Home
ಸುದ್ದಿಜಾಲ

ಕೇದಾರನಾಥನ ಸೇವೆಗೆ ಮುಂದಾದ Paytm: ಭಕ್ತಾದಿಗಳಿಗೆ ಇದರಿಂದ ಸಾಕಷ್ಟು ಅನುಕೂಲ!

ಕೇದಾರನಾಥ ದೇವಾಲಯಕ್ಕೆ (Kedarnath Temple) ಒಮ್ಮೆಯಾದರೂ ಹೋಗಿ ಬರಬೇಕು ಎನ್ನುವ ಅದೆಷ್ಟೋ ಭಕ್ತಾದಿಗಳು ನಮ್ಮ ನಡುವೆ ಇದ್ದಾರೆ. ಈ ನಡುವೆ ಅದೆಷ್ಟೋ ಡಿಜಿಟಲ್‌ ಕ್ರಾಂತಿಯನ್ನು ಆಡಳಿತ ಮಂಡಳಿ ಮಾಡಿದೆ. ಇದರ ಭಾಗವಾಗಿ ಭಕ್ತರು ಎಲ್ಲೇ ಇದ್ದರೂ ಸಹ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ.

ಹೌದು, ಭಾರತ ಡಿಜಿಟಲ್‌ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿರುವುಂತೆಯೇ ಹಲವಾರು ದೇವಾಲಯಗಳು ಸಹ ಈ ಕ್ರಮವನ್ನು ಅನುಸರಿಸುತ್ತಿವೆ. ಅಂದರೆ ದೇವಾಲಯಕ್ಕೆ ಹೋಗಲು ಟಿಕೆಟ್ ಬುಕ್‌ ಮಾಡುವುದು, ದೇವರ ದರ್ಶನಕ್ಕೆ ಸಮಯ ನಿಗದಿ ಇರಬಹುದು ಎಲ್ಲವನ್ನೂ ಇಂದು ಆನ್‌ಲೈನ್‌ನಲ್ಲೇ ಮಾಡಲಾಗುತ್ತದೆ. ಅದರಂತೆ ಹಿಂದೂಗಳ ಪವಿತ್ರ ಸ್ಥಳವಾಗಿ ಗುರುತಿಸಿಕೊಂಡಿರುವ ಕೇದಾರನಾಥ ದೇವಾಲಯದಲ್ಲೂ ವಿಶೇಷ ಬೆಳವಣಿಗೆ ಕಂಡುಬಂದಿದ್ದು, ಈ ಮೂಲಕ ದೇವರಿಗೆ ನೀವಿರುವಲ್ಲಿಯೇ ಕಾಣಿಕೆ ನೀಡಬಹುದು.

ಕೇದಾರನಾಥನ ಸೇವೆಗೆ ಮುಂದಾದ Paytm: ಭಕ್ತಾದಿಗಳಿಗೆ ಇದರಿಂದ ಸಾಕಷ್ಟು ಅನುಕೂಲ!

ದೇವರ ಸೇವೆಗೆ ಬಂದ ಪೇಟಿಎಮ್‌: ಪೇಟಿಎಮ್‌ ಸೂಪರ್ ಅಪ್ಲಿಕೇಶನ್ (Paytm) ಮೂಲಕ ಭಾರತದಾದ್ಯಂತ ಭಕ್ತರು ಇನ್ಮುಂದೆ ತಮ್ಮ ಮನೆಯಿಂದಲೇ ಉತ್ತರಾಖಂಡ ಜಿಲ್ಲೆಯ ರುದ್ರಪ್ರಯಾಗದಲ್ಲಿರುವ ದೇವಾಲಯಕ್ಕೆ ದೇಣಿಗೆ ನೀಡಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಅಷ್ಟೇ ಅಲ್ಲ ದರ್ಶನಕ್ಕೆ ಬರುವ ಎಲ್ಲಾ ಭಕ್ತರೂ ಸಹ ಪೇಟಿಎಮ್‌ ಬಳಕೆ ಮಾಡಿಕೊಂಡು ತಮ್ಮ ಹರಕೆ ಪೂರೈಕೆ ಮಾಡಿಕೊಳ್ಳಬಹುದಾಗಿದೆ.

