Home
ಸುದ್ದಿಜಾಲ

ಹೊಸ ಗೇಮಿಂಗ್ ಮಾನಿಟರ್ ಖರೀದಿಸಲು ಮುಂದಾಗಿದ್ರೆ ಈ ಕಡೆ ಒಮ್ಮೆ ನೋಡಿ!

ಭಾರತದಲ್ಲಿ ಗೇಮಿಂಗ್‌ ಮಾರುಕಟ್ಟೆ (Gaming market) ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಅದರಂತೆ ಗೇಮಿಂಗ್‌ ಉದ್ದೇಶಗಳಿಗಾಗಿಯೇ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ (Smartphone, SmartTV) ಸೇರಿದಂತೆ ಅನೇಕ ಡಿವೈಸ್‌ಗಳನ್ನು ಅನಾವರಣ ಮಾಡಿಕೊಂಡು ಬರಲಾಗುತ್ತಿದೆ. ಅವುಗಳ ಸಾಲಿನಲ್ಲಿ ಮಾನಿಟರ್‌ (Monitor) ಸಹ ಪ್ರಮುಖವಾದುದು. ಈ ಮೂಲಕ ಗೇಮರ್‌ಗಳು ನೈಜ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, ಗೇಮಿಂಗ್‌ ಉದ್ಯಮ (Gaming industry) ಈಗ ಲಾಭದಾಯಕವಾಗಿದ್ದು, ಈ ಕಾರಣಕ್ಕೆ ಹೊಸ ಹೊಸ ಮಾನಿಟರ್‌ಗಳು ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡುತ್ತಿರುತ್ತವೆ. ಅದರಲ್ಲೂ ನೀವೀಗ ಹೊಸ ಗೇಮಿಂಗ್ ಮಾನಿಟರ್ ಅನ್ನು ಖರೀದಿ ಮಾಡುವಾಗ ಸಾಧ್ಯವಾದಷ್ಟು ಉತ್ತಮ ಗೇಮಿಂಗ್ ಅನುಭವ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಪ್ರಮುಖ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಆ ವಿಷಯಗಳು ಏನೇನು ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ ನೋಡಿ.

ಹೊಸ ಗೇಮಿಂಗ್ ಮಾನಿಟರ್ ಖರೀದಿಸಲು ಮುಂದಾಗಿದ್ರೆ ಈ ಕಡೆ ಒಮ್ಮೆ ನೋಡಿ!

ಡಿಸ್‌ಪ್ಲೇ ಪ್ಯಾನಲ್‌ ಟೆಕ್ನಾಲಜಿ: ಗೇಮಿಂಗ್ ಮಾನಿಟರ್‌ಗಳಲ್ಲಿ ವಿವಿಧ ರೀತಿಯ ಡಿಸ್‌ಪ್ಲೇ ಬಳಕೆ ಮಾಡಲಾಗುತ್ತದೆ. ಕೆಲವು ವೇಗದ ರಿಫ್ರೆಶ್ ರೇಟ್‌ ಹೊಂದಿದ್ದರೆ, ಇನ್ನೂ ಕೆಲವು ಉತ್ತಮ ಇನ್‌ಪುಟ್ ಪ್ರತಿಕ್ರಿಯೆಯನ್ನು ನೀಡುತ್ತದೆ. ಇದರೊಂದಿಗೆ ಇನ್ನೂ ಕೆಲವು ಉತ್ತಮ ಬಣ್ಣಗಳು ಮತ್ತು ವಿವರಗಳನ್ನು ನೀಡುತ್ತದೆ. ಆದ್ದರಿಂದ, ಹೊಸ ಗೇಮಿಂಗ್ ಮಾನಿಟರ್ ಅನ್ನು ಖರೀದಿ ಮಾಡುವಾಗ ಸರಿಯಾದ ಡಿಸ್‌ಪ್ಲೇ ಪ್ಯಾನಲ್ ಅನ್ನು ಆಯ್ಕೆ ಅಗತ್ಯವಾಗಿದೆ. ಇದರಲ್ಲೂ ಕೆಲವು ವಿಧಗಳಿದ್ದು, ಅವುಗಳನ್ನು ಗಮನಿಸೋಣ ಬನ್ನಿ.

