Home
ಸುದ್ದಿಜಾಲ

KFCಯ ಈ ಡಿವೈಸ್‌ನಲ್ಲಿ ಗೇಮಿಂಗ್ ಜೊತೆಗೆ ಚಿಕನ್ ಸಹ ಬಿಸಿ ಮಾಡಬಹುದು!

ಪ್ರಸ್ತುತ ದೈನಂದಿನ ಅಗತ್ಯ ಕೆಲಸಗಳಿಗೆ ಉಪಯುಕ್ತ ಸೇರಿದಂತೆ, ಗೇಮಿಂಗ್, ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚುತ್ತ ಸಾಗಿದೆ. ಅವುಗಳಲ್ಲಿ ಗೇಮಿಂಗ್ ಕ್ಷೇತ್ರದ ಹೊಸ ಸಾಧನಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಕ್ರಂಚಿ ಚಿಕನ್/ಸ್ನ್ಯಾಕ್ಸ್‌ಗಳಿಂದ ಜನಪ್ರಿಯವಾಗಿರುವ ಕೆಎಫ್‌ಸಿ ಸಂಸ್ಥೆಯು ಚಿಕನ್ ಬಿಸಿ ಮಾಡುವ ಗೇಮಿಂಗ್ ಕನ್ಸೋಲ್‌ ಡಿವೈಸ್‌ ಅನ್ನು ಅನಾವರಣ ಮಾಡಿ ಗೇಮಿಂಗ್ ವಲಯದಲ್ಲಿ ದೊಡ್ಡ ಅಚ್ಚರಿ ಮೂಡಿಸಿದೆ.

KFCಯ ಈ ಡಿವೈಸ್‌ನಲ್ಲಿ ಗೇಮಿಂಗ್ ಜೊತೆಗೆ ಚಿಕನ್ ಸಹ ಬಿಸಿ ಮಾಡಬಹುದು!

ಹೌದು, ಜನಪ್ರಿಯ ಫಾಸ್ಟ್‌ ಪುಡ್‌ ಚೈನ ಕೆಎಫ್‌ಸಿ ಸಂಸ್ಥೆಯು ಇದೀಗ ಹೊಸದಾಗಿ ಗೇಮಿಂಗ್ ಕನ್ಸೋಲ್ ಡಿವೈಸ್‌ ಅನ್ನು ಪರಿಚಯಿಸಿದೆ. ಈ ನೂತನ ಡಿವೈಸ್‌ನಲ್ಲಿ ಗೇಮಿಂಗ್ ಜೊತೆಗೆ ಚಿಕನ್ ಸಹ ಬಿಸಿ ಮಾಡಬಹುದಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಕನ್ಸೋಲ್ ಅನ್ನು ಜಾಗತಿಕ ಯಂತ್ರಾಂಶ ತಯಾರಕರಿಂದ ವಿನ್ಯಾಸಗೊಳಿಸಲಾಗಿದೆ ಮತ್ತು ಇತರ ಗೇಮಿಂಗ್ ಯಂತ್ರಗಳಂತೆ ಉನ್ನತ ಮಟ್ಟದ ಆಟಗಳನ್ನು ಆಡಬಹುದು ಎಂದು ಕಂಪನಿ ಹೇಳಿದೆ.

KFCಯ ಈ ಡಿವೈಸ್‌ನಲ್ಲಿ ಗೇಮಿಂಗ್ ಜೊತೆಗೆ ಚಿಕನ್ ಸಹ ಬಿಸಿ ಮಾಡಬಹುದು!

ಇನ್ನು ಈ ಕನ್ಸೋಲ್ ಅನ್ನು ತೈವಾನೀಸ್ ಕಂಪ್ಯೂಟರ್ ಹಾರ್ಡ್‌ವೇರ್ ತಯಾರಕ ಕೂಲರ್ ಮಾಸ್ಟರ್ ವಿನ್ಯಾಸಗೊಳಿಸಿದೆ. ಇದು ಗೇಮಿಂಗ್ ಕೀಬೋರ್ಡ್‌ಗಳು, ಕುರ್ಚಿಗಳು, ಮಾನಿಟರ್‌ಗಳು ಮತ್ತು ಹೆಚ್ಚಿನದನ್ನು ರಚಿಸುತ್ತಿದೆ. ಕೆಎಫ್‌ಸಿ ತನ್ನ ಹೊಸ ಕನ್ಸೋಲ್‌ನಲ್ಲಿ ಕಸ್ಟಮ್-ನಿರ್ಮಿತ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಅದು ಚಿಕನ್ ಚೇಂಬರ್ ಅನ್ನು ಬಿಸಿಯಾಗಿಡಲು ಅದರ ಘಟಕಗಳಿಂದ ಉತ್ಪತ್ತಿಯಾಗುವ ಶಾಖವನ್ನು ಬಳಸುತ್ತದೆ.

KFCಯ ಈ ಡಿವೈಸ್‌ನಲ್ಲಿ ಗೇಮಿಂಗ್ ಜೊತೆಗೆ ಚಿಕನ್ ಸಹ ಬಿಸಿ ಮಾಡಬಹುದು!

ಈ ಸಾಧನವು ಉನ್ನತ ಮಟ್ಟದ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಗೇಮಿಂಗ್ ಅನುಭವವನ್ನು ಉತ್ತಮಗೊಳಿಸುತ್ತದೆ. ಹಾಗೆಯೇ ಗೇಮಿಂಗ್ ಅನುಭವದ ಸಮಯದಲ್ಲಿ, ಊಟ ಬಿಸಿಯಾಗಿ ಇಡುವುದಕ್ಕೂ ಇದು ಸಹಕಾರಿಯಾಗಲಿದೆ ಎನ್ನಲಾಗಿದೆ. ಇನ್ನು ಕೆಎಫ್‌ಸಿ ಕನ್ಸೋಲ್ ಜಾಹೀರಾತು ಅಭಿಯಾನವನ್ನು ಪ್ರಾರಂಭಿಸಿದಾಗಿನಿಂದ, ಇದು ಕೆಎಫ್‌ಸಿ ಗೇಮಿಂಗ್ ಟ್ವಿಟರ್ ಪುಟದಲ್ಲಿ 11 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ.

Best Mobiles in India

English summary
KFC Launches Game Console That Keeps Your Chicken Warm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+