ಈ ಸಂಬಂಧ ಪೇಟಿಎಮ್‌ ವಕ್ತಾರರು ಮಾಹಿತಿ ನೀಡಿದ್ದು, ಭಾರತದಲ್ಲಿ ಕ್ಯೂಆರ್‌ ಮತ್ತು ಮೊಬೈಲ್ ಪಾವತಿಗಳ ಪ್ರವರ್ತಕರಾಗಿ ನಾವು ಕೇದಾರನಾಥ ದೇವಾಲಯದ ಬಾಗಿಲುಗಳಲ್ಲಿ ಡಿಜಿಟಲ್ ದೇಣಿಗೆಗಳನ್ನು ಸಕ್ರಿಯಗೊಳಿಸಿದ್ದೇವೆ. ಅಲ್ಲಿ ಭಕ್ತರು ದೇವಾಲಯದಲ್ಲಿ ಪೇಟಿಎಮ್‌ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅವರ ದೇಣಿಗೆಯನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೇದಾರನಾಥನ ಸೇವೆಗೆ ಮುಂದಾದ Paytm: ಭಕ್ತಾದಿಗಳಿಗೆ ಇದರಿಂದ ಸಾಕಷ್ಟು ಅನುಕೂಲ!

ಇನ್ನು ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಪೇಟಿಎಮ್‌ ಕ್ಯೂಆರ್‌ ಕೋಡ್ ಅನ್ನು ಸುಲಭವಾಗಿ ಸ್ಕ್ಯಾನ್ ಮಾಡುವ ಮೂಲಕ ಹಾಗೂ ಪೇಟಿಎಮ್‌ ಯುಪಿಐ ಮೂಲಕ ಪೇಟಿಎಮ್‌ ವಾಲೆಟ್‌, ಪೇಟಿಎಮ್‌ ಯುಪಿಐ ಲೈಟ್‌, ಪೇಟಿಎಮ್‌ ಪೋಸ್ಟ್‌ಪೇಯ್ಡ್ ಮತ್ತು ಇನ್ನೂ ಹೆಚ್ಚಿನ ಇತರೆ ಪಾವತಿ ವಿಧಾನಗಳ ಮೂಲಕ ಎಷ್ಟು ಬೇಕಾದರೂ ಹಣ ಪಾವತಿ ಮಾಡಬಹುದು ಎಂದು ಹೇಳಿದ್ದಾರೆ.

ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಅತ್ಯಂತ ಸಮಗ್ರ ಪಾವತಿ ಸೇವೆಗಳನ್ನು ನೀಡುವ ಭಾರತದ ಪಾವತಿ ಸೂಪರ್ ಪೇಟಿಎಮ್‌ ಆಪ್‌ ಇದಾಗಿದ್ದು. ಭಾರತದಲ್ಲಿ ಮೊಬೈಲ್ ಕ್ಯೂಆರ್ ಪಾವತಿ ಕ್ರಾಂತಿಯ ಪ್ರವರ್ತಕನಾಗಿ ಗುರುತಿಸಿಕೊಂಡಿದೆ. ಈ ಮೂಲಕ ತಂತ್ರಜ್ಞಾನ-ನೇತೃತ್ವದ ಹಣಕಾಸು ಸೇವೆಗಳ ಮೂಲಕ ಅರ್ಧ ಶತಕೋಟಿ ಭಾರತೀಯರನ್ನು ಮುಖ್ಯವಾಹಿನಿಯ ಆರ್ಥಿಕತೆಗೆ ತರುವುದು ಇದರ ಉದ್ದೇಶವಾಗಿದೆ.

ಇದರ ಹೊರತಾಗಿಯೂ ನೀವು ಆನ್‌ಲೈನ್‌ನಲ್ಲೇ ಪೂಜೆ ಪುನಸ್ಕಾರಗಳನ್ನು ಸಹ ಮಾಡಬಹುದಾಗಿದೆ. ಇದಕ್ಕಾಗಿ ನೀವು https://badrinath-kedarnath.gov.in/online-services/book-puja-online/Book_Pooja_Online.aspx# ಲಿಂಕ್‌ ಬಳಕೆ ಮಾಡಬಹುದು. ಇದರಲ್ಲಿ ಯಾವೆಲ್ಲಾ ಪೂಜೆಗಳಿಗೆ ಎಷ್ಟು ಪಾವತಿ ಮಾಡಬೇಕು. ಪ್ರಮುಖ ಪೂಜೆಗಳು ಯಾವೆಲ್ಲಾ ಸಮಯದಲ್ಲಿ ಜರುಗುತ್ತವೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಈ ಪೋರ್ಟಲ್‌ನಲ್ಲಿ ಏನೆಲ್ಲಾ ಸೇವೆ ಲಭ್ಯ? : ಮೇಲೆ ತಿಳಿಸಿದ ಪ್ರಮುಖ ಸೇವೆಯ ಹೊರತಾಗಿ ಭಕ್ತರು ಈ ಮೂಲಕವೂ ಸಹ ದೇಣಿಗೆ ನೀಡಬಹುದು, ವಾಹನಗಳನ್ನು ಬುಕಿಂಗ್‌ ಮಾಡಬಹುದು. ಎಲ್ಲಕ್ಕಿಂತ ಮಿಗಿಲಾಗಿ ಹೆಲಿಕಾಪ್ಟರ್‌ ಬುಕಿಂಗ್‌ ಮಾಡುವ ಅವಕಾಶ ಸಹ ಕಲ್ಪಿಸಲಾಗಿದೆ. ಇದರೊಂದಿಗೆ ನೀವು ಅಲ್ಲಿಗೆ ತೆರಳಿದಾಗ ಎಲ್ಲಿ ಉಳಿದುಕೊಳ್ಳಬೇಕು, ಎಷ್ಟು ಹಣ ಪಾವತಿ ಮಾಡಬೇಕು ಎಂಬ ಪ್ರಮುಖ ಮಾಹಿತಿಯನ್ನು ಈ ಪೋರ್ಟಲ್‌ ಮೂಲಕ ತಿಳಿದುಕೊಳ್ಳಬಹುದು.

ಕೇದಾರನಾಥನ ಸೇವೆಗೆ ಮುಂದಾದ Paytm: ಭಕ್ತಾದಿಗಳಿಗೆ ಇದರಿಂದ ಸಾಕಷ್ಟು ಅನುಕೂಲ!

ಕೇದಾರನಾಥ ದೇವಾಲಯವು ಉತ್ತರ ಭಾರತದ ಪವಿತ್ರ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದ್ದು, ಇದು ಸಮುದ್ರ ಮಟ್ಟದಿಂದ 3,584 ಮೀಟರ್ ಎತ್ತರದಲ್ಲಿ ಮಂದಾಕಿನಿ ನದಿಯ ದಡದಲ್ಲಿದೆ. ಈ ಪ್ರದೇಶದ ಐತಿಹಾಸಿಕ ಹೆಸರು ಕೇದಾರ ಖಂಡ. ಕೇದಾರನಾಥ ದೇವಾಲಯವು ಉತ್ತರಾಖಂಡದ ಚಾರ್ ಧಾಮ್ಸ್ ಮತ್ತು ಪಂಚ ಕೇದಾರದ ಒಂದು ಭಾಗವಾಗಿದ್ದು, ಭಾರತದ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಇದು ಒಂದಾಗಿದೆ.

Best Mobiles in India

English summary
Through the Paytm Super App, devotees from all across India may also donate to the Kedarnath Temple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+