ಕೇಳು ಆಪ್‌‌: ಕನ್ನಡ ಕಲಿಯಲು ಹೊಸ ಆಂಡ್ರಾಯ್ಡ್‌ ಆಪ್‌

Posted By:

ವ್ಯವಹಾರ ಜ್ಞಾನಕ್ಕಾಗುವಷ್ಟು ಕನ್ನಡ ಕಲಿಯಬೇಕೆಂಬ ಆಸೆಪಡುತ್ತಿದ್ದವರಿಗೆ ಗುಡ್‌ನ್ಯೂಸ್‌. ನಿಮಗಾಗಿ ಒಂದು ಕನ್ನಡ ಆಂಡ್ರಾಯ್ಡ್ ಆಪ್‌ ತಯಾರಾಗಿದೆ.

ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಹರೀಶ್‌ ಎಂಬವರು 'ಕೇಳು' ಹೆಸರಿನ ಹೊಸ ಆಂಡ್ರಾಯ್ಡ್ ಆಪ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆಪ್‌ 2.9 ಎಂಬಿ ಗಾತ್ರವನ್ನು ಹೊಂದಿದ್ದು,ಆಂಡ್ರಾಯ್ಡ್‌ 2.2 ನಂತರ ಆವೃತ್ತಿಯ ಆಂಡ್ರಾಯ್ಡ್ ಸಾಧನಗಳನ್ನು ಹೊಂದಿರುವ ಬಳಕೆದಾರರು ಈ ಆಪ್‌ನ್ನು ಗೂಗಲ್‌ ಪ್ಲೇ ಸ್ಟೋರ್‌‌ನಿಂದ ಉಚಿತವಾಗಿ ಡೌನ್‌ ಲೋಡ್‌ ಮಾಡಿ ಕನ್ನಡ ಕಲಿಯಬಹುದು.

 ಕೇಳು ಆಪ್‌‌: ಕನ್ನಡ ಕಲಿಯಲು ಹೊಸ ಆಂಡ್ರಾಯ್ಡ್‌ ಆಪ್‌

ಕೇಳು ಆಪ್‌ನಲ್ಲಿ ಏನಿದೆ?
ಕನ್ನಡದಲ್ಲಿ ವ್ಯವಹಾರ ಜ್ಞಾನ ಕಲಿಯಬೇಕು ಎಂದು ಮನಸ್ಸುಮಾಡಿದವರಿಗೆ ಉತ್ತಮ ಆಪ್‌ ಇದಾಗಿದ್ದು ಇಂಗ್ಲಿಷ್‌‌ ವಾಕ್ಯಗಳನ್ನು ಇಂಗ್ಷಿಷ್‌‌ ಪದಗಳಲ್ಲೇ(ಕಂಗ್ಷಿಷ್‌‌)ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಕನ್ನಡ ಭಾಷಾಂತರದ ಜೊತೆಗೆ ಈ ವಾಕ್ಯಗಳನ್ನು ಹೇಗೆ ಉಚ್ಛಾರಣೆ ಮಾಡವುದು ಎಂಬುದನ್ನು ತಿಳಿಯಲು ಅಲ್ಲೇ ಆ ವಾಕ್ಯಗಳ ಕನ್ನಡ ಉಚ್ಛಾರಣೆಯ ಆಡಿಯೋ ಸಹ ನೀಡಲಾಗಿದ್ದು ಸ್ಪಷ್ಟವಾಗಿ ಕೇಳಬಹುದಾಗಿದೆ.

ಇದರಲ್ಲಿರುವ ಎಲ್ಲಾ ಆಡಿಯೋವನ್ನು ಆಫ್‌‌ಲೈನ್‌ನಲ್ಲಿ ಕೇಳಬೇಕಿದ್ದಲ್ಲಿ ಮೊದಲ ಸಲ ಎಲ್ಲಾ ಆಡಿಯೋವನ್ನು ಒಮ್ಮೆ ಇಂಟರ್‌ನೆಟ್‌ ಮೂಲಕ ಪ್ಲೇ ಮಾಡಬೇಕಾಗುತ್ತದೆ. ಒಮ್ಮೆ ಪ್ಲೇ ಆದ ಬಳಿಕ ಮತ್ತೇ ಆಡಿಯೋ ಪ್ಲೇ ಮಾಡಲು ಇಂಟರ್‌ನೆಟ್‌ ಸಂಪರ್ಕ‌ ಬೇಕಾಗಿಲ್ಲ.

ಆಪ್‌ನಲ್ಲಿ ಶುಭಾಶಯ ವಿನಿಮಯ,ರಿಕ್ಷಾ ಪ್ರಯಾಣ,ಖರೀದಿ ಸೇರಿದಂತೆ 17 ವಿವಿಧ ಸಂದರ್ಭದಲ್ಲಿ ಕನ್ನಡ ಮಾತನಾಡುವ ಬಗೆಯನ್ನು ವಿವರಿಸಲಾಗಿದ್ದು, ನಿಮಗೆ ಇಷ್ಟವಾದ ವಾಕ್ಯವನ್ನು ಫೇವರೇಟ್‌ ವಿಭಾಗಕ್ಕೆ ಸೇರಿಸುವ ಮೂಲಕವೂ ಕಲಿಯಬಹುದಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ ಲೋಡ್‌ ಮಾಡಲು ಕ್ಲಿಕ್‌ ಮಾಡಿ:play.google.com/store/

ಇದನ್ನೂ ಓದಿ: ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot