Keypad phone: ದೀರ್ಘ ಬಾಳಿಕೆ ಬರುವ ಅತ್ಯುತ್ತಮ ಕೀಪ್ಯಾಡ್ ಫೋನ್‌ಗಳಿವು! ಆಫರ್ ಬೆಲೆಗೆ ಲಭ್ಯ
ಇಂದು ಸ್ಮಾರ್ಟ್‌ಫೋನ್‌ಗಳಿಗೆ (smartphones) ಎಷ್ಟರ ಮಟ್ಟಿಗೆ ಬೇಡಿಕೆ ಇದೆಯೋ ಅಷ್ಟೇ ಪ್ರಮಾಣದಲ್ಲಿ ಫೀಚರ್ ಫೋನ್‌ಗಳಿಗೂ ಅಥವಾ ಕೀಪ್ಯಾಡ್ ಫೋನ್‌ಗಳಿಗೂ (Keypad phone) ಸಖತ್ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಲಾಂಚ್ ಆಗುತ್ತಿರುವ ಫೀಚರ್ ಫೋನ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಇರುವ ಕೆಲವು ಫೀಚರ್ಸ್‌ನೊಂದಿಗೆ ಬಹಳ ಸದ್ದು ಮಾಡುತ್ತಿವೆ.
ಹೌದು, ಫೀಚರ್ ಫೋನ್‌ಗಳಿಗೆ ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಗ್ರಾಮೀಣ ಭಾಗದಲ್ಲಿ ಹಾಗೂ ವಿದ್ಯುತ್ ಸಮಸ್ಯೆ ಇರುವ ಪ್ರದೇಶಗಳಲ್ಲಿ ಇವುಗಳನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅದರಂತೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಈ ಫೋನ್‌ಗಳಿಗೆ ಉತ್ತಮ ಆಫರ್ ನೀಡುತ್ತಿವೆ. ಹಾಗಿದ್ರೆ, ಯಾವೆಲ್ಲಾ ಫೀಚರ್ ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಹೆಚ್ಚು ಸೇಲ್ ಆಗುತ್ತಿವೆ. ಅದರಲ್ಲೂ ಆಫರ್ ಬೆಲೆಯಲ್ಲಿ ಲಭ್ಯ ಇವೆ ಅನ್ನೋ ಲಿಸ್ಟ್ ಇಲ್ಲಿದೆ ನೋಡಿ.

ನೋಕಿಯಾ 105: ಈ ಫೋನ್ (Nokia 105) ಸಿಂಗಲ್ ಸಿಮ್, ವೈರ್‌ಲೆಸ್ ಎಫ್ ಎಮ್ ರೇಡಿಯೊದೊಂದಿಗೆ ಕಾಣಿಸಿಕೊಂಡಿದ್ದು, 32 MB RAM ಹಾಗೂ 32 MB ROM ಸ್ಟೋರೇಜ್ ಆಯ್ಕೆಯೊಂದಿಗೆ 1.77 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ 1000 mAh ಸಾಮರ್ಥ್ಯದ ಬ್ಯಾಟರಿ, SC6531E ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 24% ರಿಯಾಯಿತಿಯೊಂದಿಗೆ ನೀವು ಇದನ್ನು 1,209ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಮೈಕ್ರೋಮ್ಯಾಕ್ಸ್ X413: ಸ್ಮಾರ್ಟ್‌ಫೋನ್ (Micromax X413) ವಿಭಾಗದಲ್ಲಿ ಸದ್ದು ಮಾಡದೆ ಇದ್ದರೂ ಸಹ ಫೀಚರ್ ಫೋನ್‌ಗಳ ವಿಭಾಗದಲ್ಲಿ ಮೈಕ್ರೋಮ್ಯಾಕ್ಸ್ ದೊಡ್ಡ ಗ್ರಾಹಕರನ್ನು ಪಡೆದಿದೆ. ಅದರಂತೆ ಈ ಫೋನ್ 32 MB RAM ಹಾಗೂ 32 MB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 1.77 ಇಂಚಿನ ಡಿಸ್‌ಪ್ಲೇ ಹೊಂದಿದೆ. ಉಳಿದಂತೆ ಈ ಫೋನ್‌ನಲ್ಲಿ 0.3MP ರಿಯರ್ ಕ್ಯಾಮೆರಾ, 800 mAh ಸಾಮರ್ಥ್ಯದ ಬ್ಯಾಟರಿ ಇದ್ದು, 44% ರಿಯಾಯಿತಿಯೊಂದಿಗೆ 826ರೂ.ಗಳಿಗೆ ಇದನ್ನು ಕೊಂಡುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಗುರು ಎಫ್‌ಎಮ್ ಪ್ಲಸ್ SM-B110E/D: ಈ ಸ್ಮಾರ್ಟ್‌ಫೋನ್ (Samsung Guru FM Plus SM-B110E/D) ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಫೋನ್ ಆಗಿದೆ. ಇದು 1.