Home
ಸುದ್ದಿಜಾಲ

ಗೂಗಲ್ ಪಿಕ್ಸೆಲ್ 8 ಸರಣಿಯ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಫೀಚರ್ಸ್‌ ಲೀಕ್‌!

ಗೂಗಲ್‌ ಪಿಕ್ಸೆಲ್‌ ಫೋನ್‌ಗಳು (Google Pixel Phone) ವಿಶೇಷವಾದ ಫೀಚರ್ಸ್‌ ಮೂಲಕ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಈ ನಡುವೆ ಮುಂದಿನ ಸರಣಿಯ ಅಂದರೆ ಗೂಗಲ್ ಪಿಕ್ಸೆಲ್ 8 ಸರಣಿಯ (google pixel 8 series) ಫೋನ್‌ಗಳ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗಿವೆ. ಈ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ಬಿರುಗಾಳಿ ಏಳುವುದು ಪಕ್ಕಾ ಎನ್ನಲಾಗಿದೆ.

ಹೌದು, ಟೆಕ್ ದೈತ್ಯ ಗೂಗಲ್‌ನಿಂದ ಬಹಳ ದಿನಗಳಿಂದ ಕಾಯುತ್ತಿರುವ ಗೂಗಲ್ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ (Google Pixel 8 and Pixel 8 Pro) ಸ್ಮಾರ್ಟ್‌ಫೋನ್‌ಗಳ ಕುರಿತು ಕುತೂಹಲಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಎರಡೂ ಫೋನ್‌ಗಳನ್ನು ಅಕ್ಟೋಬರ್ 4 ರಂದು ಮೇಡ್ ಬೈ ಗೂಗಲ್ ಈವೆಂಟ್‌ನಲ್ಲಿ ಲಾಂಚ್‌ ಮಾಡಲಾಗುತ್ತದೆ. ಈ ನಡುವೆ ಈ ಫೋನ್‌ಗಳ ಬಣ್ಣಗಳ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಲೀಕ್‌ ಮಾಹಿತಿ ಈ ಫೋನ್‌ಗಳ ಬಗ್ಗೆ ಏನು ಹೇಳುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.

ಗೂಗಲ್ ಪಿಕ್ಸೆಲ್ 8 ಸರಣಿಯ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಫೀಚರ್ಸ್‌ ಲೀಕ್‌!

ಗೂಗಲ್ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ: ಈ ಎರಡೂ ಫೋನ್‌ಗಳು ಮೂರು ಬಣ್ಣ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿವೆ ಎಂದು ತಿಳಿದುಬಂದಿದೆ. ಅಂದರೆ ಪಿಕ್ಸೆಲ್ 8 ಬ್ಲ್ಯಾಕ್ ಅಬ್ಸಿಡಿಯನ್, ಗ್ರೇ ಮತ್ತು ಪಿಯೋನಿ ರೋಸ್ ಬಣ್ಣಗಳಲ್ಲಿ ಕಾಣಿಸಿಕೊಂಡರೆ, ಪಿಕ್ಸೆಲ್ 8 ಪ್ರೊ ಬ್ಲ್ಯಾಕ್ ಅಬ್ಸಿಡಿಯನ್, ಪಿಂಗಾಣಿ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಆದರೆ ಗೂಗಲ್‌ ಮಾತ್ರ ಇದನ್ನು ದೃಢಪಡಿಸಿಲ್ಲ.

ಇನ್ನು ಪಿಕ್ಸೆಲ್ 8 ಫೋನ್ ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು. ಇದು ವಿಶೇಷ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ, ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್ ಸಹ ವಿಭಿನ್ನ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಪಡೆಯಲಿದ್ದು, ಮತ್ತು ಹಿಂಭಾಗದಲ್ಲಿ ಎಲ್ಇಡಿ ಫ್ಲ್ಯಾಶ್‌ಲೈಟ್‌ ಆಯ್ಕೆಯೊಂದಿಗೆ ಟ್ರಿಪಲ್‌ ಕ್ಯಾಮೆರಾ ಸೆನ್ಸರ್‌ ಹೊಂದಿರಲಿದೆಯಂತೆ.

ಉಳಿದಂತೆ ಗೂಗಲ್ ಪಿಕ್ಸೆಲ್ 8 ಸರಣಿಯ ಫೋನ್ ಇನ್-ಹೌಸ್ ಟೆನ್ಸರ್ G3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಇದು 9 ಕೋರ್ CPU ಬಲ ಹೊಂದಿದೆ ಎಂದು ತೋರುತ್ತದೆ. ಜೊತೆಗೆ ಆಂಡ್ರಾಯ್ಡ್ 14 ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ವರದಿಯಾಗಿದ್ದು, ಈ ಎರಡೂ ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಷ್ಟೇ ಅಲ್ಲದೆ ಪಿಕ್ಸೆಲ್‌ 8 ಪ್ರೊ ಫೋನ್ 27W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,950mAh ಬ್ಯಾಟರಿಯನ್ನು ಹೊಂದಿದ್ದರೆ, ಇದೇ ಪಿಕ್ಸೆಲ್‌ 8 ಫೋನ್ 24W ವೈರ್ಡ್ ಚಾರ್ಜಿಂಗ್ ಮತ್ತು 12W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,485mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ ಸಿಗಲಿದೆ ಎಂದು ನಿರೀಕ್ಷೆ ಮಾಡಬಹುದಾಗಿದೆ.

ಇನ್ನು ಈ ಫೋನ್‌ಗಳ ಬೆಲೆ ಬಗ್ಗೆ ಊಹಿಸುವುದಾದರೆ ಪಿಕ್ಸೆಲ್‌ 8 ಫೋನ್‌ನ 128GB ವೇರಿಯಂಟ್‌ 78,000 ರೂ. ಹೊಂದಿರಲಿದೆ ಎನ್ನಲಾಗಿದ್ದು, 256GB ವೇರಿಯಂಟ್‌ ಸುಮಾರು 85,200ರೂ.ಗಳ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ. ಜೊತೆಗೆ ಗೂಗಲ್‌ ಪಿಕ್ಸೆಲ್‌ 8 ಪ್ರೊ ಫೋನ್‌ನ 128GB ಸ್ಟೋರೇಜ್ ವೇರಿಯಂಟ್‌ಗೆ 1,10,900 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು. 256GB ವೇರಿಯಂಟ್‌ 1,17,500 ರೂ.ಗಳು ಹಾಗೂ 512GB ಸ್ಟೋರೇಜ್ ವೇರಿಯಂಟ್‌ 1,31,100 ರೂ.ಗಳ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ.

ಗೂಗಲ್ ಪಿಕ್ಸೆಲ್ 8 ಸರಣಿಯ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಫೀಚರ್ಸ್‌ ಲೀಕ್‌!

ಈ ಫೋನ್‌ ಅನ್ನು ನ್ಯೂಯಾರ್ಕ್‌ನಲ್ಲಿ ಜರುಗುವ ಗೂಗಲ್ ಮೇಡ್ ಬೈ ಈವೆಂಟ್ ನಲ್ಲಿ ಲಾಂಚ್ ಮಾಡುತ್ತಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳ ಪ್ರಿ-ಬುಕಿಂಗ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ ಎಂದು ಗೂಗಲ್ ಈಗಾಗಲೇ ಬಹಿರಂಗಪಡಿಸಿದೆ.

Best Mobiles in India

English summary
The long awaited interesting information about Google Pixel 8 and Pixel 8 Pro smartphones has arrived from the tech giant Google.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+