರು ಮಾಲ್‌ವೇರ್ ತಳಿಗಳಾದ ಡಾರ್ಕ್‌ಗೇಟ್, ಎಮೋಟೆಟ್ ಮತ್ತು ಲೋಕಿಬಾಟ್ (DarkGate, Emotet, and LokiBot) ಬಳಕೆದಾರರ ಡೇಟಾವನ್ನು ಕದಿಯಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿವೆ ಎಂದು ಎಚ್ಚರಿಸಲಾಗಿದೆ. ಹಾಗಿದ್ರೆ, ಈ ಮೂರು ಮಾಲ್‌ವೇರ್ ಇಂಟರ್ನೆಟ್‌ ಬಳಕೆ ಮಾಡುವವರಿಗೆ ಹೇಗೆಲ್ಲಾ ಸಮಸ್ಯೆ ನೀಡುತ್ತವೆ ಎಂದು ತಿಳಿದುಕೊಳ್ಳಿ.

ನೀವು ನಿತ್ಯವೂ ಇಂಟರ್ನೆಟ್‌ ಬಳಕೆ ಮಾಡುತ್ತೀರಾ?ಹಾಗಿದ್ರೆ ಇರಲಿ ಈ ಬಗ್ಗೆ ಎಚ್ಚರ!

ಡಾರ್ಕ್‌ಗೇಟ್ ಮಾಲ್‌ವೇರ್ ಸ್ಟ್ರೈನ್ : ಜೂನ್ 2023 ರಲ್ಲಿ ಕ್ಯಾಸ್ಪರ್ಸ್ಕಿಯ ಸಂಶೋಧಕರು ಡಾರ್ಕ್‌ಗೇಟ್ ಎಂಬ ಹೊಸ ಲೋಡರ್ ಅನ್ನು ಪತ್ತೆ ಮಾಡಿದ್ದಾರೆ. ಇದು ವಿಶಿಷ್ಟವಾದ ಡೌನ್‌ಲೋಡರ್ ಕಾರ್ಯವನ್ನು ಮೀರಿದ ಬಹು ಫೀಚರ್ಸ್‌ ಆಯ್ಕೆ ಪಡೆದಿದ್ದು, ಗುಪ್ತ ವಿಎನ್‌ಸಿ, ವಿಂಡೋಸ್ ಡಿಫೆಂಡರ್ ಹೊರಗಿಡುವಿಕೆ, ಬ್ರೌಸರ್ ಇತಿಹಾಸ ಕಡಿಯುವುದು, ರಿವರ್ಸ್ ಪ್ರಾಕ್ಸಿ, ಫೈಲ್ ನಿರ್ವಹಣೆ ಮತ್ತು ಡಿಸ್ಕಾರ್ಡ್ ಟೋಕನ್ ಕದಿಯುವಿಕೆ ಸೇರಿದಂತೆ ಅನೇಕ ಕುತಂತ್ರ ಕೆಲಸ ಮಾಡುವಂತೆ ರೂಪಿಸಲಾಗಿದೆ.

ಡಾರ್ಕ್‌ಗೇಟ್‌ನ ಕಾರ್ಯಾಚರಣೆಯು ನಾಲ್ಕು ಹಂತಗಳ ಸರಣಿಯನ್ನು ಹೊಂದಿದೆ. ಅದರಲ್ಲಿ ಈ ಮಾಲ್‌ವೇರ್‌ ತಂತಾನೇ ಲೋಡ್‌ ಆಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಲೋಡರ್ ವೈಯಕ್ತೀಕರಿಸಿದ ಕೀಗಳೊಂದಿಗೆ ಸ್ಟ್ರಿಂಗ್‌ಗಳನ್ನು ಎನ್‌ಕ್ರಿಪ್ಟ್ ಮಾಡುವ ಫೀಚರ್ಸ್ ವಿಧಾನವನ್ನು ಹೊಂದಿದ್ದು, ವಿಶೇಷ ಅಕ್ಷರ ಸೆಟ್ ಅನ್ನು ಬಳಸುವ Base64 ಎನ್‌ಕೋಡಿಂಗ್‌ನ ಕಸ್ಟಮ್ ಆವೃತ್ತಿಯನ್ನು ಹೊಂದಿದೆ.

ಎಮೋಟೆಟ್ ಮಾಲ್ವೇರ್ ಸ್ಟ್ರೈನ್ : ಎಮೋಟೆಟ್ 2021 ರಲ್ಲಿ ಕಾಣಿಸಿಕೊಂಡಿತ್ತು. ಇದಾದ ಬಳಿಕ ಈಗ ಮತ್ತೆ ಮುನ್ನೆಲೆ ಬಂದಿದೆ. ಈ ಮಾಲ್‌ವೇರ್‌ನ ಚಟುವಟಿಕೆಯನ್ನು ಇತ್ತೀಚೆಗೆ ದಾಖಲಿಸಲಾಗಿದೆ ಎಂದು ಕ್ಯಾಸ್ಪರ್ಸ್ಕಿಯ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ದುರುದ್ದೇಶಪೂರಿತ ಒನ್‌ನೆಟ್‌ ಫೈಲ್‌ಗಳನ್ನು ತಿಳಿಯದೆ ತೆರೆದಾಗ ಗುಪ್ತ ಮತ್ತು ವೇಷದ VBಸ್ಕ್ರಿಪ್ಟ್‌ ಕಾರ್ಯಗತವಾಗುತ್ತದಂತೆ.

ಹಾಗೆಯೇ ಈ ಸ್ಕ್ರಿಪ್ಟ್ ನಂತರ ವಿವಿಧ ವೆಬ್‌ಸೈಟ್‌ಗಳಿಂದ ಹಾನಿಕಾರಕ ಪೇಲೋಡ್ ಅನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸುತ್ತದೆ. ಅಷ್ಟು ಮಾತ್ರವಲ್ಲದೆ ಅದು ಸಿಸ್ಟಮ್‌ಗೆ ಯಶಸ್ವಿಯಾಗಿ ನುಸುಳುತ್ತದೆ ಎಂದು ಎಚ್ಚರಿಸಲಾಗಿದೆ. ಆರಂಭದಲ್ಲಿ ಎಮೋಟೆಟ್ ತಾತ್ಕಾಲಿಕ ಡೈರೆಕ್ಟರಿಯಲ್ಲಿ ಡಿಎಲ್‌ಎಲ್‌ ಅನ್ನು ನಿರ್ಮಾಣ ಮಾಡಲಿದ್ದು, ನಂತರ ಅದನ್ನು ಕಾರ್ಯಗತಗೊಳಿಸುವ ಕೆಲಸ ಮಾಡುತ್ತದಂತೆ.

ಈ ಡಿಎಲ್‌ಎಲ್‌ ಗುಪ್ತ ಸೂಚನೆ ಅಥವಾ ಶೆಲ್‌ಕೋಡ್ ಅನ್ನು ಎನ್‌ಕ್ರಿಪ್ಟ್ ಮಾಡಿದ ಇಂಪೋರ್ಟ್‌ ಕಾರ್ಯಗಳೊಂದಿಗೆ ಕೆಲಸ ಮಾಡಲಿದ್ದು, ಅದರದೇ ಆದ ಸಂಪನ್ಮೂಲ ವಿಭಾಗದಿಂದ ನಿರ್ದಿಷ್ಟ ಫೈಲ್ ಅನ್ನು ಡೀಕ್ರಿಪ್ಟ್ ಮಾಡುವ ಮೂಲಕ, ಇದು ತನ್ನದೇ ರೀತಿಯಲ್ಲಿ ಮೇಲುಗೈ ಸಾಧಿಸುತ್ತದೆ ಎಂದು ತಿಳಿದುಬಂದಿದೆ. ಅಂತಿಮವಾಗಿ ಅದರ ದುರುದ್ದೇಶಪೂರಿತ ಪೇಲೋಡ್ ಅನ್ನು ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗುತ್ತದಂತೆ.

ನೀವು ನಿತ್ಯವೂ ಇಂಟರ್ನೆಟ್‌ ಬಳಕೆ ಮಾಡುತ್ತೀರಾ?ಹಾಗಿದ್ರೆ ಇರಲಿ ಈ ಬಗ್ಗೆ ಎಚ್ಚರ!

ಲೋಕಿಬಾಟ್ ಮಾಲ್ವೇರ್ ಸ್ಟ್ರೈನ್: ಮೂರನೇ ಮಾಲ್‌ವೇರ್‌ ಲೋಕಿಬಾಟ್ ವಿತರಿಸಿದ ಸರಕು ಹಡಗು ಕಂಪನಿಗಳನ್ನು ಗುರಿಯಾಗಿಟ್ಟುಕೊಂಡು ಫಿಶಿಂಗ್ ಕೆಲಸವನ್ನು ಮಾಡುತ್ತದಂತೆ.
ಇದು ಮಾಹಿತಿ ಕದಿಯುವ ಮಾಲ್‌ವೇರ್ ಆಗಿದ್ದು, ಇದನ್ನು ಮೊದಲು 2016 ರಲ್ಲಿ ಪತ್ತೆ ಮಾಡಲಾಗಿತ್ತು. ಬ್ರೌಸರ್‌ಗಳು ಮತ್ತು ಎಫ್‌ಟಿಪಿ ಕ್ಲೈಂಟ್‌ಗಳು ಸೇರಿದಂತೆ ವಿವಿಧ ಆಪ್‌ಗಳಿಂದ ಸಹಿಗಳನ್ನು ಕದಿಯಲು ಲೋಕಿಬಾಟ್ ಅನ್ನು ರಚಿಸಲಾಗಿದೆ.

ಈ ಲೋಕಿಬಾಟ್ ಇಮೇಲ್‌ಗಳು ಎಕ್ಸೆಲ್ ಡಾಕ್ಯುಮೆಂಟ್ ಲಗತ್ತನ್ನು ಹೊಂದಿದ್ದು, ಇದು ಮ್ಯಾಕ್ರೋಗಳನ್ನು ಸಕ್ರಿಯಗೊಳಿಸಲು ಬಳಕೆದಾರರನ್ನು ಪ್ರೇರೇಪಿಸಲಿದೆ. ಈ ಮೂಲಕ ಆಕ್ರಮಣಕಾರರು ಮೈಕ್ರೋಸಾಫ್ಟ್ ಆಫೀಸ್‌ನಲ್ಲಿ ಕಂಡುಬರುವ ದುರ್ಬಲತೆಯನ್ನು (CVE-2017-0199) ದುರ್ಬಳಕೆ ಮಾಡಿಕೊಳ್ಳಲು ಈ ಮೂಲಕ ಮುಂದಾಗಲಿದ್ದಾರಂತೆ.

ಈ ರೀತಿಯ ಮಾಲ್‌ವೇರ್‌ಗಳ ಸಮಸ್ಯೆಗಳಿಂದ ಎಚ್ಚೆತ್ತುಕೊಳ್ಳುವುದು ಅನಿವಾರ್ಯ ಆಗಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ, ಸಾಫ್ಟ್‌ವೇರ್ ಅನ್ನು ನವೀಕರಿಸಿ, ಇಮೇಲ್‌ನೊಂದಿಗೆ ಎಚ್ಚರಿಕೆಯಿಂದ ವ್ಯವಹಾರ ಮಾಡಿ, ಏನನ್ನೇ ಡೌನ್‌ಲೋಡ್‌ ಮಾಡಿದರೂ ಸಹ ಜಾಗರೂಕರಾಗಿರಿ, ಫೈರ್‌ವಾಲ್ ಅನ್ನು ಸಕ್ರಿಯಗೊಳಿಸಿ ಹಾಗೂ ಬಲವಾದ ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಿ.ಇದರೊಂದಿಗೆ ನಿಮ್ಮ ಡೇಟಾವನ್ನು ಆಗಾಗ್ಗೆ ಬ್ಯಾಕಪ್ ಮಾಡಿ.

Best Mobiles in India

English summary
Three different malware strains are known to use multiple methods to trap users on the Internet. Kaspersky's report warned that three malware strains, namely DarkGate, Emotet, and LokiBot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+