Home
ಸುದ್ದಿಜಾಲ

Smartphone: ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಳ್ಳೋರೆ ಗಮನಿಸಿ! ಇದು ಗಂಡಸ್ಥನದ ವಿಚಾರ

ಸ್ಮಾರ್ಟ್‌ಫೋನ್‌ (Smartphone) ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮೂಲಕ ಗ್ರಾಹಕರು ಅವರ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಅಂದರೆ ಫೋನ್‌ ಕೇವಲ ಮೆಸೆಜ್‌ ಹಾಗೂ ಕರೆ ಉದ್ದೇಶಕ್ಕೆ ಮಾತ್ರವಲ್ಲದೆ ಬ್ಯಾಂಕಿಗ್‌ ವ್ಯವಹಾರ ಹಾಗೂ ಪ್ರಮುಖ ಮಾಹಿತಿ ಸ್ಟೋರೇಜ್‌ಗೂ ಅವಕಾಶ ನೀಡುತ್ತದೆ. ಈ ನಡುವೆ ಸ್ಮಾರ್ಟ್‌ಫೋನ್‌ ಬಳಕೆದಾರರು ಶಾಕ್ ಆಗುವ ವರದಿ ಹೊರಬಿದ್ದಿದೆ.

ಹೌದು, ಸ್ಮಾರ್ಟ್‌ಫೋನ್‌ ಬಳಕೆ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಸಮಸ್ಯೆಗಳನ್ನು ಉಂಟು ಮಾಡಲಿದೆ. ಇದಕ್ಕೆ ನಿದರ್ಶನ ಎಂಬಂತೆ ಈಗಾಗಲೇ ಸಾಕಷ್ಟು ವರದಿಗಳು ಜನರನ್ನು ಎಚ್ಚರಿಸುತ್ತಲೇ ಬಂದಿವೆ. ಇದರ ಭಾಗವಾಗಿ ಈಗ ಮಗದೊಮ್ಮೆ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸಂಶೋಧಕರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಪುರುಷರ ಗಂಡಸ್ಥನ ವಿಚಾರದಲ್ಲಿ ಹೇಗೆ ಪ್ರಭಾವ ಬೀರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಳ್ಳೋರೆ ಗಮನಿಸಿ! ಇದು ಗಂಡಸ್ಥನದ ವಿಚಾರ

ಪ್ಯಾಂಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಡುವುದು ಎಷ್ಟು ಸೇಫ್?: ಈ ರೀತಿಯ ಚರ್ಚೆಗಳನ್ನು ನಾವು ಬಹಳ ಸಮಯದಿಂದ ಕೇಳುತ್ತಿದ್ದೇವೆ. ಈ ಅಭ್ಯಾಸ ಹಾನಿಕಾರಕ ಎಂದು ಒಂದು ವರ್ಗ ವಾದಿಸಿದರೆ, ಇದು ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದು ವಾದಿಸುವ ಮತ್ತೊಂದು ವರ್ಗ ನಮ್ಮ ನಡುವೆ ಇದೆ. ಅದಾಗ್ಯೂ ಕೆಲವು ಅಧ್ಯಯನಗಳು ಪುರುಷರಿಗೆ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡಲಿದೆ ಎಂದು ಸೂಚಿಸುತ್ತವೆ.

ಜಿನೀವಾ ವಿಶ್ವವಿದ್ಯಾಲಯ ಮತ್ತು ಸ್ವಿಸ್ ಟ್ರಾಪಿಕಲ್ ಮತ್ತು ಪಬ್ಲಿಕ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಶಾಕಿಂಗ್‌ ಅಂಶ ಹೊರಬಿದ್ದಿದೆ. ಈ ಸಂಶೋಧನೆಗೆ 18 ರಿಂದ 22 ವರ್ಷದೊಳಗಿನ ಒಟ್ಟು 2,886 ಜನರನ್ನು ಮಾಡಲಾಗಿತ್ತು. ಈ ಅಧ್ಯಯನಕ್ಕೆ ಭಾಗಿಯಾದ ಹೆಚ್ಚಿದವರಲ್ಲಿ ವೀರ್ಯಾಣು (sperm) ಉತ್ಪಾದನೆಯಲ್ಲಿ ಇಳಿಕೆಯಾಗಿದೆ ಎಂದು ಈ ಅಧ್ಯಯನವು ಸೂಚಿಸುತ್ತದೆ.

ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಳ್ಳೋರೆ ಗಮನಿಸಿ! ಇದು ಗಂಡಸ್ಥನದ ವಿಚಾರ

ಫೋನ್ ಬಳಕೆಯನ್ನು ಹೊರತುಪಡಿಸಿ ಈ ಬಳಕೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಸಹ ಅಧ್ಯಯನದ ಭಾಗವಾಗಿ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಬಹುಪಾಲು ಜನರು ತಮ್ಮ ಫೋನ್ ಅನ್ನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು ಎಂದು ಉತ್ತರಿಸಿದ್ದಾರೆ. ಇದರಿಂದಾಗಿ ಫೋನ್ ಅನ್ನು ಹೆಚ್ಚು ಹೊತ್ತು ಪ್ಯಾಂಟ್ ಜೇಬಿನಲ್ಲಿ ಇಡುವುದು ಅಪಾಯಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇಷ್ಟೇ ಅಲ್ಲದೆ ಫೋನ್ ಚಾರ್ಜ್ ಆಗುತ್ತಿರುವಾಗ, ಬ್ಲೂಟೂತ್ ಆನ್ ಆಗಿರುವಾಗ ಮತ್ತು ಫೋನ್ ಕಂಪನ ಮೋಡ್‌ನಲ್ಲಿರುವಾಗ ಫೋನ್ ಎರಡು ಪಟ್ಟು ಹೆಚ್ಚು ವಿಕಿರಣವನ್ನು ಹೊರಸೂಸುತ್ತದೆ ಎಂದು ತಿಳಿದುಬಂದಿದೆ. ಪರಿಣಾಮ ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು ಎನ್ನುತ್ತಾರೆ ಸಂಶೋಧಕರು. ಜೊತೆಗೆ ವಾರಕ್ಕೊಮ್ಮೆ ಫೋನ್ ಬಳಕೆ ಮಾಡಿದ ಜನರ ವೀರ್ಯದ ಸಂಖ್ಯೆ 56.5 ಮಿಲಿಯನ್ ಎಂದು ಕಂಡುಬಂದಿದೆ. ದಿನಕ್ಕೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಫೋನ್ ಬಳಸಿದವರ ವೀರ್ಯಾಣುಗಳ ಸಂಖ್ಯೆ 44.5 ಮಿಲಿಯನ್ ಎಂದು ಕಂಡುಕೊಳ್ಳಲಾಗಿದೆ.

ಸಾಂದರ್ಭಿಕ ಫೋನ್ ಬಳಕೆದಾರರಿಗೆ ಹೋಲಿಸಿದರೆ ಸಾಮಾನ್ಯ ಫೋನ್ ಬಳಕೆದಾರರಲ್ಲಿ ವೀರ್ಯಾಣು ಸಂಖ್ಯೆಯಲ್ಲಿ ಸ್ಪಷ್ಟವಾದ ಇಳಿಕೆ ಕಂಡುಬಂದಿದೆ. ಸ್ಮಾರ್ಟ್ ಫೋನ್‌ಗಳ ಅತಿಯಾದ ಬಳಕೆ ಅದರಲ್ಲೂ ಸ್ಮಾರ್ಟ್‌ಫೋನ್‌ಗಳನ್ನು ಪ್ಯಾಂಟ್‌ನ ಜೇಬಿನಲ್ಲಿ ಇಟ್ಟುಕೊಳ್ಳುವುದು ಪುರುಷರ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬುದು ಈ ಅಧ್ಯಯನದಿಂದ ಸ್ಪಷ್ಟವಾಗಿದೆ. ಹಿಂದಿನ ಅನೇಕ ಅಧ್ಯಯನಗಳು ಇದೇ ರೀತಿಯ ಫಲಿತಾಂಶಗಳನ್ನು ನೀಡಿವೆ ಎಂಬುದು ನಿಮಗೆ ತಿಳಿದಿರಲಿ.

ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಳ್ಳೋರೆ ಗಮನಿಸಿ! ಇದು ಗಂಡಸ್ಥನದ ವಿಚಾರ

ಇನ್ನು ಈ ಸಂಶೋಧನೆಯು ಸುಮಾರು 13 ವರ್ಷಗಳನ್ನು ತೆಗೆದುಕೊಳ್ಳುವ ಮೂಲಕ ಪೂರ್ಣಗೊಂಡಿದೆ. ಇದು 2005 ರಲ್ಲಿ ಪ್ರಾರಂಭವಾಗಿತ್ತು ಮತ್ತು 2018 ರಲ್ಲಿ ಕೊನೆಗೊಂಡಿತ್ತು. ಆದರೆ ಈಗ ಫಲಿತಾಂಶ ಹೊರಬಿದ್ದಿದೆ. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯು ವೀರ್ಯಾಣು ಉತ್ಪಾದನೆಯನ್ನು ಕಡಿಮೆ ಮಾಡಬಹುದಾದರೂ, ಇದು ನೇರವಾಗಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದಕ್ಕಾಗಿ ವಿಸ್ತೃತ ಅಧ್ಯಯನ ನಡೆಯಬೇಕು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ಸಾಧ್ಯವಾದರೆ, ನೀವು ಅತ್ಯುತ್ತಮ ಬ್ರಾಂಡ್‌ಗಳ ಫೋನ್‌ಗಳನ್ನು ಬಳಕೆ ಮಾಡುವ ಮೂಲಕ ವಿಕಿರಣದ ಪ್ರಮಾಣವನ್ನು ಕಡಿಮೆ ಮಾಡಬಹುದು. ಆದಾಗ್ಯೂ, ಅವು ಹೊರಸೂಸುವ ವಿಕಿರಣದ ಪ್ರಮಾಣವು ಫೋನ್‌ ಬಳಕೆಯ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಎದುರಿಸಲು ಪರಿಣಾಮಕಾರಿ ಮಾರ್ಗವೆಂದರೆ ಸ್ಮಾರ್ಟ್ ಫೋನ್‌ಗಳ ಬಳಕೆಯನ್ನು ಕಡಿಮೆ ಮಾಡುವುದು. ಅದೇ ಸಮಯದಲ್ಲಿ, ನಿಮ್ಮ ಫೋನ್ ಎಷ್ಟು ವಿಕಿರಣವನ್ನು ಹೊರಸೂಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ.

ಪ್ಯಾಂಟ್ ಜೇಬಿನಲ್ಲಿ ಫೋನ್ ಇಟ್ಟುಕೊಳ್ಳೋರೆ ಗಮನಿಸಿ! ಇದು ಗಂಡಸ್ಥನದ ವಿಚಾರ

ನಿಮ್ಮ ಫೋನ್‌ನ ಡಯಲ್‌ಪ್ಯಾಡ್‌ನಲ್ಲಿ USSD ಕೋಡ್ *#07# ಎಂದು ಡಯಲ್‌ ಮಾಡುವ ಮೂಲಕ ಕಂಡುಕೊಳ್ಳಬಹುದಾಗಿದೆ. ಇದರಿಂದ ಫೋನ್‌ನ SAR ಮೌಲ್ಯವನ್ನು ನೀವು ಸುಲಭವಾಗಿ ತಿಳಿಯಬಹದು. ಈ SAR ಮೌಲ್ಯ 1.6 ಡಬ್ಲ್ಯೂ/ಕೆಜಿ ಆಗಿದೆ. ಇದಕ್ಕಿಂತ ಕಡಿಮೆ ಇದ್ದರೆ ನಿಮ್ಮ ಫೋನ್‌ ಕಡುಮೆ ವಿಕಿರಣ ಹೊರಸೂಸುತ್ತಿದೆ ಎಂದರ್ಥ. ಆದರೆ, ಇದಕ್ಕಿಂತ ಹೆಚ್ಚಿನ ಅಂಕಿ ಕಂಡುಬಂದರೆ ತಕ್ಷಣವೇ ಹೊಸ ಫೋನ್‌ಗೆ ಅಪ್‌ಗ್ರೇಡ್‌ ಆಗಿ. ಪರಿಣಾಮ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.

Best Mobiles in India

English summary
shocking fact came out in a study conducted by researchers from the University of Geneva and the Swiss Institute of Tropical and Public Health. Those who keep their Smartphone in their pants pockets are prone to sperm problems.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+