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 800 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ ಉತ್ತಮ ಬ್ಯಾಕಪ್ ನೀಡಲಿದೆ. ಈ ಫೋನ್ 2,099 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 1,949 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಲಾವಾ A1 ಜೋಶ್ BOL: ಈ ಫೋನ್(Lava A1 Josh BOL) 1.77 ಇಂಚಿನ ಕ್ವಾರ್ಟರ್ QVGA ಡಿಸ್‌ಪ್ಲೇ ಹೊಂದಿದ್ದು, 4 MB RAM ಹಾಗೂ 4 MB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 32 GB ವರೆಗೆ ಎಸ್‌ಡಿಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಲು ಅವಕಾಶ ಇದೆ. ಜೊತೆಗೆ ಈ ಫೋನ್ 1000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ದೀರ್ಘ ಬ್ಯಾಕಪ್ ನೀಡಲಿದೆ. ಈ ಫೋನ್ ಅನ್ನು ನೀವು 25% ರಿಯಾಯಿತಿಯೊಂದಿಗೆ 1,039 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.
ಜಿಯೋ B1 ಕೀಪ್ಯಾಡ್ ಫೋನ್ (UPI): ಈ ಫೋನ್ (Jio B1 Keypad Phone) ಯುಪಿಐ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದ್ದು, 2.4 ಇಂಚಿನ VGA ಡಿಸ್‌ಪ್ಲೇ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ 50 MB RAM ಹಾಗೂ 50 MB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 128 GB ಸ್ಟೋರೇಜ್ ವರೆಗೆ ವಿಸ್ತರಣೆಗೆ ಅವಕಾಶ ನೀಡುತ್ತದೆ. ಹಾಗೆಯೇ 0.3MP ರಿಯರ್ ಕ್ಯಾಮೆರಾ ಮತ್ತು 2000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯುವ ಮೂಲಕ ಉತ್ತಮ ಎನಿಸಿದೆ. ಈ ಫೋನ್ ಅನ್ನು ನೀವು 44% ರಿಯಾಯಿತಿಯೊಂದಿಗೆ 1,440 ರೂ.ಜಿಯೋ ಪ್ರೈಮಾ 4Gಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಜಿಯೋ ಪ್ರೈಮಾ 4G: ಈ ಫೋನ್ (Jio Prima 4G) 2.4 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 500 MB RAM ಹಾಗೂ 4 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಇದರೊಂದಿಗೆ 0.3MP ರಿಯರ್ ಕ್ಯಾಮೆರಾ ಹಾಗೂ 1800 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಮೂಲಕ ಫೀಚರ್ ಫೋನ್‌ಗಳ ವಿಭಾಗದಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಫೋನ್ ಎಂದು ಕರೆಸಿಕೊಂಡಿದೆ. ಈ ಫೋನ್ ಅನ್ನು 27% ರಿಯಾಯಿತಿಯೊಂದಿಗೆ ನೀವು 2,897 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