ಟಿಎನ್‌ ಡಿಸ್‌ಪ್ಲೇ (ಟ್ವಿಸ್ಟೆಡ್ ನೆಮ್ಯಾಟಿಕ್): ಈ ಟಿಎನ್‌ ಡಿಸ್‌ಪ್ಲೇಗಳು ವೇಗದ ಪ್ರತಿಕ್ರಿಯೆ ಸಮಯಗಳು ಮತ್ತು ಹೆಚ್ಚಿನ ರಿಫ್ರೆಶ್ ರೇಟ್‌ ಆಯ್ಕೆಯನ್ನು ನೀಡುತ್ತದೆ. ಇದು ಉತ್ತಮ ಗೇಮರ್‌ಗಳಿಗೆ ಸೂಕ್ತ ಆಯ್ಕೆ ಆಗಿದೆ ಆದಾಗ್ಯೂ, ಇತರ ಪ್ಯಾನಲ್ ಪ್ರಕಾರಗಳಿಗೆ ಹೋಲಿಸಿದರೆ ಬಣ್ಣ ಪುನರುತ್ಪಾದನೆ ಮತ್ತು ವೀಕ್ಷಣೆ ಕೋನಗಳು ಅಷ್ಟು ಉತ್ತಮವಾಗಿಲ್ಲ.

ಐಪಿಎಸ್‌ ಡಿಸ್‌ಪ್ಲೇ (ಇನ್-ಪ್ಲೇನ್ ಸ್ವಿಚಿಂಗ್): ಈ ಡಿಸ್‌ಪ್ಲೇಯನ್ನು ಟಿಎನ್‌ ಪ್ಯಾನೆಲ್‌ಗಳಿಗೆ ಹೋಲಿಕೆ ಮಾಡಿಕೊಂಡರೆ ಉತ್ತಮ ಬಣ್ಣದ ನಿಖರತೆ ಮತ್ತು ವಿಶಾಲವಾದ ವೀಕ್ಷಣಾ ಕೋನಗಳನ್ನು ನೀಡುವ ಸಾಮರ್ಥ್ಯ ಪಡೆದುಕೊಂಡಿದೆ. ಇದರಲ್ಲೂ ಕೊಂಚ ಸಮಸ್ಯೆ ಇದ್ದು, ಸ್ವಲ್ಪ ನಿಧಾನವಾದ ಪ್ರತಿಕ್ರಿಯೆ ಸಮಯ ಹೊಂದಿದ್ದು, ಹೆಚ್ಚಿನ ವೆಚ್ಚವನ್ನೂ ಸಹ ಪಾವತಿ ಮಾಡಬೇಕು.

ವಿಎ (ವರ್ಟಿಕಲ್ ಅಲೈನ್‌ಮೆಂಟ್): ಈ ವಿಎ ಡಿಸ್‌ಪ್ಲೇ ಟಿಎನ್‌ ಮತ್ತು ಐಪಿಎಸ್‌ ಪ್ಯಾನೆಲ್‌ಗಳ ನಡುವೆ ಸಮತೋಲನವನ್ನು ನೀಡುವ ಸಾಮರ್ಥ್ಯ ಪಡೆದಿದೆ. ಇದು ಉತ್ತಮ ಬಣ್ಣ ಉತ್ಪತ್ತಿ ಮತ್ತು ಕಾಂಟ್ರಾಸ್ಟ್ ಅನುಪಾತಗಳೊಂದಿಗೆ ಕೆಲಸ ಮಾಡುತ್ತದೆ. ಹಾಗೆಯೇ ವಿಎ ಪ್ಯಾನೆಲ್‌ಗಳು ಟಿಎನ್‌ ಗಿಂತ ಸ್ವಲ್ಪ ನಿಧಾನವಾದ ಪ್ರತಿಕ್ರಿಯೆ ಸಮಯವನ್ನು ಹೊಂದಿದೆ. ಆದರೆ ಆದರೆ ಐಪಿಎಸ್‌ ಗಿಂತ ವೇಗವಾಗಿರುತ್ತದೆ.

ರಿಫ್ರೆಶ್ ರೇಟ್‌ ಮತ್ತು ಪ್ರತಿಕ್ರಿಯೆ ಸಮಯ: ಪ್ಯಾನಲ್‌ ಆಯ್ಕೆಯ ನಂತರ ಕೇಂದ್ರೀಕರಿಸಬೇಕಾದ ವಿಷಯ ಏನೆಂದರೆ ರಿಫ್ರೆಶ್ ರೇಟ್‌. ಇದರಲ್ಲಿ 144Hz ಅಥವಾ 240Hz ನಂತಹ ಹೆಚ್ಚಿನ ರಿಫ್ರೆಶ್ ಸುಗಮವಾದ ಗೇಮ್‌ ಅನುಭವವನ್ನು ನೀಡುತ್ತದೆ. ಇನ್ನು ವೇಗದ ಆಕ್ಷನ್ ದೃಶ್ಯಗಳ ಸಮಯದಲ್ಲಿ ಮಸುಕಾಗುವಿಕೆಯನ್ನು ತಡೆಯಲು ತಮ್ಮ ಪ್ರತಿಕ್ರಿಯೆ ಸಮಯವನ್ನು ನೀಡುವ ಮಾನಿಟರ್‌ ಆಯ್ಕೆ ಮಾಡಿ.

ರೆಸಲ್ಯೂಶನ್ ಮತ್ತು ಡಿಸ್‌ಪ್ಲೇ ಗಾತ್ರ: ಯಾವುದೇ ಮಾನಿಟರ್‌ನ ರೆಸಲ್ಯೂಶನ್ ಗೇಮ್‌ಗಳಲ್ಲಿನ ವಿವರ ಮತ್ತು ತೀಕ್ಷ್ಣತೆಯ ಮಟ್ಟವನ್ನು ನಿರ್ಧಾರ ಮಾಡುತ್ತದೆ. ಸಾಮಾನ್ಯ ರೆಸಲ್ಯೂಶನ್‌ಗಳಲ್ಲಿ ಫುಲ್ ಹೆಚ್‌ಡಿ (1920x1080), ಕ್ವಾಡ್ ಹೆಚ್‌ಡಿ (2560x1440) ಮತ್ತು ಅಲ್ಟ್ರಾ ಹೆಚ್‌ಡಿ ಅಥವಾ 4K (3840x2160) ಸೇರಿವೆ. ನಯವಾದ ಫ್ರೇಮ್ ರೇಟ್‌ಗಳನ್ನು ಪಡೆದುಕೊಳ್ಳಲು ಹೆಚ್ಚಿನ ರೆಸಲ್ಯೂಶನ್‌ಗಳಿಗೆ ಹೆಚ್ಚು ಶಕ್ತಿಶಾಲಿ ಗ್ರಾಫಿಕ್ಸ್ ಕಾರ್ಡ್‌ಗಳು ಸಹ ಬೇಕಾಗುತ್ತವೆ ಎಂಬುದು ತಿಳಿದಿರಲಿ.

ಹೊಸ ಗೇಮಿಂಗ್ ಮಾನಿಟರ್ ಖರೀದಿಸಲು ಮುಂದಾಗಿದ್ರೆ ಈ ಕಡೆ ಒಮ್ಮೆ ನೋಡಿ!

ಅಡಾಪ್ಟಿವ್ ಸಿಂಕ್ ಟೆಕ್ನಾಲಜಿ: AMD ಫ್ರೀಸಿಂಕ್ ಅಥವಾ NVIDIA G-ಸಿಂಕ್‌ ನಂತಹ ಅಡಾಪ್ಟಿವ್ ಸಿಂಕ್ ತಂತ್ರಜ್ಞಾನಗಳು ಜಿಪಿಯುನ ಫ್ರೇಮ್ ರೇಟ್‌ನೊಂದಿಗೆ ಮಾನಿಟರ್‌ನ ರಿಫ್ರೆಶ್ ರೇಟ್‌ ಅನ್ನು ಸಿಂಕ್ರೊನೈಸ್ ಮಾಡುವ ಮೂಲಕ ಡಿಸ್‌ಪ್ಲೇಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕಾಪಾಡುತ್ತದೆ. ನೀವು ಖರೀದಿ ಮಾಡಲು ಮುಂದಾದ ಮಾನಿಟರ್‌ನಲ್ಲಿ ಈ ಟೆಕ್ನಾಲಜಿಯಲ್ಲಿ ಯಾವುದಾದರೂ ಒಂದು ಇರಲಿ.

ಕನೆಕ್ಟಿವಿಟಿ ಹಾಗೂ ಇತರೆ: ಯಾವುದೇ ಮಾನಿಟರ್‌ ಆದರೂ ಸಹ ಅದರಲ್ಲಿನ ಕನೆಕ್ಟಿವಿಟಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಮಾನಿಟರ್‌ನಲ್ಲಿ ಹೆಚ್‌ಡಿಎಮ್‌ಐ, ಡಿಸ್‌ಪ್ಲೇಪೋರ್ಟ್‌, ಯುಎಸ್‌ಬಿ ಪೋರ್ಟ್‌ ಸೇರಿದಂತೆ ಅನೇಕ ಪೋರ್ಟ್‌ಗಳ ಆಯ್ಕೆ ಇದೆಯಾ ಎಂಬುದನ್ನು ತಿಳಿದುಕೊಳ್ಳಿ. ಇದರೊಂದಿಗೆ ಕಣ್ಣಿನ ರಕ್ಷಣೆಗಾಗಿ ಏನೆಲ್ಲಾ ಫೀಚರ್ಸ್‌ ಇದೆ?, ಇನ್‌ಬಿಲ್ಟ್‌ ಸ್ಪೀಕರ್‌ ಆಯ್ಕೆ ಇದೆಯಾ? ಎಂಬುದರ ಕಡೆ ಗಮನಹರಿಸಿ.

Best Mobiles in India

English summary
The gaming industry is now lucrative and because of this new monitors are making a lot of noise in the market. Pay attention to these things especially when you are buying a new gaming monitor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+